ಜಾವಗಲ್: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಾಂಪೌಂಡ್ ಒಡೆದು ತಿಂಡಿ ಗಾಡಿ ನೆಡೆಸುತ್ತಿರುವ ವಿಷಯ ಗ್ರಾಮಸ್ಥರಲ್ಲಿ ಹಾಗೂ ಶಾಲಾ ಶಿಕ್ಷಕರಲ್ಲಿ ಆತಂಕ ನಿರ್ಮಾಣವಾಗಿದೆ
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕಿ ಪ್ರಮೀಳಾ ಬೇಸರ ವ್ಯಕ್ತಪಡಿಸುತ್ತಿದ್ದಾರೆ ರಾಷ್ಟ್ರೀಯ ಹೆದ್ದಾರಿ ಮಧ್ಯ ಭಾಗದಿಂದ 40 ಮೀಟರ್ ಒಳಗೆ ಯಾವುದೇ ಗೂಡಂಗಡಿಗಳಿಗೆ ಅವಕಾಶ ನೀಡ ಬಾರದು ಹಾಗೂ ಶಾಲಾ ಸರಹದ್ದಿನಲ್ಲಿ ಅಂಗಡಿ ಮುಂಗಟ್ಟುಗಳು ನಿಯಮ ಬಾಹಿರವಾಗಿ ನೆಡೆಸಲು ಅವಕಾಶ ಇಲ್ಲದಿದ್ದರು ಕೂಡ ಸ್ಥಳೀಯ ಗ್ರಾಮ ಪಂಚಾಯತಿ ನಿಭಂದನೆಗಳನ್ನು ಮೀರಿ ತಿಂಡಿ ಗಾಡಿಗಳಿಗೆ ಕಬಾಬ್ ಸೆಂಟರ್ ಗಳಿಗೆ ರಸ್ತೆ ಬದಿ ಅಂಗಡಿಗಳಿಗೆ ನಿಯಮ ಬಾಹಿರವಾಗಿ ಅವಕಾಶ ನೀಡಿದೆ, ಇದರಿಂದಾಗಿ
ಶಾಲಾ ಮಕ್ಕಳಿಗೆ ಸಾಕಷ್ಟು ತೊಂದರೆ ಆಗಿದೆ, ಅಂಗಡಿಗಳ ತ್ಯಾಜ್ಯವನ್ನು ರಾಷ್ಟ್ರೀಯ ಹೆದ್ದಾರಿಯ ಚರಂಡಿಗೆ ತುಂಬಿ ಗಬ್ಬು ವಾಸನೆ ಬರುತ್ತಿದೆ, ಪ್ಲಾಸ್ಟಿಕ್ ಬಾಟಲಿಗಳನ್ನು ಚರಂಡಿಗೆ ಹಾಕಿ ಮಳೆ ಬಂದರೆ ಸಾಕು ಚರಂಡಿಯಲ್ಲಿ ಸರಿಯಾಗಿ ನೀರು ಹರಿಯದೆ ಶಾಲಾ ಪ್ರಾಂಗಣಕ್ಕೆ ನೀರು ಹರಿದು ಬರುತ್ತಿದೆ ಇದರಿಂದಾಗಿ ಶಾಲಾ ಆವರಣದಲ್ಲಿ ಮಳೆ ಬಂದು ಒಂದು ವಾರವಾದರು ನೀರು ಕಾಲಿಯಾಗದೆ ಡೆಂಗ್ಯೂ ಚಿಕನ್ ಗೂನ್ಯ, ಮಲೇರಿಯಗಳಂತ ಕಾಯಿಲೆಗೆ ಮಕ್ಕಳು ತುತ್ತಾಗುತ್ತಿದ್ದಾರೆ ಕಬಾಬ್ ಸೆಂಟರ್ ಗೆ ಬಂದವರು ಮಧ್ಯಪಾನ ಧೂಮಪಾನ ಮಾಡಿ ಬಾಟಲಿಗಳನ್ನು ಶಾಲಾ ಆವರಣಕ್ಕೆ ಎಸೆಯುತ್ತಿದ್ದಾರೆ ಇದರಿಂದಾಗೆ ಮಕ್ಕಳ ಮೇಲೆ ಅನೇಕ ದುಷ್ಪರಿಣಾಮಗಳು ಬೀರುತ್ತಿವೆ,ಕಬಾಬ್ ತಿಂದು ಬಿಸಾಡಿದ ಮೂಳೆಗಳನ್ನು ತಿನ್ನಲು ನಾಯಿಗಳು ಬಂದು ಅಲ್ಲೇ ಬೇಡು ಬಿಟ್ಟಿವೆ, ಅಲ್ಲದೆ ಶಾಲಾ ಆವರದ ಒಳಗೆ ವಿದ್ಯುತ್ ತಂತಿ ಕಂಬಗಳು ಕೂಡ ಹಾದು ಹೋಗಿದ್ದು ಪ್ರಾಕೃತಿಕ ವಿಕೋಪಗಳು ಎದುರಾದಗ ಶಾಲಾ ಕಟ್ಟಡದ ಮೇಲೆ ಬಿದ್ದು ವಿದ್ಯಾರ್ಥಿಗಳಿಗೆ ತೊಂದರೆ ಆದರೆ ಪೋಷಕರಿಗೆ ನಾವು ಏನು ಉತ್ತರ ನೀಡಬೇಕು? ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರೀಶೀಲಿಸಿದ್ದಾರೆ, ವಿದ್ಯುತ್ ಹಾಗೂ ಸ್ಥಳೀಯ ಪಂಚಾಯತಿ ಅಧಿಕಾರಿಗಳು ಸ್ಥಳ ಪರೀಶೀಲನೆ
ಮಾಡಿದ್ದರು ಕೂಡ ಯಾವುದೇ ಪ್ರಯೋಜನವಾಗಿಲ್ಲವೆಂದು ತಮ್ಮ ಅಳಲನ್ನು ತೊಡಿ ಕೊಂಡಿದ್ದಾರೆ ಯಾವುದೇ ಅವಘಡಗಳು ಸಂಭವಿಸುವ ಮುನ್ನ ಸಂಭಂದಪಟ್ಟ ಇಲಾಖೆಗಳು ಕ್ರಮವಹಿಸಲು ಈ ಸಂದರ್ಭದಲ್ಲಿ ಮನವಿ ಮಾಡಿದ್ದಾರೆ,
ಮಾಜಿ ಸೈನಿಕರಾದ ಸುಭೆದಾರ್ ಚಂದ್ರಪ್ಪ, ನಿವೃತ್ತ ಪೋಲಿಸ್ ಜೆ ಆರ್ ಪ್ರಭಾಕರ್ ಮಾತನಾಡಿ ರಂಗ ಮಂದಿರ ಸಂಪೂರ್ಣ ಶಿಥಿಲವಾಗಿದೆ ಸಾಕಷ್ಟು ಭಾರಿ ಸಂಭಂದಪಟ್ಟ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು
ಕೂಡ ಯಾವುದೇ ಪ್ರಯೋಜನವಾಗಿಲ್ಲ ಶಾಲಾ ವಿದ್ಯಾರ್ಥಿಗಳು ರಂಗ ಮಂದಿರ ಸುತ್ತ ಮುತ್ತ ಆಟ ಆಡುತ್ತಿರುತ್ತಾರೆ ಕಟ್ಟಡ ಶಿಥಿಲವಾಗಿರುವದರಿಂದ ಏನಾದರು ಅವಘಡ ಸಂಭವಿಸಿದರೆ ಯಾರು ಹೊಣೆ ಕೂಡಲೇ ಸಂಭಂದಪಟ್ಟ ಅಧಿಕಾರಗಳು ಸ್ಥಳ ಪರೀಶೀಲಿಸಿ ಕ್ರಮ ವಹಿಸಲು ಆಗ್ರಹಿಸಿದರು
ಶಾಲಾ ಆವರಣದ ಸುತ್ತ ಅನೇಕ ಸಮಸ್ಯೆಗಳಿದ್ದು ಕೂಡಲೇ ಸಂಭಂದಪಟ್ಟ ಇಲಾಖೆಯವರು ಸಮಸ್ಯೆ ಬಗೆಹರಿಸುತ್ತಾರ ,ಕಾದು ನೋಡ ಬೇಕಾಗಿದೆ, ಇತ್ತಿಚಿನ ದಿನಗಳಲ್ಲಿ ಶಾಲಾ ಕಾಂಪೌಂಡ್ ಸುತ್ತ ಗೂಡಂಗಡಿ ಪೆಟ್ಟಿಗೆ ಅಂಗಡಿ, ತರಕಾರಿ ಗಾಡಿಗಳು ಕಬಾಬ್, ಎಗ್ ಸೆಂಟರ್ ಗಾಡಿಗಳಿಂದ ಶಾಲಾ ಕಟ್ಟಡ ಅಂದವೇ ಮಾಸಿ ಹೋದಂತಾಗಿದೆ, ನಿರ್ಲಕ್ಷಕ್ಕೆ ರಾಷ್ಟ್ರೀಯ ಹೆದ್ದಾರಿ ಅಧಿಕಾರಗಳೆ ನೇರವಾಗಿ ಕಾರಣವೆಂದು ಸಾರ್ವಜನಿಕರು ದೂರುತ್ತಿದ್ದಾರೆ.
ಸರ್ಕಾರಿ ಮಕ್ಕಳ ಹಿತದೃಷ್ಟಿಯಿಂದ ಕೂಡಲೇ ಸಮಸ್ಯೆ ಬಗೆಹರಿಸುವಂತೆ ಪೋಷಕರು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.
- ಜಾವಗಲ್ ದಯಾನಂದ
Tags
ಅರಸೀಕೆರೆ