ಹೊಳೆನರಸೀಪುರ: ತಾಲೂಕಿನ ಕೆರಗೋಡು ಬಳಿ ಇರುವ ರಕ್ಷಿತ ಅರಣ್ಯ ಪ್ರದೇಶದಲ್ಲಿ ಮೂರು ವರ್ಷದ ಗಂಡು ಚಿರತೆಯ ಮೃತದೇಹ ಪತ್ತೆ ಯಾಗಿದೆ. ಮರ‍್ನಾಲ್ಕು ದಿನಗಳ ಹಿಂದೆಯೇ ಚಿರತೆ ಮೃತಪಟ್ಟಿರುವ ಶಂಕೆ ಇದ್ದು,ಸೋಮವಾರ ಗ್ರಾಮಸ್ಥರು ಜಾನುವಾರು ಮೇಯಿಸಲು ಹೋದಾಗ ಚಿರತೆ ಶವವಾಗಿರುವುದು ಗೊತ್ತಾಗಿದೆ. ಕೂಡಲೇ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿದು ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪಶು ವೈದ್ಯರು ಸ್ಥಳದಲ್ಲೇ ಮರಣೋತ್ತರ ಪರೀಕ್ಷೆ ನಡೆಸಿದರು. ನಂತರ ಅರಣ್ಯ ಇಲಾಖೆ ಸಿಬ್ಬಂದಿ ಅಲ್ಲೇ ಚಿರತೆಯ ಅಂತ್ಯಸAಸ್ಕಾರ
ನೆರವೇರಿಸಿದರು. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಚಿರತೆ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಮೇಲ್ನೋಟಕ್ಕೆ ಚಿರತೆಗಳ ನಡುವಿನ ಕಾದಾಟದಿಂದ ಅಥವಾ ವಿಷಾಹಾರ ಸೇವಿಸಿ ಚಿರತೆ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.

Tags
ಹೊಳೆನರಸೀಪುರ