ಶಾರ್ಟ್‌ ಸರ‍್ಕ್ಯೂಟ್ ಸ್ಥಳಕ್ಕೆ ಎಲೆಕ್ಟ್ರಿಕ್‌ ಇನ್ಸ್ಪೆಕ್ಟರ್ ಭೇಟಿ

ಹಾಸನ : ಹಿಮ್ಸ್ ಆಸ್ಪತ್ರೆಯ ನವಜಾತು ಶಿಶುಗಳ ಐಸಿಯು ವರ‍್ಡ್ನಲ್ಲಿ ವಿದ್ಯುತ್ ಶಾರ್ಟ್‌ ಸರ‍್ಕ್ಯೂಟ್ ಹಿನ್ನೆಲೆ, ಘಟನಾ ಸ್ಥಳಕ್ಕೆ ಎಲೆಕ್ಟಿçಕಲ್ ಇನ್ಸ್ಪೆಕ್ಟರ್ ಭೇಟಿ ಪರಿಶೀಲನೆ ನಡೆಸಿದರು.

ಶಾರ್ಟ್‌ ಸರ‍್ಕ್ಯೂಟ್ ನಂತರ ಹೊಗೆ ಕಾಣಿಸಿಕೊಂಡು ಆತಂಕ ಸೃಷ್ಟಿಸಿದ್ದ ಐಸಿಯುಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಎಲೆಕ್ಟಿçಕಲ್ ಇನ್ಸ್ಪೆಕ್ಟರ್ ಆಶಾ ಅವರು, ಅಂದು ರ‍್ತವ್ಯದಲ್ಲಿದ್ದ ವೈದ್ಯ ಹಾಗೂ ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಂಡರು. 

ಅಲ್ಲದೆ ಘಟನೆಗೆ ಕಾರಣ ಏನಿರಬಹುದು ಎಂಬುದರ ಬಗ್ಗೆಯೂ ಅವಲೋಕನ ನಡೆಸಿದರು. ಮುಂದೆ ಹೀಗಾಗದಂತೆ ಯಾವ ರೀತಿಯ ಮುನ್ನೆಚ್ಚರಿಕೆ ವಹಿಸಬೇಕು ಎಂಬ ಬಗ್ಗೆ ಸಲಹೆ ಸೂಚನೆ ನೀಡಿದರು. ಸ್ಟೆಬಲೈಸರ್‌ನಿಂದ ಸಮಸ್ಯೆಯಾಗಿದೆ. ಉಳಿದಂತೆ ಪವರ್ ಸಪ್ಲೇ ಸೇರಿ ಎಲ್ಲವೂ ಸರಿಯಾಗಿದೆ. ಜೊತೆಗೆ ನರ‍್ವಹಣೆಯಲ್ಲಿ ಯಾವುದೇ ಲೋಪ ಕಂಡು ಬಂದಿಲ್ಲ ಎಂದು ಆಶಾ ತಿಳಿಸಿದರು.

ಭಾನುವಾರ ನವಜಾತ ಶಿಶುಗಳ ವರ‍್ಡ್ನಲ್ಲಿ ಏಕಾಏಕಿ ಶಾರ್ಟ್‌ ಸರ‍್ಕ್ಯೂಟ್ಆ ಗಿ ಹೊಗೆ ಕಾಣಿಸಿಕೊಂಡಿತ್ತು. ಇದನ್ನು ತಿಳಿದ ಸಿಬ್ಬಂದಿ ಹಾಗೂ ವೈದ್ಯರು ಸಮಯ ಪ್ರಜ್ಞೆ ಮೆರೆದು ಅಲ್ಲಿದ್ದ ಮಕ್ಕಳನ್ನು ಬೇರೆಡೆ ಸ್ಥಳಾಂತರ ಮಾಡುವ ಸಂಭಾವ್ಯ ಅನಾಹುತವನ್ನು ತಪ್ಪಿಸಿದ್ದರು. 

ಇದೀಗ ದುರಸ್ತಿ ಕರ‍್ಯ ಬಹುತೇಕ ಪರ‍್ಣಗೊಂಡಿದ್ದು, ದಿಢೀರ್ ಮನೆ ಮಾಡಿದ್ದ ಆತಂಕ ದೂರವಾಗಿದೆ. ಈ ವೇಳೆ ನಗರಠಾಣೆ ಪಿಎಸ್‌ಐ ಕುಮಾರ್ ಮೊದಲಾದವರಿದ್ದರು.

Post a Comment

Previous Post Next Post