ಆಲೂರು : ಪತ್ರಿಕಾಗೋಷ್ಠಿಯಲ್ಲಿಂದು ಮಾತಾನಾಡಿದ ಅವರು ನಮ್ಮ ರೈತರ ಪರವಾಗಿ ನಾವು ಮುಖ್ಯಮಂತ್ರಿಗಳಿಗೆ ಹಾಗೂ ಸರ್ಕಾರಕ್ಕೆ ಕೇಳುವುದೆಂದರೆ ಸ್ತ್ರೀಯರಿಗೆ ಉಚಿತ ಬಸ್ ಪ್ರಯಾಣ ಹಾಗೂ ಮನೆ ಒಡತಿಗೆ ಎರಡು ಸಾವಿರ ಹಣವನ್ನು ನೀಡುತ್ತಿದ್ದೀರಿ ಆದರೆ ನಮ್ಮ ರೈತರಿಗಾಗಿ ನೀವು ಏನು ಮಾಡಿದ್ದೀರಿಯೆಂದು ಪ್ರಶ್ನೆಮಾಡಿದರು, ರೈತರೂ ಬೆಳೆದ ಬೆಳೆಗೆ ಸರಿಯಾದ ಬೆಲೆಕೊಡಿ ರಸಗೊಬ್ಬರ ಹಾಗೂ ಬಿತ್ತನೆ ಬೀಜಗಳ ಬೆಲೆಯನ್ನು ಕಡಿಮೆ ಮಾಡಿ ನಮ್ಮ ರೈತರಿಗೋಸ್ಕರ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಏನು ಮಾಡಿಲ್ಲ ಅವರ ಕೊಡುಗೆ ನಮ್ಮ ರೈತರಿಗೆ ಶೂನ್ಯ ಹಾಗಾಗಿ ರೈತರ ಬೇಡಿಕೆಗಳನ್ನು ಈಡೇರೀಸದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು,
ರೈತ ಸಂಘದ ಅಧ್ಯಕ್ಷ ಮೋಹನ್ ಕಾಡ್ಲುರು ಮಾತಾನಾಡಿ ನಮ್ಮ ಮಲೆನಾಡು ಭಾಗದಲ್ಲಿ ಈ ಬಾರಿ ಮಳೆ ಕಡಿಮೆ ಪ್ರಮಾಣದಲ್ಲಾಗಿದ್ದು ರೈತರು ತುಂಬಾ ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ ಈ ಜೂಲೈ ತಿಂಗಳಲ್ಲಿ ಅಕಾಲಿಕ ಮಳೆಯಾಗಿದ್ದು ಬೆಳೆಗೆ ಸಂಪೂರ್ಣ ಒಡೆತಬಿದ್ದಿದೆ
ರೈತನ ಪರಿಸ್ಥಿತಿ ಹೇಗಿದೆಯೆಂದರೆ ಬೆಳೆ ಬಂದರೆ ಮಳೆ ಇರುವುದಿಲ್ಲ ಮಳೆ ಬಂದರೆ ಬೆಳೆ ಇರುವುದಿಲ್ಲ ಇಲ್ಲಿಯ ರೈತರ ಪರಿಸ್ಥಿತಿ ಹೇಳಾತೀರಾದಾಗಿದೆ ಅದರಲ್ಲೂ ನಮ್ಮ ಭಾಗದಲ್ಲಿ ಆನೆ ಹಾವಳಿ ಹೆಚ್ಚಾಗಿದ್ದು ಬೆಳೆದಂತ ಬೆಳೆಯನ್ನು ಹಾಳು ಮಾಡುತ್ತಿದೆ ಹಾಗಾಗಿ ನಮ್ಮ ಭಾಗದಲ್ಲಿರುವ ಅತಿವೃಷ್ಟಿ ಹಾಗೂ ಆನೆ ಹಾವಳಿಯಿಂದ ಹಾಳಾದ ರೈತರಿಗೆ ಸರ್ಕಾರದಿಂದ ಹೆಚ್ಚಿನ ಸಹಾಯಧನ ನೀಡಬೇಕು ಮತ್ತು ನಮ್ಮ ಭಾಗದಲ್ಲಿ ವಿದ್ಯುತ್ ಸಮಸ್ಯೆ ಹೆಚ್ಚಿದ್ದು ಅದನ್ನು ಕೂಡ ಬಗೆಹರಿಸಿಕೊಡಬೇಕು ರೈತರನ್ನು ಕಡೇಗಣಿಸದೆ ಆದಷ್ಟು ರೈತರಿಗೆ ನ್ಯಾಯ ಒದಗಿಸಿಕೂಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದರು
ತಾಲ್ಲೂಕು ಮಹಿಳಾ ಅಧ್ಯಕ್ಷೆ ಲತಾ ಮಾತಾನಾಡಿ ಕಾಂಗ್ರೆಸ್ ಸರ್ಕಾರದ ಯೋಜನೆಗಳಿಂದ ಮಹಿಳೆಯರು ದಿಕ್ಕು ತಪ್ಪುತ್ತಿದ್ದಾರೆ ಕಾರಣ ಉಚಿತ ಬಸ್ ಪ್ರಯಾಣದಿಂದ ಮನೆಯಲ್ಲಿ ಮನೆಯ ಯಜಮಾನನಿಗೆ ಹೇಳದೆ ಎಲ್ಲಂದರಲ್ಲಿ ಹೋಗುತ್ತಿದ್ದಾರೆ ಇದರಿಂದ ಮನೆಯಲ್ಲಿ ಗಂಡ ಹೆಂಡತಿಗೆ ಮನೆಯಲ್ಲಿ ದಿನನಿತ್ಯ ಜಗಳ ಉಂಟಾಗುತ್ತಿದೆ ಅದರಲ್ಲೂ ಗ್ರಾಮೀಣ ಭಾಗದ ಮಹಿಳೆಯರು ಪ್ರೀ ಎಂದು ತಿರುಗಾಡುತ್ತಿದ್ದಾರೆ ಇದರಿಂದ ಮನೆ ಹಾಳಗುವಂತ ಪರಿಸ್ಥಿತಿ ಉಂಟಾಗಿದ್ದು ಸರ್ಕಾರದವರು ಇವೆಲ್ಲವನ್ನು ಗಮನದಲ್ಲಿಟ್ಟುಕೊಂಡು ಯೋಚಿಸಿ ಘೋಷಿಸಿದ್ದಿದ್ದಾರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲವೆಂದರೂ.
ಪತ್ರಿಕಾಗೋಷ್ಠಿಯಲ್ಲಿ ಶ್ರೀ ಕೆಂಚಾಂಬಿಕೆ ನೇಗಿಲಯೋಗಿ ರೈತ ಬಂದು ಆತ್ಮ ರಕ್ಷಕ ಸಂಘದ ತಾಲ್ಲೂಕು ಅಧ್ಯಕ್ಷ ಮೋಹನ್ ಕಾಡ್ಲರು. ಉಪಾಧ್ಯಕ್ಷ ದಾಸೇಗೌಡ ಚಿಗಳೂರು. ಕಾರ್ಯದರ್ಶಿ ಜಯಣ್ಣ ಹೈದುರು, ತಾಲ್ಲೂಕು ಮಹಿಳಾ ಅಧ್ಯಕ್ಷೆ ಲತಾ ಯೋಗೇಶ್. ಮಗ್ಗೆ ಹೋಬಳಿ ಉಪಾಧ್ಯಕ್ಷ ದೀಪಕ್ ಇದ್ದರು