ಚನ್ನರಾಯಪಟ್ಟಣ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆ

 ಚನ್ನರಾಯಪಟ್ಟಣ: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನವಿಲೆ ಗ್ರಾಮದ ನಾಗೇಶ್ವರ ದೇವಾಲಯದ ಸಮುದಾಯದ ಭವನದಲ್ಲಿ ಏರ್ಪಡಿಸಿದ ಪತ್ರಿಕಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ  ಶಾಮಸುಂದರ್ ಕೆ ಅಣ್ಣೇನಹಳ್ಳಿ ಹಾಗೂ ಚನ್ನೇಗೌಡರನ್ನು ಚನ್ನರಾಯಪಟ್ಟಣ ತಾಲ್ಲೂಕು ಕಾರ್ಯನಿರತ ಪತ್ರಕರ್ತ ಸಂಘದಿಂದ ಸನ್ಮಾನಿಸಲಾಯಿತು, ಶಾಮಸುಂದರ್ ಕಳೆದ ಎರಡು ದಶಕದಿಂದ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದು ಉಷಾಕಿರಣ, ಕರುನಾಡ ಸಂಜೆ, ಉದಯವಾಣಿ, ಈಟಿವಿ ನ್ಯೂಸ್, ವಿಜಯವಾಣಿ, ದಿಗ್ವಿಜಯ ನ್ಯೂಸ್, ಪಬ್ಲಿಕ್ ನ್ಯೂಸ್ ಸೇರಿದಂತೆ ಹಲವು ಪತ್ರಿಕೆ ಹಾಗೂ ದೃಶ್ಯ ಮಾದ್ಯಮದಲ್ಲಿ ಸೇವೆ ಸಲ್ಲಿಸಿದ ಇವರ ಸೇವೆಯನ್ನು ಗುರುತಿಸಿ ನಾಗರನವಿಲೆ ಗ್ರಾಮದಲ್ಲಿ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ  ಅಭಿನಂದಿಸಲಾಯಿತು, ಚನ್ನೇಗೌಡ ನುಗ್ಗೇಹಳ್ಳಿ ಹೋಬಳಿ ಪತ್ರಕರ್ತರಾಗಿ ಎರಡುವರೆ ದಶಕದಿಂದ ಸೇವೆ ಸಲ್ಲಿಸುತ್ತಿದ್ದು ಅವರನ್ನು ಈ ವೇಳೆ ಸನ್ಮಾನಿಸಲಾಯಿತು,


ಶಾಸಕ ಬಾಲಕೃಷ್ಣ, ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಅಣತಿ ಆನಂದ್ ಕುಮಾರ್, ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷ ಶಿವಾನಂದ ತಗಡೂರು, ಜಿಲ್ಲಾಧ್ಯಕ್ಷ ಬಾಳುಗೋಪಾಲ್, ಉಪಾಧ್ಯಕ್ಷ ವೇಣು ಕುಮಾರ್, ರಾಷ್ಟ್ರೀಯ ಸಮಿತಿ ಸದಸ್ಯ ಪ್ರಕಾಶ್, ಕಾರ್ಯದರ್ಶಿ ಬನವಾಸೆ ಮಂಜು, ತಾಲ್ಲೂಕು ಅಧ್ಯಕ್ಷ ಸಿದ್ದರಾಜು, ಅರ್ಚಕ ಸಂಘದ ಅಧ್ಯಕ್ಷ ಶ್ರೀಧರ್ ಮೂರ್ತಿ, ಎಪಿಎಂಸಿ ಮಾಜಿ ಅಧ್ಯಕ್ಷ ಶಿವಣ್ಣ, ವೀರಶೈವ ಸಮಾಜದ ಅಧ್ಯಕ್ಷ ಪರಮೇಶ್, ಮೊದಲಾದವರು ಇದ್ದರು.

Post a Comment

Previous Post Next Post