ಯುವ ಸಮುದಾಯದ ಮೇಲೆ ದುಷ್ಪರಿಣಾಮ ಬೀರುತ್ತಿರುವ ಆನ್ಲೈನ್ ಗೇಮ್ ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಒತ್ತಾಯಿಸಿ, ತಾಲೂಕು ರೈತ ಸಂಘ ಮುಖಂಡರು ಸೋಮವಾರ ತಾಲೂಕು ಕಚೇರಿ ಮುಂದೆ ಧರಣಿ ನಡೆಸಿದರು. ಸಂಘಟನೆಯ ರಾಜ್ಯ ಸಂಚಾಲಕ ಕನಕಂಚೆ ನಹಳ್ಳಿ ಪಟೇಲ್ ಪ್ರಸನ್ನ ಕುಮಾರ್ ಮಾತನಾಡಿ ಆನ್ಲೈನ್ ಯೋಜನೆ ಚಟಕ್ಕೆ ಬಿದ್ದಿರುವ ಕೆಲ ಮಕ್ಕಳು, ಯುವಕರು ,ಯುವತಿಯರು ಅಡ್ಡದಾರಿ ಹಿಡಿಯುವ ಜೊತೆಗೆ ಪ್ರಾಣಕ್ಕೂ ಸಂಚಕಾರ ತಂದುಕೊಳ್ಳುತ್ತಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಪ್ರಧಾನಿ ನರೇಂದ್ರ ಮೋದಿ ಇಂತಹ ಬೆಳವಣಿಗೆಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು. ಗ್ರೇಡ್ -2 ತಹಸಿಲ್ದಾರ್ ಪಾಲಾಕ್ಷ ಅವರ ಮೂಲಕ ಪ್ರಧಾನಿ ಹಾಗೂ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಹೊಸೂರ್ ಗಂಗಾಧರ್,ಅಯೂಬ್ ಪಾಷಾ, ಏಜಾಜ್ ಪಾಷ, ಮಹಮ್ಮದ್ ದಸ್ತಗಿರ್, ಶಶಿಕುಮಾರ್ ,ಅಬ್ದುಲ್ ಕುನ್ನಿ, ಶಂಕರಣ್ಣ, ಕಲಾವತಿ ಸೇರಿ ಹಲವರು ಉಪಸ್ಥಿತರಿದ್ದರು.
Tags
ಅರಸೀಕೆರೆ