ಸಕಲೇಶಪುರ : ಜಿಯೋ ಭಾರತ್‌ ಎಂಬ ಹೊಸ ಫೀಚರ್‌ ಫೋನ್‌ ಬಿಡುಗಡೆ.

 ಸಕಲೇಶಪುರ : ಸ್ಮಾರ್ಟ್‌ಫೋನ್‌ ಖರೀದಿಸಲು ಸಾಧ್ಯವಾಗದವರಿಗೆ ನೆರವಾಗುವ ಉದ್ದೇಶದಿಂದ ಮುಕೇಶ್‌ ಅಂಬಾನಿ ಒಡೆತನದ ರಿಲಯನ್ಸ್‌ ಜಿಯೋ ಇನ್ಫೋಕಾಮ್‌ ಕಂಪನಿಯು ಈಗ, ‘ಜಿಯೋ ಭಾರತ್‌’ ಎಂಬ 4ಜಿ ಫೀಚರ್‌ ಫೋನ್‌ ಅನ್ನು ಹೊರತಂದಿದೆ. 4ಜಿ ಇಂಟರ್‌ನೆಟ್‌ ಅನ್ನು ಬಳಸಬಹುದಾದ ಈ ಜಿಯೋ ಭಾರತ್‌ ಫೋನ್‌ ದರ ಕೇವಲ 999 ರೂಪಾಯಿ ಆಗಿದ್ದು, ಇಂದು ಈ ಫೋನ್‌ನ್ನು ಕಂಪನಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು.



ಡಿಜಿಟಲ್‌ ಸೇವೆಗಳ ಶಕ್ತಿಯೊಂದಿಗೆ ಪ್ರತಿ ಭಾರತೀಯರನ್ನೂ ಸಬಲೀಕರಣಗೊಳಿಸುವ ಉದ್ದೇಶದಿಂದ ಮುಕೇಶ್‌ ಅಂಬಾನಿ ಒಡೆತನದ ರಿಲಯನ್ಸ್‌ ಜಿಯೋ ಇನ್ಫೋಕಾಮ್‌ ಕಂಪನಿಯು ಈಗ, ‘ಜಿಯೋ ಭಾರತ್‌’ ಎಂಬ 4ಜಿ ಫೀಚರ್‌ ಫೋನ್‌ ಅನ್ನು ಸಿದ್ಧಪಡಿಸಿದೆ.

ವಿಶೇಷವಾಗಿ ಸ್ಮಾರ್ಟ್‌ಫೋನ್‌ ಖರೀದಿಸಲು ಸಾಧ್ಯವಾಗದವರಿಗೆ ಇದು ನೆರವಾಗಲಿದೆ.ಇಂದು ಪಟ್ಟಣದ ಮೊಬೈಲ್ ಅಂಗಡಿಯೊಂದರಲ್ಲಿ ಅಧಿಕೃತವಾಗಿ ಉದ್ಘಾಟಿಸಲಾಯಿತು.

ವಿಶೇಷವಾಗಿ ಅಂಗವಿಕಲರೋಬ್ಬರಿಗೆ ಈ ಜಿಯೋ ಭಾರತ್ ಫೋನನ್ನು ಉಚಿತವಾಗಿ ನೀಡಲಾಯಿತು. ವೃತ್ತ ನಿರೀಕ್ಷಕ ಚೈತನ್ಯವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಸಕಲೇಶಪುರ ಜಿಯೋ ವಿತರಕರಾದ ಜೀವನ್ ಗೌಡ ಬಾಳ್ಳುಪೇಟೆ ಹಾಗೂ ಜಿಯೋ ಮ್ಯಾನೇಜರ್ ಲೋಕೇಶ್ ಹಾಗೂ ಶರತ್ ಉಪಸ್ಥಿತರಿದ್ದರು

Post a Comment

Previous Post Next Post