ಹಾಸನ: ಜಾನಪದ ಸಂಗಮ ಎಂದೇ ಹೆಸರಾಗಿದ್ದ ಡಾ.ಎಸ್.ಕೆ.ಕರೀಂಖಾನರು ಜಾನಪದ ಗೀತೆಗಳ ಗಾಯನ ಹಾಗೂ ಸಂಗ್ರಹದಿAದ 40-50ರ ದಶಕಗಳಲ್ಲಿ ಮನೆ ಮಾತಾಗಿದ್ದರು ಎಂದು ನಿವೃತ್ತ ವಾಣಿಜ್ಯ ತೆರಿಗೆ ಉಪ ಅಯುಕ್ತರು, ರಂಗಕರ್ಮಿ ಹನ್ಯಾಳು ಹೆಚ್.ಎಸ್.ಗೊವಿಂದಗೌಡರು ತಿಳಿಸಿದರು.
ಶ್ರೀ ಕಟ್ಟೇಮನೆ ನಾಗೇಂದ್ರ ಸಮಾಜ ಸೇವಕರು, ತಣ್ಣಿರುಹಳ್ಳ ಇವರ ಪ್ರಾಯೋಜನೆಯಲ್ಲಿ ಹಾಸನದ ಮನೆ ಮನೆ ಸಾಹಿತ್ಯ ಸಂಘಟನೆಯ 307ನೇ ಕಾರ್ಯಕ್ರಮದಲ್ಲಿ ಡಾ. ಎಸ್.ಕೆ.ಕರೀಂಖಾನ್ ಬದುಕು ಬರಹ ಕುರಿತು ಮಾತನಾಡುತ್ತಾ ಜನಪದ, ಸಿನಿಮಾ, ನಾಟಕ ಈ ಮೂರು ಕ್ಷೇತ್ರಗಳ ಸಾಧಕರು. 10 ವರ್ಷ ಮದ್ರಾಸಿಗೆ ಹೋದರು. ಚಲನಚಿತ್ರ ಕ್ಷೇತ್ರದಲ್ಲಿ ಬೆಂಗಳೂರಿಗೆ ಬಂದು 26 ಚಲನಚಿತ್ರಗಳಿಗೆ ಸಾಹಿತ್ಯ ಬರೆದರು. 1949ರಲ್ಲಿ ಸಾಹಿತ್ಯ ಸಾಮ್ರಾಜ್ಯ ನಾಟಕ ಮಂಡಳಿ ಸೇರಿ ನಿರ್ದೋಷಿ ಸೇರಿದಂತೆ 16 ನಾಟಕಗಳನ್ನು ಬರೆದಿದ್ದಾರೆ.ಇಂತಹ ಮಹನೀಯರಿಗೆ ಜೀವನ
ದಲ್ಲಿ ಕೊನೆಗೂ ಒಂದು ಮನೆಯೂ ಸಿಗಲಿಲ್ಲ ಸರ್ಕಾರವು ಗಮನಿಸಲಿಲ್ಲ ಎಂದು ಗೋವಿಂದಗೌಡರು ವಿಷಾದಿಸಿದರು. ಕಾರ್ಯಕ್ರಮದಲ್ಲಿ ಸಾಹಿತಿ ಗೊರೂರು ಅನಂತರಾಜು ಮಾತನಾಡಿ ಕರೀಂಖಾನರು ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದಾಗಲೇ ಜನಪದ ಗೀತೆಗಳತ್ತ ಆಕರ್ಷಿತರಾದರು. ಕರೀಂಖಾನರು ಜನಪದ ಗೀತೆಗಳನ್ನು ಸಂಗ್ರಹಗಳನ್ನು ಪ್ರಕಟಿಸುವ ಕಾಲಕ್ಕೆ ಜನಪದದ ಇತರೆಲ್ಲ ಪ್ರಕಾರಗಳಿಗಿಂತ ಗೀತೆಗಳ ಪ್ರಕಾರವೇ ಸಂಗ್ರಾಹಕರನ್ನು ಮುಖ್ಯವಾಗಿ ಆಕರ್ಷಿಸಿತ್ತು.
ಜನಪದ ಗೀತೆಗಳ ಸುಮಾರು ಒಂಭತ್ತು ಚಿಕ್ಕ ಚಿಕ್ಕ ಸಂಗ್ರಹಗಳನ್ನು 50-60ರ ದಶಕಗಳಲ್ಲಿ ಪ್ರಕಟಿಸಿದರು. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿ ಅವರ ಅವಧಿಯಲ್ಲಿ ಅದುವರೆಗೆ ಅಜ್ಞಾತವಾಗಿದ್ದ ಗಿರಿಜನರ ಸಂಸ್ಕೃತಿಯ ಅಧ್ಯಯನ, ಅವರ ಕಲೆಗಳ ದಾಖಲಾತಿ ಅವರ ಪರಿಸರದಲ್ಲಿಯೇ ಚಿತ್ರೀಕರಿಸುವ ಯೋಜನೆ ರೂಪಿಸಿದರು. ಅರಸೀಕರೆಯಲ್ಲಿ ನಡೆದ 3ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದು ಇಲ್ಲಿ ಕವಿಗೋಷ್ಠಿಯಲ್ಲಿ ತಾನು ಪಾಲ್ಗೊಂಡಿದ್ದನ್ನು ಗೊರೂರು ಅನಂತರಾಜು ಸ್ಮರಿಸಿದರು.
ಕವಿಗೋಷ್ಠಿಯಲ್ಲಿ ಲಕ್ಷಿö್ಮÃದೇವಿ ದಾಸಪ್ಪ, ರೇಖಾ ಪ್ರಕಾಶ್, ಎನ್.ಎಲ್.ಚನ್ನೇಗೌಡ, ಮಲ್ಲೇಶ್ ಜಿ. ಕೆ.ಎನ್.ಚಿದಾನಂದ, ಜಿ.ಪಿ.ಅಣ್ಣಾಜಪ್ಪ ಗುಂಜೇವು, ಗೊರೂರು ಅನಂತರಾಜು ಕವಿತೆ ವಾಚಿಸಿದರು. ಡಾ.ಬರಾಳು ಶಿವರಾಮ್ ಅವರು ಹನ್ಯಾಳು ಪ್ರಕಾಶನನದ ಎಲ್ಲಮ್ಮ ದಕ್ಷಿಣ ಭಾರತದ ದೇವತೆ ಪುಸ್ತಕ ಕುರಿತು ಮಾತನಾಡಿದರು. ತತ್ವಪದ ಗಾಯಕ ಯೋಗೇಂದ್ರ ದುದ್ದ ಕರೀಂಖಾನ್ ಸಂಗ್ರಹದ ಜನಪದ ಗೀತೆ ಹಾಡಿದರು. ಮಂಜುಳ ಕುಮಾರಸ್ವಾಮಿ ಜನಪದ ಗೀತೆ, ಹೂವಿನಹಳ್ಳಿ ಕಾವಲು ಗುಂಡುರಾಜ್, ಗಾಡೇನಹಳ್ಳಿ ಜಿ.ಎಂ.ಕೃಷ್ಣೇಗೌಡ, ಗಾಯಕ ಹೆಚ್.ಜಿ.ಗಂಗಾಧರ್ ಹಾಗೂ ಹೆಚ್.ಎಸ್.ಗೋವಿಂದಗೌಡರು ರಂಗಗೀತೆಗಳಿAದ ರಂಜಿಸಿದರು. ರಂಗ ಸಂಗೀತ ಪರಿಷತ್ ಸಂಸ್ಥೆಯನ್ನು ಸ್ಥಾಪಿಸಿ ಯಶಸ್ವಿ ರಂಗಸAಗೀತ ಸಮ್ಮೇಳನ ಸಂಘಟಿಸಿದ, ಹಲವಾರು ಪೌರಾಣಿಕ ನಾಟಕಗಳನ್ನು ಪ್ರಕಟಿಸಿ. ರಂಗಗೀತೆಗಳ ಸಂಗ್ರಹ ಸಿಡಿಗಳನ್ನು ಹೊರತಂದ ರಂಗಭೂಮಿ ಕ್ಷೇತ್ರಕ್ಕೆ ತಮ್ಮದೇ ಕೊಡುಗೆಯನ್ನು ನೀಡಿದ ಹೆಚ್.ಎಸ್.ಗೋವಿಂದಗೌಡರನ್ನು ಮನೆ ಮನೆ ಕವಿಗೋಷ್ಠಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.