ಅರಸೀಕೆರೆ: ಶುಚಿತ್ವ ಮತ್ತು ಗುಣಮಟ್ಟದ ತಿನಿಸುಗಳಿಗೆ ಪ್ರಚಾರ ಬೇಕಿರುವುದಿಲ್ಲ ಸೀತಾ ಮಹಿಳಾ ಸಂಘದವರು ಈ ಒಂದು ಮೇಳವನ್ನು ಪ್ರತಿವರ್ಷ ಅಚ್ಚುಕಟ್ಟಾಗಿ ಆಯೋಜಿಸುತ್ತಾ ಬಂದಿದ್ದೀರಿ ಇಲ್ಲಿ ಹಣ ಗಳಿಕೆ ಮುಖ್ಯವಲ್ಲ ವಿವಿಧ ರೀತಿಯ ತಿನಿಸುಗಳನ್ನು ಕರಕುಶಲ ವಸ್ತುಗಳ ಸ್ಟಾಲ್ ಗಳನ್ನು ಹಾಕುವ ಮೂಲಕ ತಿನ್ನಿಸುಗಳ ತಯಾರಿಕೆ ಮತ್ತು ಕರಕುಶಲ ವಸ್ತುಗಳ ತಯಾರಿಕೆಯಲ್ಲಿ ನಿಮ್ಮ ನೈಪುಣ್ಯತೆಯನ್ನು ಇಲ್ಲಿ ತೋರಿದ್ದೀರಿ ಎಂದು ವಿಜಯಲಕ್ಷ್ಮಿ ಹೇಳಿದರು.
ಮೇಳದಲ್ಲಿ ಕೋಡುಬಳೆ ನಿಪ್ಪಟ್ಟು ಬಿಸಿ ಬಿಸಿ ದೋಸೆ ಚರ್ಮುರಿ
ಪಾನಿ ಪುರಿ ಸಿಹಿ ತಿನಿಸುಗಳು ಬಿಸಿ ಬಿಸಿ ಬಜ್ಜಿ, ಮಸಾಲ ರೊಟ್ಟಿ, ಗೌರಿ ಗಣೇಶ ಹಬ್ಬಕ್ಕೆ ಬೇಕಾಗುವ
ಹತ್ತಿಯ ಆಹಾರಗಳು, ಸಿರಿಧಾನ್ಯ ಪರಿಶುದ್ಧವಾದ ನೆಲಗಡಲೆಎಣ್ಣೆ ಮತ್ತು ಕೊಬ್ಬರಿ ಎಣ್ಣೆ ಹೀಗೆ ಹಲವಾರು
ತಿನಿಸುಗಳು ಗ್ರಾಹಕರನ್ನ ಆಕರ್ಷಿಸುತ್ತಿತ್ತು ಗ್ರಾಹಕರು ಬಂಧುಗಳೇ ಆಗಿರಲಿ ಸ್ನೇಹಿತರೆ ಆಗಿರಲಿ ಮಾರಾಟಗಾರರಂತೂ
ವ್ಯವಹಾರಿಕವಾಗಿಯೇ ವ್ಯವಹರಿಸಿದರು ಎಲ್ಲರಲ್ಲೂ ಏನೋ ಒಂದು ಸಂತೋಷ ಖುಷಿ ನಿರೀಕ್ಷೆಯಲ್ಲಿ ನಿರೀಕ್ಷಿಸಲಾಗದಷ್ಟು
ಗ್ರಾಹಕರ ಆಗಮನದಿಂದಾಗಿ ಕೆಲವು ಸ್ಟಾಲ್ ಗಳು. ಬೇಗನೆ ಮುಚ್ಚಿದವು ಮೋಡ ಕವಿದ
ತಂಪಾದ ವಾತಾವರಣ ಬಿಸಿ ಬಿಸಿ ತಿನ್ನಿಸುಗಳಿಗೆ ಪ್ರೋತ್ಸಾಹ ನೀಡಿದಂತಿತ್ತು