ಮಲಗಿದಲ್ಲಿಯೇ ಇಬ್ಬರು ಯುವಕರು ನಿಗೂಢ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ಹಾಸನ ತಾಲ್ಲೂಕಿನ ಹನುಮಂತಪುರ ಗ್ರಾಮದಲ್ಲಿ ನಡೆದಿದೆ.
ಮೂಲತಃ ಉತ್ತರ ಪ್ರದೇಶದ ನಯನಪುರ್ ಗ್ರಾಮದ ನಿವಾಸಿಗಳಾದ ನಬಾಬ್, ರಾಮ್ ಸಂಜೀವನ್ ಮೃತ ಯುವಕರು.
ಯುವಕರು ಕೆಲಸವನ್ನು ಅರಸಿ ಉತ್ತರ ಪ್ರದೇಶದಿಂದ ಹಾಸನಕ್ಕೆ ಬಂದಿದ್ದರು.
ತೀವ್ರ ಜ್ವರದಿಂದ ಬಳಲುತ್ತಿದ್ದ ಯುವಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಬಂದಿದ್ದರು. ಮನೆಗೆ ಬಂದ ಯವಕರು ಔಷಧಿ ಸೇವಿಸಿ ಮಲಗಿದ್ದವರು ಮೇಲಕ್ಕೆ ಎದ್ಧೇ ಇಲ್ಲ.
ಯುವಕರು ಬಾಗಿಲು ತೆರೆಯದಿದ್ದಾಗ ಮನೆ ಮಾಲೀಕರು ಬಾಗಿಲನನ್ನು ಒಡೆದಿದ್ದಾರೆ. ಪರಿಶೀಲನೆ ವೇಳೆ ಯವಕರು ಸಾವನ್ನಪ್ಪಿರುವುದು ಬಂದಿದೆ.
ಮಾಲೀಕರು ನೀಡಿದ ಮಾಹಿತಿಯ ಮೇರೆಗೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತದೇಹಗಳು ಹಾಸನದ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನೆಯಾಗಿವೆ.