ಬೇಲೂರು:-ಪುಷ್ಪಗಿರಿ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಸೋಮಶೇಖರ ಶಿವಾಚರ‍್ಯ ಮಹಾಸ್ವಾಮೀಜಿಗಳ ಜನ್ಮ ದಿನದ ಅಂಗವಾಗಿ ಹಳೇಬೀಡಿನ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಮಹಿಳಾ ಸಂಘದ ಸದಸ್ಯರು ಹಳೇಬೀಡಿನ ಐತಿಹಾಸಿಕ ಪ್ರಸಿದ್ದ ಶ್ರೀ ರಂಗನಾಥಸ್ವಾಮಿ ದೇಗುಲದ ಅವರಣದ ಸ್ವಚ್ಛತಾ ಕರ‍್ಯಕ್ಕೆ ಚಾಲನೆ ನೀಡುವ ಮೂಲಕ ಶ್ರೀಗಳ ಜನ್ಮದಿನದ ರ‍್ಥಪರ‍್ಣತೆಗೆ ಸಾಕ್ಷಿಯಾದರು.
ಈ ಸಂರ‍್ಭದಲ್ಲಿ ಮಾತನಾಡಿದ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಯೋಜನಾಧಿಕಾರಿ ವಿನುತಧನಂಜಯ್,ಕಳೆದ ೧೬ ರ‍್ಷದಲ್ಲಿ ಪುಷ್ಪಗಿರಿ ಮಠದ ಪೀಠಾಧಿಕಾರಿಗಳಾದ ಪೂಜ್ಯರು ಸಾಮಾಜಿಕ, ಧರ‍್ಮಿಕ, ಶೈಕ್ಷಣಿಕ,ಪರಿಸರ, ನೀರಾವರಿ ಸೇರಿದಂತೆ ಹತ್ತು ಹಲವು ಕ್ಷೇತ್ರದಲ್ಲಿ ಅದ್ವಿತೀಯ ಕೊಡುಗೆ ನೀಡಿದ್ದಾರೆ. ಅವರು ಪರಿಸರ ಕ್ಷೇತ್ರಕ್ಕೆ ನೀಡಿದ ಒತ್ತು ನಿಜಕ್ಕೂ ಅಗಮ್ಯವಾಗಿದೆ. ಸ್ವಚ್ಛತೆ ಮತ್ತು ನರ‍್ಮಲ್ಯಕ್ಕೆ ಅಪಾರವಾದ ಸೇವಾ ಕೋಡಗೆ ನೀಡಿದ್ದು, ಸ್ವತಃ ಕೃಷಿ ಕಾಯಕ ಕೈಗೊಳ್ಳುವ ಮೂಲಕ ಕೃಷಿ ಕ್ಷೇತ್ರದಲ್ಲಿ ಹೊರ ಚೈತನ್ಯ ಮೂಡಿಸಿ, ಸಾವಯವ ಕೃಷಿಯಲ್ಲಿ ಅಗಮ್ಯತೆ ಮರೆದಿದ್ದಾರೆ. ಇಂತಹ ಅನನ್ಯ ಸಾಧನೆ ನೀಡಿದ ಪೂಜ್ಯ ಜಗದ್ಗುರುಗಳ ಜನ್ಮ ದಿನ ಕೇವಲ ಆಡಂಭರಕ್ಕೆ ಸೀಮಿತವಾಗದೆ ರ‍್ಥಪರ‍್ಣತೆಯ ನಿಟ್ಟಿನಲ್ಲಿ ಇಂದು ಹಳೇಬೀಡಿನ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಮಹಿಳಾ ಸ್ವಸಹಾಯ ಸಂಘದಿಂದ ಐತಿಹಾಸಿಕ ಪ್ರಸಿದ್ದ ಶ್ರೀ ರಂಗನಾಥಸ್ವಾಮಿ ದೇಗುಲದ ಅವರಣದ ಸ್ವಚ್ಛತೆಗೆ ಇಂದು ಚಾಲನೆ ನೀಡಲಾಗಿದೆ ಎಂದರು.
ಪತ್ರರ‍್ತ ಹಳೇಬೀಡು ರಘುನಾಥ್ ಮಾತನಾಡಿ ಪುಷ್ಪಗಿರಿ ಶ್ರೀಗಳ ಜನ್ಮ ದಿನದಂದು ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಐತಿಹಾಸಿಕ ದೇಗುಲದ ಅವರಣದ ಸ್ವಚ್ಚತಾ ಕರ‍್ಯ ನಡೆಸಿದ್ದು ನಿಜಕ್ಕೂ ಸಂತೋಷವಾಗಿದೆ. ಪುಷ್ಪಗಿರಿ ಶ್ರೀಗಳು ಭಾಗದ ನೀರಾವರಿ ಕ್ಷೇತ್ರಕ್ಕೆ ಅವಿರತ ಹೋರಾಟದ ಫಲದಿಂದ ರಣಘಟ್ಟ ಯೋಜನೆ ಸಕಾರಕ್ಕೆ ಮುನ್ನುಡಿ ಬರೆದ ಕರ‍್ತಿ ಅವರಿಗೆ ಸಲ್ಲುತ್ತದೆ. ಶ್ರೀಗಳ ಒಂದು ಜಾತಿ,ರ‍್ಮ,ರ‍್ಗಕ್ಕೆ ಸೀಮಿತವಾಗದೆ ರ‍್ವರನ್ನು ಪ್ರೀತಿ ಅಭಿಮಾನದಿಂದ ಕಾಣುತ್ತಾ ಇಂದು ಪುಷ್ಪಗಿರಿ ಕ್ಷೇತ್ರವನ್ನು ಭೂಕೈಲಾಸ ಮಾಡಿದ್ದಾರೆ. ವಿಶೇಷವಾಗಿ ಪುಷ್ಪಗಿರಿ ಪ್ರವಾಸಿ ತಾಣವಾಗಿ ಬದಲಾಗಿದೆ. ಮುಂದಿನ ದಿನದಲ್ಲಿ ಪೂಜ್ಯರು ಇನ್ನು ಹೆಚ್ಚಿನ ಸಾಧನೆ ಮಾಡಲಿ ಎಂದು ತಿಳಿಸಿದರು.
ಹಳೇಬೀಡು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಹಾಗೂ ಹಾಲಿ ಸದಸ್ಯ ಗೀತಾಅರಣ್ ಮಾತನಾಡಿ, ನಾವುಗಳು ಹತ್ತಾರು ಸಂಘದಲ್ಲಿ ಕೆಲಸ ಮಾಡಿದ್ದು, ಆದರೆ ಪುಷ್ಪಗಿರಿ ಮಹಿಳಾ ಸ್ವ ಸಹಾಯ ಸಂಘ ಭಿನ್ನವಾಗಿದೆ. ಇಲ್ಲಿನ ಹಣಕಾಸು ಜೊತೆಗೆ ಮಹಿಳಾ ಸಭಲೀಕರಣಕ್ಕೆ ಒತ್ತು ನೀಡಿದ ಪೂಜ್ಯರು ಕೌಶಲ್ಯ ತರಬೇತಿಗಳನ್ನು ನೀಡುತ್ತಿದ್ದಾರೆ. ಇಂತಹ ಸಂಸ್ಥೆಯಲ್ಲಿ ಕೆಲಸ ನರ‍್ವಹಿಸುವುದು ನಮ್ಮಲ್ಲರ ಸೌಭಾಗ್ಯವೆಂದರು.
ಈ ಸಂರ‍್ಭದಲ್ಲಿ ಹಳೇಬೀಡಿನ ಪುಷ್ಪಗಿರಿ ಗ್ರಾಮೀಣಾಭಿವೃಧ್ಧಿ ಮಹಿಳಾ ಸ್ವ ಸಹಾಯ ಸಂಘದ ಸದಸ್ಯರಾದ ಶಕುಂತಲ ಬಸವರಾಜು, ಪ್ರೇಮಾಲೀಲಾ, ಲೀಲಾವತಿ,ರೂಪ, ಮಾನಸ, ಶಿವಕುಮಾರಿ,ಶಕುಂತಲ, ಮಂಜುಳಾ, ನಾಗರತ್ನ, ಶೀಲಾ, ವೇದ, ಭಾಗ್ಯ,ರಮ್ಯ,ಮಮತ, ಸುಚಲಾ ಹಾಜರಿದ್ದರು.