ಅರಸೀಕೆರೆ: ಈವರೆಗೆ ಅರಸೀಕೆರೆ ಡಿಪೋ ಬಸ್ಸುಗಳು ಎಲ್ಲಿಯೂ
ಕೆಟ್ಟ ನಿಂತ ಉದಾಹರಣೆಗಳು ಇರಲಿಲ್ಲ ಆದರೆ ಇತ್ತೀಚಿನ ಕೆಲ ದಿನಗಳಿಂದ ಬಸ್ಸುಗಳು ಅಲ್ಲಲ್ಲಿ ಕೆಟ್ಟ
ನಿಲ್ಲುತ್ತಿವೆ, ಕೆಲ ಬಸ್ಬಸುಗಳು ಸ್ಸ್ವಲ್ಪ ಅಪ್ಪು
ಬಂದರೆ10 ಕಿಲೋಮೀಟರ್ ವೇಗಕ್ಕೆ ಇಳಿಯುತ್ತವೆ ಇಂತಹ ವರ್ಷಗಳಿಗೆ ಇಳಿಜಾರಿನಲ್ಲಿ ಮಾತ್ರ ವೇಗವಾಗಿ ಹೋಗುತ್ತವೆ
ಈ ಬಸ್ ಗಳಿಗೆ ವಯಸ್ಸಾಗಿದೆಯೇ? ಅಥವಾ ತಾಂತ್ರಿಕ ನಿರ್ವಹಣೆಯ ಕೊರತೆಯೇ? ಪ್ರಯಾಣಿಕರಂತು ಆಗಾಗ್ಗೆ ಸಮಸ್ಯೆ ಎದರಿಸುವಂತಾಗಿದೆ
ಶುಕ್ರವಾರ ಭೈರನಾಯಕನಹಳ್ಳಿ, ಕೆಂಪು ಸಾಗರ ಮಾರ್ಗ
ಹೋಗುವ ಬಸ್ಸು ಗರುಡನಗಿರಿ ರಸ್ತೆಯಲ್ಲಿ . ನಗರ ಮಧ್ಯೆ ಕೆಟ್ಟು ನಿಂತಿತು, ಚಾಲಕನ ಚಾಣಾಕ್ಷತನದಿಂದಾಗಿ ಯಾವುದೇ ಅವಗಡ ಸಂಭವಿಸಲಿಲ್ಲ ಪ್ರಯಾಣಿಕರು
ಚಾಲಕನನ್ನು ಅಭಿನಂದಿಸಿದ್ದಾರೆ, ಇತ್ತೀಚಿನ ದಿನಗಳವರೆಗೂ ಬಸ್ಸುಗಳ ನಿರ್ವಹಣೆ ಉತ್ತಮವಾಗಿತ್ತು ಹೀಗೇಕೆ? ಡಿಪೋದಲ್ಲಿನ ತಾಂತ್ರಿಕ ಸಿಬ್ಬಂದಿಗಳು ಇದ್ದಾರೆ,
ಬಹುತೇಕ ಬಸ್ಸುಗಳಲ್ಲಿಯೇ ದೋಷ ಇರಬೇಕು, ಬಣ್ಣ ಕಾಣದ ಬಸ್ ಕಿಟಕಿಗಳ ಬೀಡಿಂಗ್
ಬಿಟ್ಟಿದೆ, ಕೆಲ ಬಸ್ಸುಗಳಲ್ಲಿ ಮಳೆಯ ನೀರು ಒಳಗೆ ಬರುತ್ತದೆ. ಅನೇಕ ಬಸ್ಸುಗಳು ಬಣ್ಣವನ್ನು
ಕಂಡಿಲ್ಲ , ಪ್ರತಿ ವರ್ಷ . ಈ ಬಸ್ ಗಳಿಗೆ ಆರ್ ಟಿ
ಓ ಹೇಗೆ ಎಫ್ ಸಿ ಕೊಡುತ್ತಾರೆ? ಈ ಮೊದಲು ಎಫ್ ಸಿ ಯನ್ನು
. ಬಸ್ಸಿನ ಮುಂಭಾಗದ ಗಾಜಿನ ಒಳಭಾಗದಲ್ಲಿ ಅಂಟಿಸಲಾಗುತ್ತಿತ್ತು ಈಗ ಅದು
ಕಾಣುತ್ತಿಲ್ಲ ಅನೇಕ ಬಸ್ಸುಗಳ ಬಾಗಿಲು ಭದ್ರವಿಲ್ಲ ಏಕೆ ನಿರ್ವಹಣೆಯ ಕೊರತೆ? ಎಂಬುದು ಸಾರ್ವಜನಿಕರ ಪ್ರಶ್ನೆ
ಉತ್ತಮ ತಾಂತ್ರಿಕ ಸಿಬ್ಬಂದಿ ಇದೆ ನೈಪುಣ್ಯತೆಯ ಚಾಲಕರುಗಳು ಇದ್ದಾರೆ ಕಾಳಜಿ ಇರುವ ವ್ಯವಸ್ಥಾಪಕರು
ಇದ್ದು ಹೀಗೆಕೆ? ಬಸ್ ಆಯಸ್ಸು ಮುಗಿದಿದ್ದಲ್ಲಿ ದಯವಿಟ್ಟು ಬದಲಿಸುವಂತೆ ಹಿರಿಯ ಅಧಿಕಾರಿಗಳಲ್ಲಿ ಸಮಾಲೋಚಿಸಿ
ಪ್ರಯಾಣಿಕರ ಪ್ರಾಣ ಮುಖ್ಯ ಎನ್ನುತ್ತಾರೆ ಪ್ರಯಾಣಿಕರು