ವಿಶ್ವ ಹಿಂದೂ ಪರಿಷತ್ತಿನ ಮುಖಂಡ ರಘುರವರಿಗೆ ಸಕಲೇಶಪುರ ಜಾಮೀನು ನೀಡಿದ ನ್ಯಾಯಾಲಯ

 ಸಕಲೇಶಪುರದಲ್ಲಿ ನಿರಂತರವಾಗಿ ನಡೆಯುತ್ತಿರುವ ಗೋ ಹತ್ಯೆ ವಿರುದ್ಧ ಹಾಗೂ ಸಕಲೇಶಪುರ ತಾಲೂಕಿನ ಕ್ಯಾಮನಳ್ಳಿ ಗ್ರಾಮದಲ್ಲಿ ಮಾಂಸ ಕ್ಕೋಸ್ಕರ ಎಮ್ಮೆಗೆ ಗುಂಡಿಟ್ಟು ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ದಿನಗಳ ಹಿಂದೆ ಪಟ್ಟಣದಲ್ಲಿ ಬಜರಂಗದಳದ ವತಿಯಿಂದ ಪ್ರತಿಭಟನೆ ನಡೆಸಲಾಗಿತ್ತು .


ಈ ಪ್ರತಿಭಟನೆಯಲ್ಲಿ ವಿಶ್ವ ಹಿಂದೂ ಪರಿಷತ್ತಿನ ಮುಖಂಡ ರಘು ಸಕಲೇಶಪುರ ದ್ವೇಷ ಭಾಷಣ ಮಾಡಿದ್ದಾರೆಂದು ಸಕಲೇಶಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಈ ದ್ವೇಷ ಭಾಷಣ ಹಾಗೂ ಮೂಡಿಗೆರೆಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಅವಿನಾಶ್ ಹಾಗೂ ಹಿಂದೂ ಕಾರ್ಯಕರ್ತರುಗಳ ಮೇಲೆ ಪೊಲೀಸರು ಹಲ್ಲೇ ಮಾಡಿದ್ದಾರೆಂದು ಹಲವು ಪ್ರತಿಭಟನೆಗಳು ಪಟ್ಟಣದಲ್ಲಿ ನಡೆದವು.

ಪ್ರತಿಭಟನೆಯಲ್ಲಿ ದೇಷ ಭಾಷಣ ಮಾಡಿದ ರಘು ಸಕಲೇಶಪುರ ಅವರ ಮನೆಗೆ ಸಂಘಟನೆಯ ಪ್ರಮುಖರಗಳಾದ ಅರುಣ್ ಪುತಿಲಾ, ಭಜರಂಗದ ರಾಜ್ಯ ಸಂಚಾಲ ಸುನಿಲ್ ಕೆ ಆರ್ ಹಾಗೂ ಸಹ ಸಂಯೋಜಕ ಮುರಳಿ ಕೃಷ್ಣ ವಸಂತಡ್ಕ ,ಹಾಸನ ವಿಶ್ವ ಹಿಂದೂ ಪರಿಷತ್ತಿನ ಮೈಪಾಲ್ ಹಾಗೂ ಇನ್ನೂ ಅನೇಕ ಮುಖಂಡರು ಭೇಟಿ ನೀಡಿ ಅವರ ತಂದೆ, ತಾಯಿಗೆ ದೈರ್ಯ ತುಂಬುವ ಕೆಲಸ ಮಾಡಿದರು.


ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ವಿಶ್ವ ಹಿಂದೂ ಪರಿಷತ್ ಮುಖಂಡ ರಘು ಸಕಲೇಶಪುರ , ಪ್ರದೀಪ್ ಹಾಗೂ ಹಾಸನ ಜಿಲ್ಲಾ ಸಹ ಸಂಚಾಲಕ ಕೌಶಿಕ್ ರವರಿಗೆ ಹಾಸನ ಜಿಲ್ಲಾ ನ್ಯಾಯಾಲಯವು ನಿರೀಕ್ಷಣಾ ಜಾಮೀನು ನೀಡಿದೆ.

Post a Comment

Previous Post Next Post