ಕೆಲ ಬಿಜೆಪಿ ನಾಯಕರೇ ಉತ್ತಮ ಬಜೆಟ್ ಎಂದು ಹೇಳಿದ್ದಾರೆ :ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿಕೆ



ಹಾಸನ : 2023-24ನೇ ಸಾಲಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಜೆಟ್ ಉತ್ತಮವಾಗಿದೆ ಎಂದು ಬಿಜೆಪಿ ನಾಯಕರೇ ನಮಗೆ ಹೇಳಿದ್ದುಮ ಆದರೇ ನೇರವಾಗಿ ಟಿವಿ ಮಾಧ್ಯಮದಲ್ಲಿ ಹೇಳಲು ಸಾಧ್ಯವೇ ಎಂದು ಹಾಸನದಲ್ಲಿ ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿಕೆ ನೀಡಿದರು.

     ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ರಾತ್ರಿ ಸಮಯದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ನಾಡಿನ ಜನತೆಗಾಗಿ, ಮಳೆ ಕೊರತೆ ಕಾರಣ ದೇವರಿಗೆ ಪೂಜೆ ಮಾಡಲು ಚಿಕ್ಕಮಗಳೂರು, ಶೃಂಗೇರಿಗೆ ಭೇಟಿ ನೀಡಿದ್ದೇನೆ. ಶಾರಾದಾಂಬೆ ದೇವಿ ದರ್ಶನ ಮಾಡಿದ್ದೇನೆ. ರಾಜ್ಯದ ಜನರಿಗೆ ಮಳೆಯ ಕೊರತೆಯಿದ್ದು, ಮುಂಗಾರು ಮಳೆ ಸ್ವಲ್ಪ ಬರುತ್ತಿದೆ. ಕೃಷಿ ಸಚಿವನಾಗಿ ದೇವರಲ್ಲಿ ಪ್ರಾರ್ಥನೆ ಮಾಡಲು ಹೋಗಿದ್ದೆನೆ. ಮಳೆ ಸುಭೀಕ್ಷೆಯಾಗೆ ಆಗಲಿ, ರೈತರ ಬಿತ್ತನೆ ಮಾಡಲಿ, ಜಾನುವಾರುಗಳಿಗೆ ಕುಡಿಯುವ ನೀರು ಸಿಗಲಿ ಎಂದು ಬೇಡಿದ್ದೇನೆ. ಹಿಂದೆ ಜುಲೈ ಮಳೆ ಹೆಚ್ಚಾಗುತ್ತಿತ್ತು, ಜೂನ್ ಮೊದಲ ವಾರದಲ್ಲಿ ಶೇ.೫೭ ಮಳೆ ಕೊರತೆಯಿತ್ತು. ಹಾಸನ ಶೇ.೨೭ ಕೊರತೆಯಿದೆ, ಬೇರೆ ಕಡೆ ಶೇ.೩೦, ಶೇ.೩೫ ಪರ್ಸೆಂಟ್ ಕೊರತೆಯಿದೆ. ಈಗ ಮಳೆಯಾಗುತ್ತಿದ್ದು, ಹೀಗೆ ಮುಂದುವರೆದರೇ ಎಲ್ಲಾ ಕಡೆ ಸರಿ ಹೋಗುತ್ತದೆ ಎಂದು ವಿಶ್ವಾಸವ್ಯಕ್ತಪಡಿಸಿದರು. ಮಳೆಯ ವ್ಯತ್ಯಾಸದ ಕಾರಣ ರೈತರು ಇನ್ಸೂರೆನ್ಸ್ ಮಾಡಿಕೊಳ್ಳಲು ಅವಕಾಶವಿದೆ.

ನಮ್ಮ ಬೇಡಿಕೆಯಂತೆ ಮಳೆ ಆಗಲ್ಲ. ನಾವೆಲ್ಲ ದೇವರಲ್ಲಿ ಪ್ರಾರ್ಥನೆ ಮಾಡಬಹುದು ಅಷ್ಟೇ. ಮೂರು ದಿನಗಳಿಂದ ಬರುತ್ತಿರುವ ಮಳೆ ಮುಂದಿನ ಹತ್ತು ದಿನಗಳು ಬಂದರೆ ಡ್ಯಾಂಗಳು ಭರ್ತಿ ಆಗುತ್ತವೆ, ನಂತರ ಎಲ್ಲರಿಗೂ ಒಳ್ಳೆಯದಾಗುತ್ತದೆ ಎಂದು ವಿಶ್ವಾಸವ್ಯಕ್ತಪಡಿಸಿದರು.

      ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಜೆಟ್ ಬಗ್ಗೆ ಬಿಜೆಪಿ ಟೀಕೆ ವಿಚಾರ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷಗಳು ಬಜೆಟ್ ಒಪ್ಪಿರುವ ಇತಿಹಾಸ ಇದೆಯಾ? ಬಜೆಟ್‌ನಲ್ಲಿ ತಪ್ಪು ಹುಡುಕುವುದೇ ವಿರೋಧ ಪಕ್ಷಗಳ ಕೆಲಸ. ಶ್ರೀರಾಮಚಂದ್ರನ ಆಡಳಿತದಲ್ಲೇ ಒಪ್ಪುವುದು ಹೋಯ್ತು! ಸಿದ್ದರಾಮಯ್ಯ ಅವರು ಹದಿನಾಲ್ಕನೇ ಭಾರಿ ಯಶಸ್ವಿ ಬಜೆಟ್ ಮಂಡಿಸಿದ್ದಾರೆ. ಟೀಕೆ ಮಾಡಬೇಕು ಎಂದು ಸಹಜವಾಗಿ ಟೀಕೆ ಮಾಡ್ತಾರೆ ಅಷ್ಟೆ. ಪ್ರಣಾಳಿಕೆಯಲ್ಲಿ ಹಲವಾರು ಭರವಸೆ ಕೊಟ್ಟಿರುವಂತೆ ಆಶ್ರಯ ಮನೆಯಡಿ ಮೂರು ಲಕ್ಷ ಮನೆ ನಿರ್ಮಾಣ ಮಾಡುತ್ತೇವೆ. ಪ್ರಣಾಳಿಕೆಯಲ್ಲಿ ನೀಡಿದ ಭರವಸೆ ಒಟ್ಟಿಗೆ ಈಡೇರಿಸಲು ಆಗಲ್ಲ. ಹಂತ ಹಂತವಾಗಿ ಭರವಸೆ ಈಡೇರಿಸುತ್ತೇವೆ. ಐದು ಗ್ಯಾರೆಂಟಿಗಳನ್ನು ಈಗ ಈಡೇರಿಸಿದ್ದೇವೆ. ಕೋವಿಡ್‌ನಲ್ಲಿ ಬಿಜೆಪಿಯವರು ರಾಜ್ಯಕ್ಕೆ ಏನು ಕೊಟ್ಟರು? ಉಚಿತ ಚಿಕಿತ್ಸೆ, ಔಷದ ಕೊಟ್ರಾ? ಅದಕ್ಕೆ ನಾವು ಟೀಕೆ ಮಾಡಲಿಲ. ಹೊಸ ಕಾರ್ಯಕ್ರಮಗಳನ್ನು ಘೋಷಣೆ ಮಾಡಲು ತಡವಾಗುತ್ತಿದೆ ಅಷ್ಟೆ. ಬಿಜೆಪಿಯ ಕೆಲವು ನಾಯಕರು ನನ್ನ ಬಳಿ ಒಳ್ಳೆಯ ಬಜೆಟ್ ಮಂಡಿಸಿದ್ದಾರೆ ಎಂದು ಹೇಳಿದ್ದಾರೆ. ಅದುನ್ನ ಅವರು ಟಿವಿ ಮುಂದೆ ಹೇಳಲು ಆಗುತ್ತದೆಯೇ ಎಂದು ಪಶ್ನೆ ಮಾಡಿದರು. ಬಿಜೆಪಿ ಪಕ್ಷದ ಯಾರು ವರ್ಗಾವಣೆ ಮಾಡೇ ಇಲ್ಲಾ ಅಂತ ಕಾಣುತ್ತೆ. ಬಿಜೆಪಿಯವರು ಯಾರ? ಯಾರು ಎಷ್ಟೆಷ್ಟು ವರ್ಗಾವಣೆ ಮಾಡಿದ್ರು ಅಂತ ದಾಖಲೆ ಕೊಡ್ತಿನಿ. ಹೊಸ ಸರ್ಕಾರ ಬಂದಾಗ ವರ್ಗಾವಣೆ ಒಂದು ಪ್ರಕ್ರಿಯೆ ಸಾಮಾನ್ಯ. ಏನು ಹೇಳಲು ಆಗದಿದ್ದಾಗ ಇದನ್ನು ಹೇಳ್ತಾರೆ ಅಷ್ಟೆ. ಬಿಜೆಪಿಯವರಿಗೆ, ಜನತಾದಳದವರಿಗೆ ಏನು ವಿಚಾರ ಸಿಗದಿದ್ದಾಗ ಇನ್ನೇನು ಹೇಳಲು ಸಾಧ್ಯ. ಕುಮಾರಸ್ವಾಮಿ ಆಸ್ತಿ ತನಿಖೆ ಚರ್ಚೆ ವಿಚಾರವಾಗಿ ಮಾತನಾಡಿ, ಆಸ್ತಿ ಬಗ್ಗೆ ತನಿಖೆ ವಿಚಾರ ನನಗೆ ಗೊತ್ತಿಲ್ಲ. ಅದರ ಬಗ್ಗೆ ಬಹಳ ವರ್ಷದಿಂದ ಎಳೆದಾಡುತ್ತಿದ್ದಾರೆ. ನನ್ನ ಗಮನಕ್ಕೆ ಬಂದಿಲ್ಲ, ಸರ್ಕಾರದಲ್ಲಿ ಆಲೋಚನೆ ಮಾಡಿರುವುದು ನನ್ನ ಗಮನದಲ್ಲಿಲ್ಲ. ಗೊತ್ತಿಲ್ಲದ ವಿಚಾರ ಮಾತನಾಡುವುದು ಸೂಕ್ತನಾ ಎಂದು ಪ್ರಶ್ನೆ ಮಾಡಿದರು. ನಾನು ಕುಮಾರಸ್ವಾಮಿ ತರಹ ಮಾತನಾಡಬೇಕಾಗುತ್ತೆ. ಕುಮಾರಸ್ವಾಮಿ ಎಲ್ಲಾ ನನಗೆ ಗೊತ್ತು ಅಂತಾರೆ, ನಾನು ಹಾಗೆ ಹೇಳಬೇಕಾಗುತ್ತೆ. ಅವರ ಬಳಿ ಏನಾದ್ರು ದಾಖಲೆ ಇದ್ದರೆ ಬಿಡುಗಡೆ ಮಾಡಲಿ. ಕೃಷಿ ಭಾಗ್ಯ ಜಾರಿ ಮಾಡಲು ಹಣಕಾಸು ಇಲಾಖೆ, ಮುಖ್ಯಮಂತ್ರಿಗಳು ಒಪ್ಪಿಕೊಂಡಿದ್ದಾರೆ. ವಿಶೇಷವಾಗಿ ಎಲ್ಲಾ ಕಾರ್ಯಕ್ರಮ ಮಾಡ್ತಿವಿ ಅಂತ ಹೇಳಲು ಆಗಲ್ಲ. ಮುಂದಿನ ಎಂಟು ತಿಂಗಳ ನಂತರ ಮಾರ್ಚ್‌ನಲ್ಲಿ ಬಜೆಟ್ ಆಗುತ್ತಲ್ಲಾ ಆಗ ಎಲ್ಲಾ ತರಹದ ಹೆಚ್ಚಿನ ಬಜೆಟ್ ಕೊಡ್ತಿವಿ. ಕುಮಾರಸ್ವಾಮಿ ಅವರತ್ರ ಏನು ಇರಲ್ಲ. ಸುಮ್ನೆ ಹೇಳ್ತಾರೆ ಭಯಪಡಲಿ, ಯಾರ ಹತ್ರ ಏನಾದ್ರು ಇದೆಯಾ ಅಂತ ಚೆಕ್ ಮಾಡಿಕೊಳ್ಳಲಿ ಅಂತ ಹೇಳ್ತಾರೆ. ಅಧಿಕಾರಿಗಳು ಯಾರಾದ್ರು ನಮಗೆ ಸ್ವಲ್ಪ ಬೆಚ್ತಾರಾ ಅಂತ ಹೆದುರಿಸಲು ನೋಡ್ತಾರೆ ಎಂದರು.

   ಇವರ ಮೇಲೆ ಜನಾರ್ಧನ ರೆಡ್ಡಿ ೧೫೦ ಕೋಟಿ ಹಗರಣ ಆರೋಪ ಮಾಡಿದ್ರು, ನಾನು ಅವರ ಜೊತೆಯಲ್ಲಿಯೇ ಇದ್ದೆ. ಅವರು ರಾಜೀನಾಮೆ ಕೊಟ್ಟಿದ್ದಿರಾ! ರಾಜೀನಾಮೆ ಕೊಡುವ ವಿಚಾರ ಬಂದಾಗ ರಾಜೀನಾಮೆ ಕೊಡ್ತಾರೆ ಕೊಡುಸ್ತಾರೆ. ನಮ್ಮ ಪಕ್ಷ ವಿಲಾಸ್‌ರಾವ್ ದೇಶ್‌ಮುಖ್ ಅಂತಹವರನ್ನೇ ತೆಗದಿದ್ರು, ನಮ್ಮಲ್ಲಿ ಆತರಹದ್ದು ಇಲ್ಲಾ. ಇವರ ಪಕ್ಷ ಅಥವಾ ಬಿಜೆಪಿಗಿಂತ ನಮ್ಮ ಪಕ್ಷ ಶಿಸ್ತಿನ ಪಕ್ಷ. ನಾವು ಜನವಿರೋಧಿ ಕೆಲಸ ಮಾಡಿದಾಗ ನಮ್ಮ ಪಕ್ಷ ಮೊದಲೇ ಕ್ರಮ ಕೈಗೊಳ್ಳುತ್ತೆ. ಮೊದಲು ಬಿಡುಗಡೆ ಮಾಡಲಿ, ಅದರಲ್ಲಿ ಎಷ್ಟು ಸತ್ಯಾಂಶ ಇದೆ ಎಂದು ನೋಡದಲೇ ಅಗ್ರಿಮೆಂಟ್ ಮಾಡಿಕೊಡಿ ಎಂದರೆ ಏನು ಅರ್ಥ ಎಮದು ಕುಟುಕಿದರು.

   ಕುಮಾರಸ್ವಾಮಿ ಅವರ ಪೆನ್‌ಡ್ರೈವ್ ವಿಚಾರವಾಗಿ ಮಾಧ್ಯಮದವರ ಪ್ರರ್ಶನೆಗೆ ಉತ್ತರಿಸಿದ ಸಚಿವರು, ಪೆನ್‌ಡ್ರೈವ್‌ನ ಸೀಕ್ರೆಟ್ ಲಾಕರ್‌ನಲ್ಲಿ ಇಟ್ಟಿದ್ದಾರಾ! ಕುಮಾರಸ್ವಾಮಿ ಅವರು ಯಾವತ್ತು ಅಧಿಕಾರ ಇಲ್ಲೆದೆ ಇದ್ದಾಗ ವಿರೋಧ ಪಕ್ಷದಲ್ಲಿ ಕುಳಿತುಕೊಂಡು ಜನರ ಸಮಸ್ಯೆಗಳ ಬಗ್ಗೆ ಕೆಲಸ ಮಾಡಲಿಲ್ಲ. ಅವರು ಇದು ಮೊದಲೇನು ಹೇಳುತ್ತಿಲ್ಲ, ದೊಡ್ಡ ಫೈಲ್ ಇದೆ, ಸಿಡಿ ಇದೆ, ಪೆನ್‌ಡ್ರೈ ಇದೆ ಅಂತ ಹೇಳುತ್ತಲೆ ಇದ್ದಾರೆ. ಅವರ ಬಗ್ಗೆ ಗೌರವಿದೆ ದಾಖಲೆ ಇದ್ದರೆ ಬಿಡುಗಡೆ ಮಾಡಲಿ ಎಂದು ಸವಾಲು ಎಸೆದರು.

    ಇದೆ ವೇಳೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಕ್ಷ್ಮಣ್, ವಿಧಾನ ಪರಿಷತ್ತು ಮಾಜಿ ಸದಸ್ಯ ಗೋಪಾಲಸ್ವಾಮಿ, ಪಕ್ದ ಮುಖಂಡರಾದ ತಾರಾ ಚಂದನ್, ಮುರುಳಿ ಮೋಹನ್, ಮಲ್ಲಿಗೆವಾಳ್ ದೇವಪ್ಪ, ಲಕ್ಷ್ಮಣ್ ಇತರರು ಉಪಸ್ಥಿತರಿದ್ದರು.

Post a Comment

Previous Post Next Post