ರೋಟರಿ ಕ್ಲಬ್ ಆಫ್ ಕ್ವಾಂಟಾ ಅಧ್ಯಕ್ಷರಾಗಿ ಬೊಮ್ಮೇಗೌಡ

ಕಳೆದ ಒಂದೂವರೆ ದಶಕದಿಂದ ನೂರಾರು ಸಮಾಜಮುಖಿ ಸೇವಾ ಕಾರ್ಯಗಳಿಂದ ಹೆಸರು ಮಾಡಿರುವ ರೋಟರಿ ಕ್ಲಬ್ ಆಫ್ ಕ್ವಾಂಟಾವನ್ನು ಪ್ರಸಕ್ತ ಸಾಲಿಗೆ ಮುನ್ನಡೆಸುವ ಜವಾಬ್ದಾರಿ ರೊ.ಬಿ.ಆರ್ ಬೊಮ್ಮೇಗೌಡ ಅವರಿಗೆ ದೊರಕಿದೆ.

ಬಿ.ಜಿ ರಂಗೇಗೌಡ ,ಜಯಮ್ಮ ದಂಪತಿಗಳಿಗೆ 5.11.85ರಲ್ಲಿ ಜನಿಸಿದ ಬಿ.ಆರ್ ಬೊಮ್ಮೇ ಗೌಡ, ತನ್ನ ಹುಟ್ಟೂರು ಹಾಸನ ತಾಲೂಕಿನ ಬೂವನಹಳ್ಳಿಯಲ್ಲಿ ಪ್ರಾರ್ಥಮಿಕ ಹಾಗೂ ಪ್ರೌಢ ಶಿಕ್ಷಣ ಮತ್ತು ಪಿಯುಸಿ ವ್ಯಾಸಂಗವನ್ನು ಮುಗಿಸಿ ಮೈಸೂರು ವಿಶ್ವವಿದ್ಯಾನಿಲಯದಿಂದ ಬಿಎ, ಬಿ.ಎಡ್ ಹಾಗೂ ಕುವೆಂಪು ವಿಶ್ವವಿದ್ಯಾನಿಲಯದಿಂದ ಎಂ.ಎ ರಾಜ್ಯಶಾಸ್ತ್ರ ಪದವಿಯನ್ನು ಪಡೆದಿದ್ದಾರೆ.

ತನ್ನ ವಿದ್ಯಾಭ್ಯಾಸದ ನಂತರ 3-4 ವರ್ಷಗಳ ಕಾಲ ಖಾಸಗಿ ಕಂಪನಿಯಲ್ಲಿ ಮಾರಾಟ ವ್ಯವಸ್ಥಾಪಕರಾಗಿ ಉದ್ಯೋಗ ಪ್ರಾರಂಭಿಸಿ, ಕಳೆದ ಒಂದು ದಶಕದಿಂದ ಪತ್ರಿಕಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿ, ವಿಜಯವಾಣಿ,ಹೊಸದಿಗಂತ,ಜನಮಿತ್ರ ಪತ್ರಿಕೆಗಳಲ್ಲಿ   ಕಾರ್ಯನಿರ್ವಹಿಸಿದ್ದಾರೆ.

 2022 ರಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ  ಸಂಘಕ್ಕೆ ನಿರ್ದೇಶಕರಾಗಿ ಆಯ್ಕೆಯಾಗಿರುವ ಇವರು,
ಅದೇ ವರ್ಷದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಗೌರವ ಕಾರ್ಯದರ್ಶಿಯಾಗಿ ಆಯ್ಕೆಯಾಗಿ ಪ್ರಶಂಸೆಗೆ ಭಾಜನರಾಗಿದ್ದಾರೆ.

ಬೂವನಹಳ್ಳಿಯಲ್ಲಿ ನಡೆದ 20ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಜವಾಬ್ದಾರಿ ಹೊತ್ತು ಕಸಾಪ ಜಿಲ್ಲಾಧ್ಯಕ್ಷ ಬಾ.ಎಚ್.ಎಲ್ ಮಲ್ಲೇಶಗೌಡರ ಆಶಯದಂತೆ ಗ್ರಾಮೀಣ ಪ್ರದೇಶದಲ್ಲಿ ಸಮ್ಮೇಳನವನ್ನು ಯಶಸ್ವಿ ನಡೆಸಿ ಕೊಟ್ಟ ಕೀರ್ತಿಯ ಜೊತೆಗೆ, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಸಿದ್ಧ ಧಾರ್ಮಿಕ ಕಾರ್ಯಕ್ರಮ ಗುರು ತೋರಿದ ದಾರಿ ತಿಂಗಳ ಮಾಮನ ತೇರು 101ನೇ ಹುಣ್ಣಿಮೆ ಕಾರ್ಯಕ್ರಮವನ್ನು ಬೂವನಹಳ್ಳಿಯಲ್ಲಿ ಯಶಸ್ವಿಯಾಗಿ ನಡೆಸಿದ ಕೀರ್ತಿ ಸಂದಿದೆ.
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪರಮ ಭಕ್ತರಾಗಿರುವ ಇವರು ಹಾಸನ ಮಠದ ಶ್ರೀ ಶಂಭುನಾಥ ಸ್ವಾಮೀಜಿಯವರ ಆಶೀರ್ವಾದದೊಂದಿಗೆ,ಮಠದ ಹುಣ್ಣಿಮೆ ಕಾರ್ಯಕ್ರಮಗಳ ಸಂಚಾಲಕರಾದ ಎಚ್.ಬಿ ಮದನಗೌಡರ ಸಹಕಾರದಲ್ಲಿ  ಶ್ರೀ ಆದಿಚುಂಚನಗಿರಿ  ಮಹಾಸಂಸ್ಥಾನ ಮಠದ ಹಾಸನ ದ ಮಾಧ್ಯಮ ಪ್ರತಿನಿಧಿ   ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ.
ಪದವಿ ಹಂತದಲ್ಲಿ ಅಂತರ ವಿಶ್ವವಿದ್ಯಾನಿಲಯ ಮಟ್ಟದ ಸಾಂಸ್ಕೃತಿಕ ಶಿಬಿರ, ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಖೋ-ಖೋ ಹಾಗೂ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಪ್ರತಿನಿಧಿಸಿದ ಕೀರ್ತಿ ಇದೆ.
ಪತ್ರಿಕೋದ್ಯಮ ಸೇವೆ ಜಿಲ್ಲಾ ಸಂಘದಿಂದ ಪುರಸ್ಕಾರ, ಸಮಾಜ ಸೇವೆಗೆ ವಿವಿಧ ಸಂಘಟನೆಗಳಿಂದ  ಪುರಸ್ಕಾರಗಳು ಸಂದಿವೆ.
ನಾಡಿನ ಹೆಸರಾಂತ ವಿಸ್ತಾರ ನ್ಯೂಸ್ ವಾಹಿನಿಯ ಪ್ರಸಕ್ತ ಸಾಲಿನ ಕಾಯಕಯೋಗಿ ಇವರ ಸಂಘಟನಾ ಚತುರತೆಗೆ ಸಂದಿದೆ.
ಇಷ್ಟೆಲ್ಲಾ ಸಾಧನೆ ಮಾಡಿರುವ ಬಿ.ಆರ್  ಬೊಮ್ಮೇಗೌಡರು ಈ ವರ್ಷ ರೋಟರಿ ಕ್ಲಬ್ ಆಫ್ ಹಾಸನ ಕ್ವಾಂಟ ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸಲಿ ಎಂದು ಶುಭ ಹಾರೈಸುತ್ತೇವೆ.

Post a Comment

Previous Post Next Post