ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ನಡಹಳ್ಳಿ ಗ್ರಾಮದ ಕುಮಾರ ಎಂಬುವವರು ಮನೆಯಲ್ಲಿ ಅಕ್ರಮವಾಗಿ ಗೋಹತ್ಯೆ ಮಾಡಿ, ಗೋಮಾಂಸ ಮಾರಾಟ ಮಾಡುವ ಸಂಬಂಧ ಸಂಗ್ರಹಿಸಿಟ್ಟಿದ್ದವರ ಮೇಲೆ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣಾ ಪಿ.ಎಸ್.ಐ ಶ್ರೀ.ಸದಾಶಿವ ತಿಪ್ಪರಡಿರವರು ಸಿಬ್ಬಂದಿಗಳೊಂದಿಗೆ ದಾಳಿ ಮಾಡಿ, ಆರೋಪಿಯಾದ ಕುಮಾರ, ನಡಹಳ್ಳಿ ಗ್ರಾ. ಹಾನುಬಾಳು ಹೋ. ಸಕಲೇಶಪುರ ತಾ. ರವರನ್ನು ವಶಕ್ಕೆ ತೆಗೆದುಕೊಂಡು, ಕಟಾವು ಮಾಡಿಟ್ಟಿದ್ದ 30 ಕೆ.ಜಿ ಗೋಮಾಂಸವನ್ನು ಅಮಾನತ್ತುಪಡಿಸಿಕೊಂಡು, ಸ್ವ ಪರ‍್ಯಾದು ಮೇರೆಗೆ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆಕೈಗೊಂಡಿರುತ್ತೆ.