ಹಾಸನ: ರಾಜ್ಯ ಸರಕರದ ಉಚಿತ ವಿದ್ಯುತ್ ಬೇಡ ಆದರೇ ಸರಿಯಾದ ಸಮಯಕ್ಕೆ ರೈತರಿಗೆ ಕರೆಂಟ್ ನೀಡಿದರೇ ಸಾಕು. ರೈತರ ಸಮಸ್ಯೆ ಏನಾದ್ರೂ ಬಗೆಹರಿಸದಿದ್ದರೇ ಮುಂದೆ ಬೃಹತ್ ಪ್ರತಿಭಟನೆ ಮಾಡುವುದಾಗಿ ಸಂಸದ ಪ್ರಜ್ವಲ್ ರೇವಣ್ಣ ಎಚ್ಚರಿಸಿದರು.
ನಗರದ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಸಭೆಯ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ರೈತರಿಗೆ ೩ ಪೇಸ್ ನಾಲ್ಕು ಗಂಟೆ ವಿದ್ಯುತ್ ಕೊಡುವುದಾಗಿ ಹೇಳಿ ಈಗ ಒಂದು ಗಂಟೆಗಳ ಕಾಲ ಲೋಡ್ ಶೆಡ್ಡಿಂಗ್ ಮಾಡಿ ರೈತರಿಗೆ ಸರಿಯಾಗಿ ವಿದ್ಯುತ್ ನೀಡುತ್ತಿಲ್ಲ. ರಾಜ್ಯ ಸರ್ಕಾರದ ಉಚಿತ ವಿದ್ಯುತ್ ಕೊಡುವುದು ಬೇಡ. ಸಮಯಕ್ಕೆ ಸರಿಯಾಗಿ ರೈತರಿಗೆ ವಿದ್ಯುತ್ ಕೊಟ್ಟರೇ ಸಾಕು. ಕರೆಂಟ್ ವಿಚಾರವಾಗಿ ರೈತರ ಮೇಲೆ ವಿಜಿಲೆನ್ಸ್ ಇಲಾಖೆಯವರು ಅನಗತ್ಯವಾಗಿ ಪ್ರಕರಣ ದಾಖಲು ಮಾಡಿ ೩ ರಷ್ಟು ಹಣ ದಂಡ ಹಾಕಲಾಗುತ್ತಿದೆ ಎಂದು ಅಸಮಧಾನವ್ಯಕ್ತಪಡಿಸಿ, ರೈತರ ಸಮಸ್ಯೆ ಬಗೆಹರಿಸದಿದ್ದರೆ ಮುಂದಿನ ದಿನಗಳಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು. ರಾಜ್ಯ ಸರ್ಕಾರದ ಉಚಿತ ಸ್ಕಿಮ್ ಯಾವ ರೈತರು ಕೇಳುತ್ತಿಲ್ಲ.
ಆದರೇ ಸರಿಯಾದ ಸಮಯದಲ್ಲಿ ನೀರು ವಿದ್ಯುತ್ ನೀಡಿದರೆ ರೈತರು ನಮಗೆ ಅನ್ನ ನೀಡುತ್ತಾರೆ ಎಂದರು. ಉಚಿತ ಘೋಷಣೆ ಕೊಡುತ್ತಾ ಹೋದರೆ ಸರ್ಕಾರ ದಿವಾಳಿಯಾಗುವುದರಲ್ಲಿ ಸಂಶಯ ಇಲ್ಲ ಎಂದು ಎಚ್ಚರಿಸಿದರು.
ಕಾರ್ ಇದ್ದವರಿಗೆ ಬಿಪಿಎಲ್ ಕಾರ್ಡ್ ರದ್ದು ವಿಚಾರವಾಗಿ ಮಾತನಾಡುತ್ತಾ, ಮಕ್ಳಳ ಬಳಿ ಕಾರ್ ಇದ್ದರೂ ತಂದೆ ತಾಯಿ ಬಿಪಿಎಲ್ ಕಾರ್ಡ್ ರದ್ದು ಪಡಿಸಲಾಗುತ್ತಿದೆ. ಎಷ್ಟೋ ಮಕ್ಕಳು ತಂದೆ ತಾಯಿಯವರನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಮಾನವಿಯತೆ ದೃಷ್ಟಿ ಮೆರೆಗೆ ಇದರ ಬಗ್ಗೆ ಚರ್ಚೆ ಮಾಡಿ ಬಿಪಿಎಲ್ ಕಾರ್ಡ ರದ್ದು ವಾಪಸು ಪಡೆಯಲು ಪ್ರಜ್ವಲ್ ಆಗ್ರಹಿಸಿದರು. ನಗರಸಭೆ ೨೫ ಹಳ್ಳಿಗಳ ನಗರಸಭೆ ಸೇರ್ಪಡೆ ಬಗ್ಗೆ ತಾಂತ್ರಿಕವಾಗಿ ಮಾಡದ ಕಾರಣ ದಿಕ್ಕು ದೆಸೆಯಿಲ್ಲದ ಪರಿಸ್ಥಿತಿ ಆಗಿದೆ. ಗ್ರಾಮಗಳನ್ನು ಸಂಪೂರ್ಣವಾಗಿ ಮ್ಯಾಪಿಂಗ್ ಮಾಡಿಸಲಾಗುವುದು ಎಂದು ಹೇಳಿದರು.
ಈಗಾಗಲೇ ಕಳೆದ ೩ ತಿಂಗಳಿಂದ ಎಲ್ಲಾ ಗ್ರಾಮ ಪಂಚಾಯತಿ ಸಭೆ ಮಾಡಿದ್ದು, ಈ ವೇಳೆ ಬಹಳಷ್ಟು ಸಮಸ್ಯೆಗಳು ಕಂಡುಬಂದಿದೆ. ಅವುಗಳ ಸಮಸ್ಯೆ ಪರಿಹಾರದ ಬಗ್ಗೆ ಜಿಲ್ಲಾಧಿಕಾರಿ ಬಳಿ ಚರ್ಚೆ ಮಾಡಿದ್ದೆನೆ. ಅರಸೀಕೆರೆ, ಹುಳಿಯಾರು, ಚಿತ್ರದುರ್ಗ ಎಕ್ಷಪ್ರೆಸ್ ಹೈವೆ ಮಾಡಲು ಕೈಗೊಂಡಿದ್ದು, ಆ ಭಾಗದ ರೈತರಿಗೆ ಸೂಕ್ತ ಬೆಲೆ ನೀಡಿ ರೈತರ ಒಪ್ಪಂದ ಮೆರೆಗೆ ಭೂಮಿ ಸ್ವಾದೀನ ಮಾಡಲಾಗುವುದು ಎಂದು ತಿಳಿಸಿದರು. ಪಾಂಡವಪುರದಿಂದ ಕೆ.ಆರ್. ಪೇಟೆ, ಚನ್ನರಾಯಪಟ್ಟಣ, ಅರಸೀಕೆರೆಗೆ ರಾಷ್ಟ್ರೀಯ ಹೆದ್ದಾರಿ ಮಂಜೂರಾಗಿದೆ. ಹೊಳೆನರಸೀಪುರ ಟೌನ್ ನಲ್ಲಿ ಬೈಪಾಸ್ ರಸ್ತೆ ಮಾಡಲು ಹಂಗರಹಳ್ಳಿಯಿಂದ ಪಟ್ಟಣಕ್ಕೆ ವಾಹನಗಳು ಬಾರದ ಹಾಗೆ ಬೈಪಾಸ್ ರಸ್ತೆ ಮಂಜೂರಾತಿ ಮಾಡಿಸಿಕೊಳಲ್ಲಾಗಿದೆ ಎಂದರು. ಹಂಗರಹಳ್ಳಿ ರೈಲ್ವೆ ಒವರ್ ಬ್ರೀಡ್ಜ್ ಇವತ್ತನಿಂದ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದೆವೆ. ಬಿಳಿಕೆರೆ ಯಡೇಗೌಡನಹಳ್ಳಿ ನಾಲ್ಕು ಪಥದ ರಸ್ತೆ ಕೆಲಸ ಮುಗಿಸಲಾಗುವುದು ಎಂದು ಹೇಳಿದರು. ಇದೆ ವೇಳೆ ಕ್ಷೇತ್ರದ ಶಾಸಕ ಹೆಚ್.ಪಿ. ಸ್ವರೂಪ್ ಇತರರು ಉಪಸ್ಥಿತರಿದ್ದರು.
Tags
ಹಾಸನ