ಕಸ್ತೂರಿ ರಂಗನ್ ವರದಿ ಜಾರಿಯಾಗದಂತೆ ಸರ್ಕಾರದ ಗಮನ ಸೆಳೆಯುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ :-ಸಿಮೆಂಟ್ ಮಂಜಣ್ಣ



ಹೆತ್ತೂರು ಹೋಬಳಿ ಬೆಳೆಗಾರರ ಸಂಘ ಹಾಗೂ ಹೋಬಳಿ ಒಕ್ಕಲಿಗರ ಸಂಘದ ವತಿಯಿಂದ  ನೂತನ ಶಾಸಕರು ಹಾಗೂ ಹೆತ್ತೂರು ನಾಗರಾಜ್ ಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರು ಹೆತ್ತೂರಿನ ಬೆಳೆಗಾರರು ಅತಿ ಹೆಚ್ಚು ಸಮಸ್ಯೆಗಳನ್ನು ಎದುರಿಸುತ್ತಿದ್ದು ಅದರಲ್ಲಿಯೂ ಕಾಡನೆಯ ಸಮಸ್ಯೆ ಅತಿ ಹೆಚ್ಚಾಗಿದೆ . ಈಗಾಗಲೇ ಸದನದಲ್ಲಿ ಸರ್ಕಾರ ಗಮನ ಸೆಳೆಯುವ ಕೆಲಸ ಮಾಡಿದ್ದೇನೆ , ಈ ಭಾಗದ ರೈತರ ಸಮಸ್ಯೆಗಳಿಗೆ ಕಲ್ಪಿಸಿ ಕೊಡುವ ಪ್ರಾಮಾಣಿಕ ಕೆಲಸವನ್ನು ಮಾಡುತ್ತೇನೆ.ಎಂದು ಹೇಳಿದರು.

ಈ ಸಂದರ್ಭದಲ್ಲಿ ಹೆತ್ತೂರಿನ ಬೆಳಗಾರರ ಸಂಘದ ವತಿಯಿಂದ ಶಾಸಕರಿಗೆ ರೈತರ ಸಮಸ್ಯೆಗಳು ಬಗ್ಗೆ ತಿಳಿಸಿ ಈ ಭಾಗದ ಸಮಸ್ಯೆಗಳಾದ.  ಕಾಡಾನೆ ಸಮಸ್ಯೆ ಹಾಗೂ ಅದಕ್ಕೆ ಶಾಶ್ವತ ಪರಿಹಾರಕ್ಕಾಗಿ ಸರ್ಕಾರಕ್ಕೆ ಒತ್ತಾಯ, ಕಾಡಾನೆ ಸಮಸ್ಯೆಯಿಂದ ರೈತರಿಗೆ ಸಿಗುವ ಪರಿಹಾರದಲ್ಲಿ ಪರಿಷ್ಕರಣೆ ಮಾಡುವಂಥದ್ದು, ರೈತರ ಕೆಲಸಗಳು ಸರ್ಕಾರಿ ಕಚೇರಿಯಲ್ಲಿ ಆದಷ್ಟು ಶೀಘ್ರವಾಗಿ ಆಗುವಂತೆ ಮಾಡುವಲ್ಲಿ ಶಾಸಕರು ಗಮನಹರಿಸುವಂತೆ, ಈ ಭಾಗದಲ್ಲಿ ವರ್ಗಾವಣೆಗೊಂಡು ಖಾಲಿ ಇರುವ ಶಿಕ್ಷಕರ ಹುದ್ದೆಗೆ ಶೀಘ್ರವಾಗಿ ಶಿಕ್ಷಕರನ್ನು ತುಂಬುವಂತೆ ಶಾಸಕರು ಸಂಬಂಧ ಪಟ್ಟ ಇಲಾಖೆಯವರಿಗೆ ಒತ್ತಡ ಹೇರುವಂತೆ ಹಾಗೂ  ಈ ಹೋಬಳಿಗೆ ಜನವಸತಿ ಕೇಂದ್ರವನ್ನು ಸ್ಥಾಪಿಸುವಂತೆ ಅನೇಕ ಬೆಳೆಗಾರರ ಸಮಸ್ಯೆಗಳನ್ನು ಪಟ್ಟಿ ಮಾಡಿ ಶಾಸಕರ ಗಮನಕ್ಕೆ ತಂದು, ಮನವಿಯನ್ನು ಕೊಡಲಾಯಿತು ಇದಕ್ಕೆ ಸ್ಪಂದಿಸಿದ ಶಾಸಕರು ಆದಷ್ಟು ಬೇಗ ಹಂತ ಹಂತವಾಗಿ ಪರಿಹಾರವನ್ನು ಕಲ್ಪಿಸಲು ಪ್ರಾಮಾಣಿಕ ಕೆಲಸ ಮಾಡುತ್ತೇನೆ ಎಂದು ಬೆಳಗಾರರಿಗೆ ಭರವಸೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಹೆತ್ತೂರು ನಾಗರಾಜ ಗೆ ಸನ್ಮಾನ ಈ ಸಂದರ್ಭದಲ್ಲಿ ಈ ಸಾಧನೆಗೆ ಹೆತ್ತೂರಿನ ಸ್ನೇಹ ಬಳಗದವರು ಗುರು ಹಿರಿಯರು ಕಾರಣ ಅವರಿಗೆ ನನ್ನ ಧನ್ಯವಾದಗಳು ಎಂದು ಧನ್ಯತಾಭಾವವನ್ನು ಹೇಳಿದರು.




ಕಾರ್ಯ್ರಮದಲ್ಲಿ ಹೆತ್ತೂರು ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷರಾದ  ದೇವರಾಜ್ ಗೌಡ,ಭೀಮಾ ವಿಜಯ್ ಸಂಪಾದಕರಾದ ಹೆತ್ತೂರು ನಾಗರಾಜ್ ,ಹೋಬಳಿ ಒಕ್ಕಲಿಗರ ಸಂಘದ ಅಧ್ಯಕ್ಷರಾದ ರಾಧಾಕೃಷ್ಣ, DFO  ಮೋಹನ್ ಕುಮಾರ್ ,AFO ಮಹದೇವ್ ,ಸೇರಿದಂತೆ ಹೋಬಳಿ ಯ ಎಲ್ಲ  ಗ್ರಾಮ ಪಂಚಾಯಿತಿಯ ಬೆಳೆಗಾರರ ಸಂಘದ ನಿರ್ದೇಶಕರು ಹಾಗೂ ಹೋಬಳಿ ವ್ಯತಿಯ ರೈತರು ಭಾಗವಹಿಸಿದರು.

Post a Comment

Previous Post Next Post