ಸಾಮಾನ್ಯ ಸಭೆಯಲ್ಲಿ ಯುಜಿಡಿ, ರಸ್ತೆ, ಬೀದಿ ದೀಪ ಸಮಸ್ಯೆಗಳ ಸುರಿಮಳೆ

 ಹಾಸನ : ನಗರಸಭೆ ಸಾಮಾನ್ಯ ಸಭೆಯ ಮುಂದುವರೆದ ಸಭೆಯಲ್ಲಿ ಸದಸ್ಯರು ತಮ್ಮ ವಾರ್ಡ್ಗಳಲ್ಲಿನ ಯುಜಿಡಿ, ರಸ್ತೆ, ಬೀದಿ ದೀಪಾ, ನಾಯಿ ಹಾವಳಿ ಸಮಸ್ಯೆ ಬಗ್ಗೆ ಗಂಭೀರ ಚರ್ಚೆಯನ್ನು ನಡೆಸಿದರು.

ನಗರ ಸಭೆ ಅಧ್ಯಕ್ಷ ಮೋಹನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯ ಮುಂದುವರೆದ ಸಭೆಯಲ್ಲಿ ಶಾಸಕ ಎಚ್.ಪಿ ಸ್ವರೂಪ್ ಭಾಗವ ಹಿಸಿ ಎಲ್ಲಾ ಸದಸ್ಯರ ಸಮಸ್ಯೆಗಳನ್ನು ಆಲಿಸಿ ಪರಿಹಾರದ ಭರವಸೆ ನೀಡಿದರು.

ನಗರಸಭೆ ವ್ಯಾಪ್ತಿಗೆ 25 ಹಳ್ಳಿಯ 9 ಗ್ರಾಮ ಪಂಚಾಯಿತಿಗಳು ಸೇರಿದ್ದು ಇಲ್ಲಿ ಕಾರ್ಯನಿರ್ವಹಿಸುವ ನೌಕರರಿಗೆ ಹೀಗಿರುವ ನಗರಸಭೆ ಕಚೇರಿಯಲ್ಲಿ ಸ್ಥಳಾವಕಾಶದ ಕೊರತೆಯಿದ್ದು ನೂತನ ಕಟ್ಟಡ ಕಾಮಗಾರಿಯನ್ನು ಶೀಘ್ರವಾಗಿ ಕೈಗೊಳ್ಳುವ ಮೂಲಕ ಹೆಚ್ಚುವರಿ ನೌಕರರಿಗೆ ಕಚೇರಿಯಲ್ಲಿ ಸ್ಥಳಾವಕಾಶ ಮಾಡಿಕೊಡಬಹುದು, ಅದ್ದರಿಂದ ಕಾಮಗಾರಿ ತ್ವರಿತಗತಿಯಲ್ಲಿ ಕೈಗೊಳ್ಳಲು ಸೂಚನೆ ನೀಡಿದರು.

ನಗರಸಭೆ ಸದಸ್ಯರಾದ ಗಿರೀಶ್ ಚನ್ನವೀರಪ್ಪ, ಸಂತೋಷ್, ರಕ್ಷಿತ್ ಸೇರಿದಂತೆ ಹಲವರು ತಮ್ಮ ವಾರ್ಡ್ಗಳಲ್ಲಿ ಯುಜಿಡಿ ಬೀದಿ ದೀಪ ರಸ್ತೆ ಸಮಸ್ಯೆ ಇದ್ದು ಅಗತ್ಯ ಕ್ರಮಕ್ಕೆ ಅಧ್ಯಕ್ಷರ ಹಾಗೂ ಅಧಿಕಾರಿಗಳ ಗಮನಕ್ಕೆ ತಂದರು.

ವಾರ್ಡ್ ಗಳ ಪ್ರಮುಖ ಮತ್ತು ಅಡ್ಡ ರಸ್ತೆಗಳಿಗೆ ಬೋರ್ಡ್ ಗಳನ್ನು ಅಳವಡಿಸಿರುವುದು ತುಕ್ಕು ಹಿಡಿದಿದೆ ಹೊಸದಾಗಿ ಬೋರ್ಡ್ ಗಳನ್ನು ಅಳವಡಿಸುವ ಮೂಲಕ ಸಾರ್ವಜ ನಿಕರಿಗೆ ಅನುಕೂಲ ಮಾಡಿಕೊಡ ಬೇಕು ಎಂದು ಮನವಿ ಮಾಡಿದರು.

ಹೊಸದಾಗಿ ಸೇರ್ಪಡೆಗೊಂಡಿರುವ ಪಂಚಾಯ್ತಿ ಗಳಲ್ಲಿ ಬೋರ್ಡ್ ಗಳನ್ನು ಬದಲಾಯಿಸಿ ನಗರಸಭೆ ವ್ಯಾಪ್ತಿಗೆ ಒಳಪಟ್ಟಿರುವ ಕುರಿತು ಬೋರ್ಡ್ ಗಳನ್ನು ಅಳವಡಿಸಲು ಸಭೆ ಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.



ನಗರಸಭೆ ಸದಸ್ಯ ರಕ್ಷಿತ್ ಮಾತನಾಡಿ ಬಡವರು ಅಂತಿಕ್ರಿಯೆ ಮಾಡಲು ಸಹ ಪರದಾಡುವಂತಾಗುತ್ತಿದ್ದು ಶವಗಳನ್ನು ದಹನ ಮಾಡುವ ಕೇಂದ್ರದಲ್ಲಿ ಇರುವ ನೌಕರರು ಇಲ್ಲಿಗೆ ಬರುವ ಮೃತ ಕುಟುಂಬದವರೊಂದಿಗೆ ಸರಿಯಾಗಿ ನಡೆದುಕೊಳ್ಳುತ್ತಿಲ್ಲ ಇದರಿಂದ ಕಿರಿಕಿರಿ ಉಂಟಾಗುತ್ತಿದ್ದು ನಗರಸಭೆಯಿಂದ ಓರ್ವ ನೌಕರರನ್ನು ಅಥವಾ ಪೌರಕಾರ್ಮಿಕರನ್ನು ನೇಮಿಸುವ ಮೂಲಕ ಅಂತ್ಯಕ್ರಿಯೆ ಸಂದರ್ಭದಲ್ಲಿ ಗೊಂದಲವನ್ನು ನಿವಾರಿಸಬೇಕು ಎಂದು ಮನವಿ ಮಾಡಿದರು.

 3ನೇ ವಾರ್ಡಿನಲ್ಲಿ ಇರುವ ಸರ್ಕಾರಿ ಶಾಲೆಯಲ್ಲಿ 400 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು ಇವರಿಗೆ ಶೌಚಾಲಯ ಸೇರಿದಂತೆ ಮೂಲ ಸೌಕರ್ಯದ ಕೊರತೆ ಇದೆ. ಬಗ್ಗೆ ನಗರೋತ್ಥಾನ ಯೋಜನೆಯಡಿ ಅಗತ್ಯ ಸೌಲಭ್ಯ ಒದಗಿಸುಲ್ಲಿ ಕ್ರಮ ಕೈಗೊಳ್ಳುವಂತೆ ಸದಸ್ಯರು ಅಧ್ಯಕ್ಷರ ಗಮನಕ್ಕೆ ತಂದರು.

ಸರ್ಕಾರಿ ಆಸ್ಪತ್ರೆಯಿಂದ ಕುಡಿಯುವ ನೀರಿನ ಬಾಬ್ತಾಗಿ ಎರಡು ಕೋಟಿ ರೂ ಬಾಕಿ ಇದ್ದು ಹೊಸದಾಗಿ ನಿರ್ಮಾಣ ಮಾಡಿರುವ ಹೈಟೆಕ್ ಸರ್ಕಾರಿ ಆಸ್ಪತ್ರೆಗೂ ಮೂರು ತಿಂಗಳಿನಿAದ ನಗರಸಭೆಯಿಂದ ಕುಡಿಯುವ ನೀರಿನ ಪೂರೈಕೆ ಮಾಡಲಾಗುತ್ತಿದೆ ಆದರೆ ಯಾವುದೇ ಹಣವನ್ನು ಇದುವರೆಗೂ ವಸೂಲಿ ಮಾಡಿಲ್ಲ; ಇಷ್ಟು ಪ್ರಮಾಣದ ಹಣ ಬಾಕಿ ಇದ್ದರೆ ನಗರದ ಅಭಿವೃದ್ಧಿಗೆ ಯಾವ ರೀತಿ ನೆರವಾಗಲಿದೆ ಎಂದು ಸದಸ್ಯರು ಪ್ರಶ್ನಿಸಿದರು. ಮುಂದಿನ ದಿನಗಳಲ್ಲಿ ಈ ರೀತಿಯ ಬಾಕಿ ಹಣವನ್ನು ವಸೂಲಿ ಮಾಡುವ ಮೂಲಕ ನಗರದ ಅಭಿವೃದ್ಧಿಗೆ ಪೂರಕ ಕಾಮಗಾರಿ ಕೈಗೊಳ್ಳಲು ಮುಂದಾಗುವAತೆ ಸದಸ್ಯರು ಸಭೆಯ ಗಮನಕ್ಕೆ ತಂದರು. ಸದಸ್ಯ ಗಿರೀಶ್ ಚನ್ನಗಿರಪ್ಪ ಅವರು ಮಾತನಾಡಿ ಎಂಟನೇ ವಾರ್ಡ್ ನಗರದಲ್ಲಿಯೇ ಹಳೆಯ ವಾರ್ಡ್ಗಳಲ್ಲಿ ಒಂದಾಗಿದ್ದು ಸಮರ್ಪಕ ಅನುದಾನವಿಲ್ಲದೆ ಅಭಿವೃದ್ಧಿ ಕುಂಠಿತವಾಗಿದೆ . ಈ ವಾರ್ಡ್ ನಲ್ಲಿ ಪಿಜಿ , ನರ್ಸಿಂಗ್ ಹೋಮ್, ಹೋಟೆಲ್ ಸೇರಿದಂತೆ ವಾಣಿಜ್ಯ ಮಳಿಗೆಗಳು ಹೆಚ್ಚಿರುವ ಕಾರಣ ಪದೇ ಪದೇ ಯುಜಿಡಿ ಸಮಸ್ಯೆ ಉಂಟಾಗುತ್ತಿದೆ. ಈ ಬಗ್ಗೆ ಹಲವು ಬಾರಿ ದೂರು ನೀಡಿದರು ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು. ಅಲ್ಲದೆ ನಗರದ ಬಹುತೇಕ ಮುಖ್ಯ ರಸ್ತೆ ಪಕ್ಕದಲ್ಲಿ ಪೆಟ್ಟಿಗೆ ಅಂಗಡಿ ಗಳನ್ನು ಇಡಲಾಗುತ್ತಿದೆ ಇದರಿಂದ ಸುಗಮ ಸಂಚಾರಕ್ಕೆ ತೊಂದರೆಯಾಗಿದೆ. ಈ ಬಗ್ಗೆ ನಗರಸಭೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು .

ಗೌರವಧನ ಹೆಚ್ಚಳಕ್ಕೆ ಮನವಿ:

ಸದಸ್ಯರಾದ ಬಾಬು ಅವರು ಮಾತನಾಡಿ ನಗರಸಭೆಯ ಸದಸ್ಯರಿಗೆ ಕನಿಷ್ಠ 50,000 ಗೌರವ ಧನವನ್ನು ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಮನವಿ ಮಾಡಿದರು. ಶಾಸಕರು ನಿವೃತ್ತಿಯಾದರೆ ಪೆನ್ಷನ್ ಅನ್ನು ನೀಡುತ್ತಾರೆ ಆದರೆ ನಗರಸಭೆಯ ಜನಪ್ರತಿನಿಧಿಗಳಿಗೆ ನಿವೃತ್ತಿ ನಂತರ ಯಾವುದೇ ಪೆನ್ಷನ್ ಬರುವುದಿಲ್ಲ, ಸಂಬಂ ನಗರಸಭೆಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದರು.

13ನೇ ವಾರ್ಡಿನ ಸದಸ್ಯರು ಮಾತನಾಡಿ ನಗರದ ವಾರ್ಡ್ ಗಳಲ್ಲಿ ಇರುವ ಕನ್ಸರ್ವೆನ್ಸಿಗಳಲ್ಲಿ ಖಾಸಗಿಯವರು ಗೇಟ್ಗಳನ್ನು ಅಳವಡಿಸಿ ಅತಿಕ್ರಮ ಮಾಡಿದ್ದಾರೆ. ಇದರಿಂದ ಪಾರ್ಕಿಂಗ್ ಸೇರಿದಂತೆ ಅಕ್ಕಪಕ್ಕದವರಿಗೆ ತೀವ್ರ ತೊಂದರೆಯಾಗುತ್ತಿದ್ದು ಇದನ್ನು ತೆರವು ಮಾಡುವ ನಿಟ್ಟಿನಲ್ಲಿ ನಗರಸಭೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಸಭೆಯ ಗಮನಕ್ಕೆ ತಂದರು .

ಸುಂಕ ನಿಗಧಿಗೆ ಒತ್ತಾಯ: ನಗರಸಭೆ ವ್ಯಾಪ್ತಿಗೆ 25 ಗ್ರಾಮಗಳು ಸೇರಿದಂತೆ ಒಂಬತ್ತು ಗ್ರಾಮ ಪಂಚಾಯಿತಿ ಸೇರಿರುವ ಹಿನ್ನೆಲೆಯಲ್ಲಿ ಆದಷ್ಟು ಕೂಡಲೇ ಸುಂಕ ವಸೂಲಿ ಟೆಂಡರ್ ಕರೆಯಬೇಕು ಹಾಗೂ ಸುಂಕ ವಸೂಲಿ ಮಾರ್ಗಸೂಚಿಯನ್ನು ಪರಿಷ್ಕರಣೆ ಮಾಡುವಂತೆ ಸದಸ್ಯರು ಮನವಿ ಮಾಡಿದರು.

ಕುಡಿಯುವ ನೀರಿನ ಸೌಲಭ್ಯ: ಶೌಚಾಲಯ ನಿರ್ಮಾಣ ಮಾಡಿ ನಗರದ ಆಯಕಟ್ಟು ಪ್ರದೇಶಗಳಲ್ಲಿ ಕುಡಿಯುವ ನೀರು ಶೌಚಾಲಯದ ಕೊರತೆ ಸಾಕಷ್ಟು ಇದ್ದು ಕೂಡಲೇ ನಗರಸಭೆಯಿಂದ ಅಗತ್ಯ ಸ್ಥಳವನ್ನು ಗುರುತಿಸಿ ಶೌಚಾಲಯ ಹಾಗೂ ಕುಡಿಯುವ ನೀರಿನ ಸೌಲಭ್ಯ ಒದಗಿಸುವಂತೆ ಶಾಸಕ ಎಚ್.ಪಿ ಸ್ವರೂಪ್ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದರು. ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷೆ ಮಂಗಳ ಪ್ರವೀಣ್, ಆಯುಕ್ತರಾದ ಸತೀಶ್, ಸೇರಿದಂತೆ ಇತರೆ ಅಧಿಕಾರಿಗಳು ಹಾಜರಿದ್ದರು.

ಪೌರಕಾರ್ಮಿಕರ ಪ್ರತಿಭಟನೆ: ಶಾಸಕರಿಂದ ಭರವಸೆ ಹಲವು ವರ್ಷಗಳಿಂದ ನಗರಸಭೆಯಲ್ಲಿ ದುಡಿಯುತ್ತಿರುವ ಪೌರಕಾರ್ಮಿಕರಿಗೆ ನಿವೇಶನ ಸೇರಿದಂತೆ ಅಗತ್ಯ ಸೌಲಭ್ಯ ಒದಗಿಸುವಂತೆ ಪೌರಕಾರ್ಮಿಕರು ನಗರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಸಂದರ್ಭದಲ್ಲಿ ಸಭೆಯ ನಡುವೆಯೇ ಹೊರಬಂದ ಶಾಸಕ ಸ್ವರೂಪ್ ಹಾಗೂ ನಗರಸಭೆ ಅಧ್ಯಕ್ಷ ಮೋಹನ್ ಅವರಿಗೆ ಮಾಹಿತಿ ನೀಡಿದ ದಲಿತ ಮುಖಂಡರಾದ ಕೃಷ್ಣದಾಸ್ ಅವರು ಹಲವಾರು ವರ್ಷಗಳಿಂದ ಪೌರಕಾರ್ಮಿಕರಿಗೆ ನಿವೇಶನ ಒದಗಿಸುವಲ್ಲಿ ವಿಳಂಬ ಮಾಡಲಾಗುತ್ತಿದೆ .

ನಗರದ ಸ್ವಚ್ಛತೆಗೆ ಪ್ರಮುಖ ಕಾರಣರಾಗಿರುವ ಪೌರಕಾರ್ಮಿಕರಿಗೆ ಕೂಡಲೇ ನಗರಸಭೆಯಿಂದ ಅಗತ್ಯ ನಿವೇಶನಗಳನ್ನು ಒದಗಿಸಬೇಕು ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕರು ನಿಮ್ಮ ಮನವಿಯನ್ನು ಪರಾಮರ್ಶಿಸಿ ಆದಷ್ಟು ಕೂಡಲೇ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ನಂತರ ಪೌರಕಾರ್ಮಿಕರು ಪ್ರತಿಭಟನೆಯನ್ನು ಹಿಂಪಡೆದರು .

Post a Comment

Previous Post Next Post