ಹಾಸನ: ಮಳೆಯ ನೀರನ್ನು ಸಂಗ್ರಹಿಸಿ ಅದನ್ನು ಬಳಕೆ ಮಾಡುವ ಬಗ್ಗೆ ಪ್ರತಿ ಮನೆ ಮನೆಗೂ ಕರಪತ್ರ ನೀಡಿ ಜಾಗೃತಿ ಮೂಡಿಸುವ ಆಂದೋಲನವನ್ನು ಮಾಡಲಾಗುವುದು ಎಂದು ಜಿಲ್ಲಾ ಹಿರಿಯ ನಾಗರೀಕರ ವೇದಿಕೆಯ ಅಧ್ಯಕ್ಷ ಡಾ.ವೈ.ಎಸ್.ವೀರಭದರಪ್ಪ ಮತ್ತು ಆರ್.ಪಿ.ವೆಂಕಟೇಶ್ ಮೂರ್ತಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಮಳೆ ನೀರಿನ ಬಳಕೆ ಮೂಲಕ ಕುಡಿಯುವ ನೀರಿನ ಅಗತ್ಯಕ್ಕೆ ಉತ್ತಮ ಪರಿಹಾರವಾಗಿ ಒಂದು ಆಂದೋಲನ ಮಾಡಲಾಗುವುದು. ಈ ಬಗ್ಗೆ ಜಿಲ್ಲಾಧಿಕಾರಿಗಳ ಕರೆದು ಸಭೆ ಮಾಡಿ ಮನೆ ಮನೆಗೆ ಅರಿವು ಮೂಡಿಸಲಾಗುವುದು. ಹಾಸನ ನಗರದ ಕೆಲವು ನಾಗರೀಕರು ಮಳೆ ನೀರನ್ನು ಸಂಗ್ರಹಿಸಿ ವರ್ಷಪೂರ್ತಿ ಕುಡಿಯಲು ಹಾಗೂ ಅಡುಗೆ ಮಾಡಲು ಬಳಸುತ್ತಿರುವುದು ಬಹಳ ಸ್ವಾಗತಾರ್ಹ ಬೆಳವಣಿಗೆಯಾಗಿದೆ.ಮುಖ್ಯವಾಗಿ ಹಾಸನದ ಚನ್ನಪಟ್ಟಣ ಬಡಾವಣೆ ನಿವಾಸಿಗಳಾದ ಕೆ.ವಿ.ಮಾಲತೇಶ್ ಮತ್ತು ಕವಿತಾ ದಂಪತಿಗಳು ತಮ್ಮಮನೆಯಲ್ಲಿ ತಾರಸಿ ಕೈತೋಟ ಮಾಡಿರುವುದಲ್ಲದೆ, ಮಳೆ ನೀರನ್ನು ಸಂಗ್ರಹಿಸಿ ಬಳಸುತ್ತಿರುವ ಬಗ್ಗೆ ನೋಡಿ ನಮಗೆಲ್ಲಾ ಬಹಳ ಸಂತೋಷವಾಗಿದೆ ಎಂದರು. ಸಾಮಾನ್ಯವಾಗಿ ಬಹಳ ಜನರು ತಮ್ಮ ಮನೆಗಳಲ್ಲಿ ಶುದ್ಧ ಕುಡಿಯುವ ನೀರಿಗಾಗಿ ಅಕ್ವಾ ಗಾರ್ಡ್ ಮುಂತಾದ ಕಂಪನಿಗಳ ಫಿಲ್ಟರ್ ಯಂತ್ರಗಳನ್ನು ಬಳಸುತ್ತಿದ್ದಾರೆ.ಹೀಗೆ ಶುದ್ದೀಕರಣಗೊಂಡ ನೀರಿನಲ್ಲಿ ಅಗತ್ಯವಾದ ಖನಿಜಾಂಶಗಳು ಉಳಿಯುವುದಿಲ್ಲ ಮತ್ತು ಶುದ್ದೀಕರಣದ ಪ್ರಕ್ರಿಯೆಯಲ್ಲಿ ಅಪಾರ ಪ್ರಮಾಣದಲ್ಲಿ ನೀರು ಪೋಲಾಗುತ್ತದೆ. ಜೊತೆ ಸಂಪುಗಳಿಂದ ನೀರೆತ್ತಲು ಮತ್ತು ಶುದ್ದೀಕರಣದ ನೀರಿನಲ್ಲಿ ಅಗತ್ಯವಾದ ಖನಿಜಾಂಶಗಳು ಉಳಿಯುವುದಿಲ್ಲ ಮತ್ತು ಶುದ್ದೀಕರಣದ ಪ್ರಕ್ರಿಯೆಯಲ್ಲಿ ಅಪಾರ ಪ್ರಮಾಣದಲ್ಲಿ ನೀರು ಪೋಲಾಗುತ್ತದೆ. ಜೊತೆ ಸಂಪುಗಳಿಂದ ನೀರೆತ್ತಲು ಮತ್ತು ಶುದ್ದೀಕರಣದ ಯಂತ್ರಗಳ ಚಾಲನೆಗೆ ವಿದ್ಯುಚ್ಚಕ್ತಿ ಬೇಕಾಗುತ್ತದೆ. ಆದರೆ ಮಳೆಯ ನೀರನ್ನು ಸಂಗ್ರಹಿಸಿ ಬಳಸುವುದು ಆರೋಗ್ಯಕ್ಕೂ ಉತ್ತಮ, ವಿದ್ಯುಚ್ಚಕ್ತಿಯ ಅವಲಂಬನೆಯೂ ತಪ್ಪುತ್ತದೆ ಎಂದು ಅಭಿಪ್ರಾಯಪಟ್ಟರು.
Tags
ಹಾಸನ