ಅರಸೀಕೆರೆ: ಜಾಜೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಟೀಕೆರೆ (KATIKERE) ಗ್ರಾಮದ ಅವ್ಯವಸ್ಥೆ. ಗ್ರಾಮದ ಶೌಚಾಲಯದ ಕೊಳಚೆ ನೀರಿನೊಂದಿಗೆ ವಾಸ ಮಾಡುತ್ತಿರುವ ಗ್ರಾಮದ ನಿವಾಸಿಗಳು, ಸ್ವಚ್ಛ ಭಾರತ ಪರಿಕಲ್ಪನೆ ತಿಳಿಯದ ಗ್ರಾಮ ಪಂಚಾಯಿತಿ ಅಧಿಕಾರಿಗಳು, ಜನಪ್ರತಿನಿಧಿಗಳು ಕ್ಯಾರೆ ಎಂದು ಹೇಳುತ್ತಿಲ್ಲ. ಗ್ರಾಮದ ಜನರ ಆರೋಗ್ಯದ ಜೊತೆ ಪಿಡಿಒ(PDO) ರವರು ಚೆಲ್ಲಾಟ ನಡೆಸುತ್ತಿದ್ದಾರೆ ಕಳೆದ ಹಲವು ವರ್ಷಗಳಿಂದ ಒಂದೇ ಪಂಚಾಯತಿಯಲ್ಲಿ ಬೇರುರಿರುವ ಪಿಡಿಒ ರವರು ಸಮಸ್ಯೆಯ ಬಗ್ಗೆ ಯಾವುದೇ ಕ್ರಮವನ್ನು ವಹಿಸಿರುವುದಿಲ್ಲ ಗ್ರಾಮದಲ್ಲಿ ಮಲಮೂತ್ರ ತುಂಬಿದ ನೀರಿನ ಮಧ್ಯೆ ರೋಗರುಜುನಿಯೊಂದಿಗೆ ಜನರ ಜೀವನ, ಅವೈಜ್ಞಾನಿಕ ರಸ್ತೆ ನಿರ್ಮಾಣ, ಗ್ರಾಮಸ್ಥರ ಗೋಳು ಕೇಳೋರು ಯಾರು ಇಲ್ಲ ಕೂಡಲೇ ಅಧಿಕಾರಿಗಳು ಎಚ್ಚೆತ್ತು ಕೊಂಡು ಸಮಸ್ಯೆಯನ್ನು ಬಗೆ ಹರಿಸಬೇಕೆಂದು ಸ್ಥಳಿಯರ ಅಕ್ರೋಶ.
Tags
ಅರಸೀಕೆರೆ