ಹಾಸನದಲ್ಲಿ ಹಾಡುಹಗಲೇ ಉದ್ಯಮಿಯ ಬರ್ಬರ ಹತ್ಯೆ

 HASSAN-BREAKING ಹಾಸನ : ಹಾಡುಹಗಲೇ  ಕೃಷ್ಣೇಗೌಡ (55) ಉದ್ಯಮಿಯ ಬರ್ಬರ ಹತ್ಯೆ.  ಹಾಸನ ಹೊರವಲಯದ ನಾಗತವಳ್ಳಿ ಗ್ರಾಮದ ಬಳಿ ಘಟನೆ.  ಇನ್ನೋವಾ ಕಾರಿನಲ್ಲಿ ಬಂದು ಕೊಲೆ ಮಾಡಿ ಎಸ್ಕೇಪ್ ಆಗಿರುವ ಹಂತಕರು. ಗ್ರಾನೈಟ್ ಬ್ಯುಸಿನೆಸ್ ಮಾಡುತ್ತಿದ್ದ ಕೃಷ್ಣೇಗೌಡರವರು  ಮಾಜಿ ಸಚಿವ ರೇವಣ್ಣ ಕುಟುಂಬಕ್ಕೆ ಆಪ್ತರಾಗಿದ್ದರು. ಕೃಷ್ಣೇಗೌಡ ಶ್ರೀರಾಮ ಮಾರ್ಬಲ್ಸ್ ಮಾಲೀಕರಾಗಿದ್ದು ಗ್ರಾನೈಟ್ ಫ್ಯಾಕ್ಡರಿಯ ಎದುರೇ ಮಾರಕಾಸ್ತ್ರಗಳಿಂದ ಹಂತಕರು ಕೊಚ್ಚಿ ಕೊಲೆಗೈದರೆ. ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


 
ಹಾಸನ : ಹಾಸನದ ಗ್ರಾನೈಟ್ ಉದ್ಯಮಿ ಮತ್ತು ಜೆಡಿಎಸ್ ಪಕ್ಷದ ಮುಖಂಡರಾಗಿದ್ದ ರೇವಣ್ಣ ಅವರ ಆಪ್ತ ಕೃಷ್ಣೇಗೌಡ ಅವರನ್ನು ಹೊಳೆನರಸೀಪುರ ರಸ್ತೆಯಲ್ಲಿರುವ ಕೈಗಾರಿಕಾ ಪ್ರದೇಶದಲ್ಲಿ ಬರ್ಬರ ಹತ್ಯೆ ಮಾಡಲಾಗಿದ್ದು ಹಾಸನ ನಗರ ಬೆಚ್ಚಿ ಬಿದ್ದಿದೆ.

ನಗರದ ಕುವೆಂಪು ನಗರ ಬಡಾವಣೆ ನಿವಾಸಿಯಾದ ಕೃಷ್ಣೇಗೌಡರು ಹೊಳೆನರಸೀಪುರ ರಸ್ತೆಯಲ್ಲಿರುವ ಕೈಗಾರಿಕಾ ಪ್ರದೇಶದಲ್ಲಿದ್ದ ತಮ್ಮ ಫ್ಯಾಕ್ಟರಿಗೆ ಬರುವಿಕೆಯನ್ನು ಕಾಯ್ದು ಕುಳಿತಿದ್ದ ಹಂತಕರು ಕೃಷ್ಣೇಗೌಡರು ಕಾರಿನಿಂದ ಇಳಿಯುವ ವೇಳೆಗೆ ಲಾಂಗ್ಗಳಿಂದ ಕೃಷ್ಣೇಗೌಡರನ್ನು ಹತ್ಯೆಗೈದಿದ್ದಾರೆಂದು ಹೇಳಲಾಗುತ್ತಿದೆ.

ಕೃಷ್ಣೇಗೌಡರು ಹೊಳೆನರಸೀಪುರ ರಸ್ತೆಯಲ್ಲಿರುವ ಕೈಗಾರಿಕಾ ಪ್ರದೇಶದಲ್ಲಿ ಇಂಡಸ್ಟ್ರಿಯಲ್ ವ್ಯಾಪಾರವು ಮೂರು ನಾಲ್ಕು ವರ್ಷಗಳ ಹಿಂದೆ ಸ್ಥಗಿತವಾಗಿತ್ತು. ಇನ್ನು ಇತ್ತೀಚೆಗೆ ಹಾಸನ ಜಿಲ್ಲೆಯಲ್ಲಿ ಕೆಲವರ ಮಾತು ಕೇಳಿ ಶುಭೋದಯ ದಿನ ಪತ್ರಿಕೆಯೊಂದನ್ನು ಹೊರ ತಂದಿದ್ದರು. ತರುವಾಯ ಆ ಪತ್ರಿಕೆ ನಿಂತು ಹೋಗಿತ್ತು. ಪತ್ರಿಕೆ-ಚಿತ್ರೋಧ್ಯಮದ ಹೆಸರಿನಲ್ಲಿ ಅವರು ತಾವು ಅಪಾರವಾಗಿ ನಂಬಿದ್ದ ಹಾಸನದ ಕೆಲ ವ್ಯಕ್ತಿಗಳಿಂದ ಕೋಟ್ಯಾಂತರ ರೂ ಮೋಸ ಹೋಗಿದ್ದರು. ಬಳಿಕ ಈ ಎಲ್ಲಾ ಮೋಸಗಳಿಗೆ ಒಬ್ಬ ವ್ಯಕ್ತಿ ಕಾರಣವೆಂದು ಆತನಿಂದ ಹಣ ವಸೂಲಿಗೆ ಸಾಕಷ್ಟು ಪ್ರಯತ್ನಿಸಿ ಬಳಿಕ ಅಲ್ಲಿಯೂ ಪೊಲೀಸ್ ಕೇಸು ಹಾಕಿಸಿ ಕೊಂಡಿದ್ದರು.

ಒಂದು ಮೂಲದ ಪ್ರಕಾರ ಕೃಷ್ಣೇಗೌಡರ ಕಾರನ್ನು ಹಿಂಬಾಲಿಸಿ ಬಂದ ಹಂತಕರು ಅವರ ಇಂಡಸ್ಟ್ರಿ ಬಳಿಯೇ ಹತ್ಯೆಗೈದಿದ್ದಾರೆ. ಎರಡು ಬೈಕ್ಗಳಲ್ಲಿ ಬಂದಿದ್ದ ನಾಲ್ವರು ಈ ಕೃತ್ಯ ನಡೆಸಿದ್ದಾರೆಂದು ಶಂಕಿಸಲಾಗಿದೆ. ಆದರೆ ಪ್ರತಿನಿತ್ಯ ಆ ಫ್ಯಾಕ್ಟರಿಗೆ ಕೃಷ್ಣೇಗೌಡರು ಬರುತ್ತಿದ್ದರು ಎನ್ನಲಾಗಿದ್ದು ಇದನ್ನೇ ಕಾಯ್ದು ಕುಳಿತಿದ್ದ ಹಂತಕರು ಅವರ ಮೇಲೆರಗಿ ಹತ್ಯೆಗೈದಿದ್ದಾರೆ.

ಮೂಲತಃ ಮಾರ್ಬಲ್ ಉದ್ಯಮಿಯಾಗಿ ಗುರುತಿಸಿ ಕೊಂಡು ಜೆಡಿಎಸ್ ನಾಯಕರ ಸಂಪರ್ಕ ಉಳಿಸಿಕೊಂಡಿದ್ದ ಕೃಷ್ಣೇಗೌಡರು ಈ ಹಿಂದೆ ಹಾಸನದ ಕುವೆಂಪು ನಗರ ಬಡಾವಣೆಯ ವಾರ್ಡ್ ನಂ 3ರಿಂದ ನಗರಸಭೆ ಚುನಾವಣೆಗೆ ಸ್ಪರ್ಧಿಸಿ ಪರಾಭವಗೊಂಡಿದ್ದರು. 
ಕಳೆದ ಲೋಕಸಭಾ ಚುನಾ ವಣೆ ಸಂದರ್ಭದಲ್ಲಿ ಹಾಸನದ ಮೆಡಿಕಲ್ ಶಾಪ್ ಮಾಲೀಕ ಸಂತೋಷ್ ಎಂಬಾತನಿಗೆ 2 ಕೋಟಿ ಹಣ ನೀಡಿದ್ದು ಹಣದ ವಸೂಲಿಗಾಗಿ ಸಂತೋಷ್ ವಿರುದ್ಧ ಸೆಟೆದು ನಿಂತಿದ್ದರು. ಆತನಿಂದ ಹಣದ ವಸೂಲಿಗೆ ಬೆನ್ನು ಬಿದ್ದು ಪೊಲೀಸರಿಂದ ಕೇಸು ಹಾಕಿಸಿಕೊಂಡಿದ್ದರು.

Post a Comment

Previous Post Next Post