ಹಾಸನ: ಕಾಡಾನೆ ದಾಳಿಯಿಂದ ಮಹಿಳೆ ಸಾವನಪ್ಪಿರುವ ಘಟನೆ ಜಿಲ್ಲೆಯ ಸಕಲೇಶಪುರ ತಾಲೂಕಿನ ವಡೂರು ಗ್ರಾಮದಲ್ಲಿ ನಡೆದಿದೆ.
ನಾರ್ವೆ ಗ್ರಾಮದ ಕವಿತಾ (37) ಗಾಯಗೊಂಡ ಮಹಿಳೆ. ಕವಿತಾ ಅವರನ್ನು ಬೇಲೂರು ತಾಲೂಕಿನ ನಾರ್ವೆ ಗ್ರಾಮಕ್ಕೆ ಮದುವೆ ಮಾಡಿಕೊಡಲಾಗಿತ್ತು. ಗುರುವಾರ ತನ್ನ ತಾಯಿಯನ್ನು ನೋಡಲು ಕವಿತಾ ವಡೂರು ಗ್ರಾಮಕ್ಕೆ ಬಂದಿದ್ದರು. ಶುಕ್ರವಾರ ಬೆಳಗ್ಗೆ 6.30 ಸಮಯಲ್ಲಿ ಮನೆಯ ಹತ್ತತಿರವೇ ಕಾಣಿಸಿಕೊಂ ಒಂಟಿ ಸಲಗ ಕವಿತಾ ಅವರ ಮೇಲೆ ಏಕಾಏಕಿ ದಾಳಿ ನಡೆಸಿದೆ. ಈ ವೇಳೆ ಆನೆಯನ್ನು ಕಂಡು ಕವಿತಾ ಕಿರುಚಾಡಿದ್ದರಿಂದ ಆನೆ ಕವಿತಾ ಅವರನ್ನು ಬಿಟ್ಟು ಕಾಫಿ ತೋಟದೊಳಗೆ ಹೋಗಿದೆ.
ಕೂಡಲೇ ಮಹಿಳೆಯನ್ನು ಗ್ರಾಮಸ್ಥರು ಹಾಗೂ ಆರ್ ಆರ್ ಟಿ ಸಿಬ್ಬಂದಿ ಚಿಕತ್ಸೆಗಾಗಿ ಸಕಲೇಶಪುರ ಕ್ರಾಫರ್ಡ್ ಆಸ್ಪತ್ರೆಗೆ ದಾಖಲಿಸಿ ವೈದ್ಯರ ಸಲಹೆ ಮೇಲೆ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದಾದರೂ ಚಿಕಿತ್ಸೆ ಫಲಿಸದೆ ಸಾವನಪ್ಪಿದ್ದಾರೆ.
ಗ್ರಾಮಸ್ಥರ ಆಕ್ರೋಶ:
ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಆನೆಗಳು ಗ್ರಾಮದಲ್ಲೇ ಬೀಡು ಬಿಟ್ಟಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ಆನೆಗಳನ್ನು ಕಾಡಿಗೆ ಓಡಿಸಲು ಯಾವುದೇ ಕ್ರಮ ಕೈಗೊಳ್ಳದಿರುವುದೇ ಮಹಿಳೆಯ ಸಾವಿಗೆ ಕಾರಣ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ
Tags
ಸಕಲೇಶಪುರ