ಆ.26-27 ರಂದು 49ನೇ ರಾಜ್ಯಮಟ್ಟದ ಬ್ರಾಹ್ಮಣ ವಧು ವರಾನ್ವೇಷಣಾ ಸಮಾವೇಶ :ಶ್ರೀನಿವಾಸ್ ಎಸ್. ಭಾರಧ್ವಾಜ್

ಹಾಸನ : ನಗರದ ಶೃಂಗೇರಿ ಶ್ರೀ ಶಂಕರ ಮಠದ ಶ್ರೀ ಭಾರತೀ ತೀರ್ಥ ಕೃಪಾ ಸಭಾಂಗಣದಲ್ಲಿ ಆಗಸ್ಟ್ 26 ರಿಂದ 27 ರ ವರೆಗೂ 49ನೇ ರಾಜ್ಯ ಮಟ್ಟದ ಬೃಹತ್ ತ್ರಿಮತಸ್ಥ ಬ್ರಾಹ್ಮಣ ವಧು-ವರಾನ್ವೇಷಣಾ ಸಮಾವೇಶ ನಡೆಯಲಿದೆ ಎಂದು ಸಪ್ತಪದಿ ಫೌಂಡೇಶನ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ಎಸ್. ಭಾರಧ್ವಾಜ್ ಮತ್ತು ಪಿ.ಎಸ್. ವೆಂಕಟೇಶ್ ಹಾಗೂ ಪಿ.ಎನ್. ವೆಂಕಟೇಶ್ ಮೂರ್ತಿ ತಿಳಿಸಿದರು.   


       ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಶ್ರೀ ಶೃಂಗೇರಿ ಶಂಕರ ಮಠ, ಜಿಲ್ಲಾ ಬ್ರಾಹ್ಮಣ ಸಭಾ, ನಗರ ಬ್ರಾಹ್ಮಣ ಸಭಾ, ಹಾಸನ, ಸಪ್ತಪದಿ ಫೌಂಡೇಷನ್ ಟ್ರಸ್ಟ್ (ರಿ), ಮೈಸೂರು ಬೆಂಗಳೂರು, ಹೊಯ್ಸಳ ಕರ್ನಾಟಕ ಸಂಘ, ಹಾಸನ ಜಿಲ್ಲೆ, ಬಬ್ರೂರಕಮ್ಮೆ ಸೇವಾ ಸಂಘ ಹಾಸನ, ಜಿಲ್ಲಾ ಪಾಕತಜ್ಞರ ಸಂಘ, ಶ್ರೀ ಸೀತಾರಾಮಾಂಜನೇಯ ಸೇವಾ ಸಮಿತಿ, ಜಿಲ್ಲಾ ಅರ್ಚಕರ ಸಂಘ, ಹಾಸನ, ಮಾಧ್ವ ಸಂಘ, ಹಾಸನ, ಇವರುಗಳ ಸಂಯುಕ್ತಾಶ್ರಯದಲ್ಲಿ ಆ.26 ಶನಿವಾರ ಮತ್ತು 27 ನೇ ಭಾನುವಾರ ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ 49 ನೇ ರಾಜ್ಯಮಟ್ಟದ ಬ್ರಾಹ್ಮಣ ವಧು-ವರಾನ್ವೇಷಣಾ ಸಮಾವೇಶವನ್ನು ನಗರದ ಶ್ರೀ ಭಾರತೀತೀರ್ಥ ಕೃಪಾ ಸಭಾಂಗಣ, ಶ್ರೀ ಶೃಂಗೇರಿ ಶಂಕರ ಮಠ, ಶಂಕರ ಮಠದ ರಸ್ತೆ, ಹಾಸನ ಇಲ್ಲಿ ಆಯೋಜಿಸಲಾಗಿದೆ ಎಂದರು. ಹೆಣ್ಣು ಮಕ್ಕಳಿಗೆ ಹಾಗೂ ವಿಕಲಚೇತನರಿಗೆ ಉಚಿತ ನೊಂದಣಿ ಹಾಗೂ ಪ್ರವೇಶ. ಹಾಸನ ಜಿಲ್ಲೆಯ ಸುತ್ತಮುತ್ತಲಿನ ಆಸಕ್ತ ವಧು-ವರರು ಆ.20 ರಿಂದ 25 ರವರೆಗೆ 1 ಪೋಸ್ಟ್ ಕಾರ್ಡ್ ಸೈಜ್ ಫೋಟೋ, 1 ಬಯೋಡೇಟಾ, 1 ಜಾತಕದೊಂದಿಗೆ ನೊಂದಾಯಿಸಿಕೊಳ್ಳಲು ಕೋರಲಾಗಿದೆ. ಮಾನ್ಯ ವಿಪ್ರ ಬಾಂಧವರು ಈ ಅಪರೂಪದ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸದುಪಯೋಗಪಡಿಸಿಕೊಳ್ಳಲು ಮನವಿ ಮಾಡಿದರು. ನೋಂದಾಣಿ ಶುಲ್ಕ 2 ಸಾವಿರ ರೂಗಳು.. ಹೆಚ್ಚಿನ ಮಾಹಿತಿಗಾಗಿ ಮೊ. 9449425536/9380253350 ಸಂಪರ್ಕಿಸಬಹುದು. ನೋಂದಾಯಿಸುವ ಸ್ಥಳ : ಶ್ರೀ ಭಾರತೀತೀರ್ಥ ಕೃಪಾ ಸಭಾಂಗಣ, ಶ್ರೀ ಶೃಂಗೇರಿ ಶಂಕರ ಮಠ, ಶಂಕರ ಮಠದ ರಸ್ತೆ, ಹಾಸನ ಇಲ್ಲಿ ಸಂಪರ್ಕಿಸಬಹುದು ಎಂದು ತಿಳಿಸಿದರು.             

      ಪತ್ರಿಕಾಗೋಷ್ಠಿಯಲ್ಲಿ ಗೋಷ್ಠಿಯಲ್ಲಿ ಹಾಸನದ ಬ್ರಾಹ್ಮಣ ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಜಿ. ಸುರೇಶ್, ಎನ್. ಸುದಿಂದ್ರ, ಎಸ್. ಬಾಲಕೃಷ್ಣ ಇತರರು ಉಪಸ್ಥಿತರಿದ್ದರು.

Post a Comment

Previous Post Next Post