ಮಾಣಿಕ್ಯ ಪ್ರಕಾಶನದ ರಾಜ್ಯಮಟ್ಟದ ವಿವಿಧ ದತ್ತಿ ನಿಧಿ ಪ್ರಶಸ್ತಿಗಳಿಗೆ ಕೃತಿಗಳ ಆಹ್ವಾನ

ಹಾಸನ : ಹಾಸನದ ಮಾಣಿಕ್ಯ ಪ್ರಕಾಶನ (ರಿ.), ಸಂಸ್ಥೆಯು ೨೦೧೫ ರಿಂದಲೂ ವೈವಿಧ್ಯಮಯ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದು, ಸಾಹಿತಿಗಳಿಗೆ ಪ್ರೋತ್ಸಾಹ ನೀಡುವ ಹಿನ್ನೆಲೆಯಲ್ಲಿ ಈಗಾಗಲೇ ರಾಜ್ಯದ ವಿವಿಧ ಲೇಖಕರ ೬೦ ಕ್ಕೂ ಹೆಚ್ಚು ಕೃತಿಗಳನ್ನು ಮುದ್ರಣ ಮಾಡಿ ಕನ್ನಡ ಸಾರಸ್ವತ ಲೋಕಕ್ಕೆ ನೀಡುವುದರ ಜೊತೆಗೆ ದಾನಿಗಳ ಸಹಕಾರದಲ್ಲಿ ವಿವಿಧ ಪ್ರಕಾರದ ಸಾಹಿತ್ಯ ಕೃತಿಗಳಿಗೆ ದತ್ತಿ ಪುರಸ್ಕಾರ ನೀಡಿ ಗೌರವಿಸುತ್ತಿದೆ ಎಂದು ಪ್ರಕಾಶಕಿ ದೀಪಾ ಉಪ್ಪಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಿ. ಲಕ್ಷ್ಮಿ ದ್ಯಾವಪ್ಪ ಸ್ಮಾರಕ ಕಾವ್ಯ ಮಾಣಿಕ್ಯ ರಾಜ್ಯ ಪುರಸ್ಕಾರ ೨೦೨೩ (ಕಾವ್ಯ)

ದಿ. ಲಕ್ಷ್ಮಿ ದ್ಯಾವಪ್ಪ ಸ್ಮಾರಕ ಕಾವ್ಯ ಮಾಣಿಕ್ಯ ರಾಜ್ಯ ಪುರಸ್ಕಾರಕ್ಕೆ ೨೦೨೨ ರಲ್ಲಿ ಮೊದಲ ಮುದ್ರಣವಾಗಿ ಪ್ರಕಟಗೊಂಡ ಕನ್ನಡ ಸ್ವತಂತ್ರ ಕಾವ್ಯ ಕೃತಿಗಳನ್ನು ಆಹ್ವಾನಿಸಲಾಗಿದೆ. ಆಹ್ವಾನಿತ ಕೃತಿಗಳಲ್ಲಿ ಆಯ್ಕೆಯಾದ ಪ್ರಥಮ ೩೦೦೦ ರೂ ನಗದು ಮತ್ತು ಪ್ರಶಸ್ತಿ ಫಲಕ, ದ್ವಿತೀಯ ೨೦೦೦ ರೂ ನಗದು ಮತ್ತು ಪ್ರಶಸ್ತಿ ಪುರಸ್ಕಾರ, ತೃತೀಯ ೧೦೦೦ ರೂ ನಗದು ಮತ್ತು ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಲಾಗುವುದು.

ಎನ್. ಶೈಲಜಾ ಹಾಸನ್ ದತ್ತಿ ಪುರಸ್ಕಾರ ೨೦೨೩ (ಲಲಿತ ಪ್ರಬಂಧ)

ಹಿರಿಯ ಸಾಹಿತಿ ಎನ್. ಶೈಲಜಾ ಹಾಸನ ಹೆಸರಲ್ಲಿ ಕೊಡಮಾಡುವ ಎನ್. ಶೈಲಜಾ ಹಾಸನ ದತ್ತಿ ಪುರಸ್ಕಾರಕ್ಕೆ ೨೦೨೨ ರಲ್ಲಿ ಮೊದಲ ಮುದ್ರಣವಾಗಿ ಪ್ರಕಟಗೊಂಡ ಕನ್ನಡ ಸ್ವತಂತ್ರ ಲಲಿತ ಪ್ರಬಂಧ ಸಂಕಲನಗಳನ್ನು ಆಹ್ವಾನಿಸಲಾಗಿದೆ. ಆಯ್ಕೆಯಾದ ಅತ್ಯುತ್ತಮ ಒಂದು ಕೃತಿಗೆ ೩೦೦೦ ರೂ ನಗದು, ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಲಾಗುವುದು.

ಪದ್ಮಾವತಿ ವೆಂಕಟೇಶ್ ದತ್ತಿ ಪುರಸ್ಕಾರ ೨೦೨೩ (ಕಥೆ)

ಕವಯಿತ್ರಿ ಪದ್ಮಾವತಿ ವೆಂಕಟೇಶ್ ಹೆಸರಲ್ಲಿ ಕೊಡಮಾಡುವ ಪದ್ಮಾವತಿ ವೆಂಕಟೇಶ್ ದತ್ತಿ ಪುರಸ್ಕಾರಕ್ಕೆ ೨೦೨೨ ರಲ್ಲಿ ಮೊದಲ ಮುದ್ರಣವಾಗಿ ಪ್ರಕಟಗೊಂಡ ಕನ್ನಡ ಸ್ವತಂತ್ರ ಕಥಾ ಸಂಕಲನಗಳನ್ನು ಆಹ್ವಾನಿಸಲಾಗಿದೆ. ಆಯ್ಕೆಯಾದ ಒಂದು ಅತ್ಯುತ್ತಮ ಒಂದು ಕಥಾ ಸಂಕಲನಕ್ಕೆ ೨೦೦೦ ರೂ ನಗದು, ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಲಾಗುವುದು.

ದಿ. ಶಾಂತಮ್ಮ ನಾಗರಾಜ್ ಸ್ಮಾರಕ ದತ್ತಿ ಪುರಸ್ಕಾರ ೨೦೨೩ (ಹಾಸ್ಯ ಪ್ರಬಂಧ)

ಹಿರಿಯ ಸಾಹಿತಿ ತುರುವೇಕೆರೆ ಪ್ರಸಾದ್ ಪ್ರಾಯೋಜಿತ ದಿ. ಶಾಂತಮ್ಮ ನಾಗರಾಜ್ ಸ್ಮಾರಕ ದತ್ತಿ ಪುರಸ್ಕಾರಕ್ಕೆ ೨೦೨೨ ರಲ್ಲಿ ಮೊದಲ ಮುದ್ರಣವಾಗಿ ಪ್ರಕಟಗೊಂಡ ಕನ್ನಡ ಸ್ವತಂತ್ರ ಹಾಸ್ಯ ಪ್ರಬಂಧ ಕೃತಿಗಳನ್ನು ಆಹ್ವಾನಿಸಲಾಗಿದೆ. ಆಯ್ಕೆಯಾದ ಒಂದು ಅತ್ಯುತ್ತಮ ಒಂದು ಕೃತಿಗೆ ೩೦೦೦ ರೂ ನಗದು, ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಲಾಗುವುದು.

ಪ್ರಭಾವತಿ ಶೆಡ್ತಿ ದತ್ತಿ ಪುರಸ್ಕಾರ ೨೦೨೩ (ನಾಟಕ)

ರವಿಕಾಂತ ಹೆಗ್ಡೆ ಪ್ರಾಯೋಜಿ ಪ್ರಭಾವತಿ ಶೆಡ್ತಿ ದತ್ತಿ ಪುರಸ್ಕಾರಕ್ಕೆ ೨೦೨೨ ರಲ್ಲಿ ಮೊದಲ ಮುದ್ರಣವಾಗಿ ಪ್ರಕಟಗೊಂಡ ಕನ್ನಡ ಸ್ವತಂತ್ರ ನಾಟಕ ಕೃತಿಗಳನ್ನು ಆಹ್ವಾನಿಸಲಾಗಿದೆ. ಆಯ್ಕೆಯಾದ ಒಂದು ಅತ್ಯುತ್ತಮ ಕೃತಿಗೆ ೩೦೦೦ ರೂ ನಗದು, ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಲಾಗುವುದು.

ದಿ. ಮಹಾದೇವಮ್ಮ ಈ. ಕೃಷ್ಣಯ್ಯ ಸ್ಮಾರಕ ದತ್ತಿ ಪ್ರಶಸ್ತಿ ೨೦೨೩ (ಕಾದಂಬರಿ)

ಸಾಹಿತಿ ಲತಾಮಣಿ ಎಂ.ಕೆ.ತುರುವೇಕೆರೆ ಪ್ರಾಯೋಜಿತ ದಿ. ಮಹಾದೇವಮ್ಮ ಈ. ಕೃಷ್ಣಯ್ಯ ಸ್ಮಾರಕ ದತ್ತಿ ಪುರಸ್ಕಾರಕ್ಕೆ ೨೦೨೨ ರಲ್ಲಿ ಮೊದಲ ಮುದ್ರಣವಾಗಿ ಪ್ರಕಟಗೊಂಡ ಕನ್ನಡ ಸ್ವತಂತ್ರ ಕಾದಂಬರಿಗಳನ್ನು ಆಹ್ವಾನಿಸಲಾಗಿದೆ. ಆಯ್ಕೆಯಾದ ಒಂದು ಅತ್ಯುತ್ತಮ ಕಾದಂಬರಿಗೆ ೨೫೦೦ ರೂ ನಗದು, ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಲಾಗುವುದು.

ದಿ. ಫಾತಿಮಾಭಿ ಜನಾಬ್ ಸೈಯದ್ ಅಬ್ದುಲ್ ಘನೀ ಸಾಬ್ ಸ್ಮಾರಕ ದತ್ತಿ ಪುರಸ್ಕಾರ ೨೦೨೩ (ಗಜಲ್)

ಸಾಹಿತಿ ಡಾ. ಹಸೀನಾ ಎಚ್.ಕೆ. ಪ್ರಯೋಜಿತ ದಿ. ಫಾತಿಮಾಭಿ ಜನಾಬ್ ಸೈಯದ್ ಅಬ್ದುಲ್ ಘನೀ ಸಾಬ್ ಸ್ಮಾರಕ ದತ್ತಿ ಪುರಸ್ಕಾರಕ್ಕೆ ೨೦೨೨ ರಲ್ಲಿ ಮೊದಲ ಮುದ್ರಣವಾಗಿ ಪ್ರಕಟಗೊಂಡ ಕನ್ನಡ ಸ್ವತಂತ್ರ ಗಜಲ್ ಕೃತಿಗಳನ್ನು ಆಹ್ವಾನಿಸಲಾಗಿದೆ. ಆಯ್ಕೆಯಾದ ಒಂದು ಅತ್ಯುತ್ತಮ ಕೃತಿಗೆ ೨೫೦೦ ರೂ ನಗದು, ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಲಾಗುವುದು.

ಆಸಕ್ತ ಲೇಖಕರು ಸಂಬಂಧಪಟ್ಟ ಪ್ರತಿ ದತ್ತಿ ಪುರಸ್ಕಾರಕ್ಕೆ ೨೦೨೨ ರಲ್ಲಿ ಪ್ರಕಟವಾದ ತಮ್ಮ ಸಾಹಿತ್ಯ ಕೃತಿಗಳ ತಲಾ ಮೂರು ಪ್ರತಿಗಳನ್ನು ಹಾಗೂ ಪ್ರತ್ಯೇಕ ಹಾಳೆಯಲ್ಲಿ ಸ್ವ ಪರಿಚಯವನ್ನು ಲಗತ್ತಿಸಿ ೨೦೨೩ ಆಗಸ್ಟ್ ೧೫ ರೊಳಗೆ ತಲುಪುವಂತೆ ಈ ಕೆಳಗಿನ ವಿಳಾಸಕ್ಕೆ ಕಳುಹಿಸಿಕೊಡಬಹುದಾಗಿದೆ. ಪ್ರಕಾಶನ ಹಾಗೂ ತೀರ್ಪುಗಾರರ ನಿರ್ಣಯವೇ ಅಂತಿಮವಾಗಿರುತ್ತದೆ. ಸ್ಪರ್ಧೆಯಲ್ಲಿ ಆಯ್ಕೆಯಾಗದ ಕೃತಿಗಳನ್ನು ಹಿಂತಿರುಗಿಸಲಾಗುವುದಿಲ್ಲ.

ವಿಳಾಸ : ದೀಪಾ ಉಪ್ಪಾರ್, ಪ್ರಕಾಶಕರು, ಮಾಣಿಕ್ಯ ಪ್ರಕಾಶನ, ಸಾಹಿತ್ಯ ಸೌಧ, ಮುಖ್ಯ ರಸ್ತೆ, ಕೆಂಪೇಗೌಡ ಲೇಔಟ್, ಹಾಸನಾಂಬ ನಗರ ಎದುರುಗಡೆ, ಸಾಲಗಾಮೆ ರಸ್ತೆ, ಹಾಸನ – ೫೭೩೨೧೯, ಮೊ – ೯೭೩೯೮೭೮೧೯೭, ೯೪೮೩೪೭೦೭೯೪.

Post a Comment

Previous Post Next Post