ಹಾಸನ: ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಜನಪರ ಸಂಘಟನೆಗಳ ಒಕ್ಕೂಟ ಇವರ ಸಂಯುಕ್ತಾಶ್ರಯದಲ್ಲಿ ಬುಧವಾರದಂದು ಹಮ್ಮಿಕೊಳ್ಳಲಾಗಿದ್ದ ಮಲ್ನಾಡ್ ಮೆಹಬೂಬ್ ಅವರ ಬರಹದ ನನ್ನನೇಕೆ ಗಡಿಪಾರು ಮಾಡಲಾಯಿತು? ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ರಾಜ್ಯ ಕಾರನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು ಉದ್ಘಾಟಿಸಿ ಮಾತನಾಡಿದರು.
ಡಾ.ಬಿ.ಆರ್. ಅಂಬೇಡ್ಕರ್ ಅನುಭವಿಸಿದಂತಹ ಕಾಲಘಟ್ಟದಲ್ಲಿ ಅವರು ಪಟ್ಟಂತಹ ಹಿಂಸೆ, ಅವಮಾನಗಳು ಎಷ್ಟೆಲ್ಲಾ ಶೋಷಣೆಗಳು ನಡೆದಿದ್ದು, ಆ ಸಂದರ್ಭದಲ್ಲಿ ಅವರು ಸಹನೆಯನ್ನು ಕಳೆದುಕೊಂಡು ಕತ್ತಿ, ಗುರಾಣಿಗಳಿಡಿದುಕೊಂಡು ಹೊರಟಿದ್ದರೇ ಈ ದೇಶದ ಇತಿಹಾಸವನ್ನು ಸರಿಯಾದ ಮಾರ್ಗದಲ್ಲಿ ತೆಗೆದುಕೊಂಡು ಹೋಗಲು ಆಗುತಿತ್ತ ಎಂದರು.ಚಳುವಳಿಗಳು ಇಲ್ಲ ಎಂದಿದ್ದರೇ ಪ್ರಜಾಪ್ರಭುತ್ವ ಯಾವತ್ತೊ ಸತ್ತುಹೋಗುತಿತ್ತು.ಯಾರು ಕೂಡ ನಿರೀಕ್ಷೆ ಮಾಡದ ರೀತಿ ಅವನತಿಯತ್ತ ಸಾಗುತಿತ್ತು ಎಂದು ಅಭಿಪ್ರಾಯಪಟ್ಟರು ಮೋಸವಾದಗ, ದೌರ್ಜನ್ಯ ಇತರೆ ದುರ್ಘಟನೆ ನಡೆದಾಗ ಇಂತಹ ಚಳುವಳಿಗಳು ನಡೆಯುತ್ತಿದೆ ಎಂದರು.
Tags
ಹಾಸನ