ಹಾಸನದ ಹಾಸ್ಟೆಲ್ ಹುಡುಗರೊಂದಿಗೆ ಕಿರಿಕ್ ಮಾಡಿದ PC ಸಸ್ಪೆಂಡ್, PSI ಸೇರಿ ಮೂವರಿಗೆ ನೋಟಿಸ್

ಹಾಸನ : ನಗರದ‌ ಬಾಲಕರ ಸರ್ಕಾರಿ ವಿದ್ಯಾರ್ಥಿ ನಿಲಯದ‌ ವಿದ್ಯಾರ್ಥಿಗಳೊಂದಿಗೆ ಪೊಲೀಸರು ಅನುಚಿತವಾಗಿ ವರ್ತಿಸಿದ್ದನ್ನು ಖಂಡಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ ಹಿನ್ನಲೆಯಲ್ಲಿ ಕಾನ್‌ಸ್ಟೇಬಲ್ ಒಬ್ಬನನ್ನು ಸಸ್ಪೆಂಡ್ ಮಾಡಲಾಗಿದ್ದು, ಇನ್‌ಸ್ಪೆಕ್ಟರ್ ಸೇರಿ ಮೂವರು ಪೊಲೀಸರಿಗೆ ನೋಟಿಸ್ ಜಾರಿ ಮಾಡಲಾಗಿದೆ.

ನಗರದ ವಿದ್ಯಾನಗರ ಬಡಾವಣೆಯಲ್ಲಿರುವ ಪರಿಶಿಷ್ಟ ಜಾತಿ ಹಾಗು ಪಂಗಡದ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ವಿದ್ಯಾರ್ಥಿ ನಿಲಯಕ್ಕೆ ಬುಧವಾರ‌ ಮಧ್ಯರಾತ್ರಿ ನಾಲ್ವರು ಪೊಲೀಸ್ ಪೇದೆಗಳು ಮದ್ಯ ಪಾನ ಮಾಡಿ ಅಕ್ರಮ ಪ್ರವೇಶ ಮಾಡಿ, ಕಾನೂನು ಹಾಗು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ತೊಂದರೆ ಕೊಟ್ಟರೆಂಬ ಕಾರಣದಿಂದ ರೊಚ್ಚಿಗೆದ್ದ ವಿದ್ಯಾರ್ಥಿಗಳು ರಾತ್ರಿಯೇ ಪ್ರತಿಭಟನೆಗಿಳಿದರು.
ಹಾಸ್ಟೆಲ್‌ಗೆ ಹೋದ ಪೊಲೀಸ್ ಸಿಬ್ಬಂದಿ ವಿದ್ಯಾರ್ಥಿಗೆ ನೀನು ಯಾರು, ಯಾವ ಜಾತಿ ಎಂದು ಕೇಳಿ, ಆ ವಿದ್ಯಾರ್ಥಿಯು ದಲಿತ ಎಂದು ಹೇಳಿದಾಗ ನೀನು ದಲಿತ ಆಗಿದ್ದರೆ ನಾನು ಏನು ಮಾಡಲಿ, ಹಣ ಎಷ್ಟಿದೆ, ಯಾವ ಹಾಸ್ಟೆಲ್ ಎಂದು ಮರು ಪ್ರಶ್ನೆ ಹಾಕಿದ್ದಾರೆ. ಅದಕ್ಕೆ ಅಂಬೇಡ್ಕರ್ ಹಾಸ್ಟೆಲ್ ಎಂದು ಹೇಳಿದ್ದಕ್ಕೆ ಯಾವ ಅಂಬೇಡ್ಕರ್ ಎಂದು ಅವಾಚ್ಯ ಹಾಗು ಅನುಚಿತ ಶಬ್ದಗಳಿಂದ ಮಾತನಾಡಿ ನಿಂದಿಸಿದ್ದಾರೆ. ಅದನ್ನು ವಿದ್ಯಾರ್ಥಿಗಳು ವಿಡಿಯೋ ಮಾಡಲು ಮೊಬೈಲ್ ತೆಗೆದಾಗ ಮೊಬೈಲ್ ಕಿತ್ತು ಒಡೆದು ಹಾಕಿ ಅಲ್ಲಿಂದ ಕಾಲ್ಕಿತ್ತರೆನ್ನಲಾಗಿದೆ.

ಪ್ರತಿಭಟನೆ ಬಳಿಕ ಕ್ಷಮೆಯಾಚನೆ :
ಪೊಲೀಸರ ಈ ವರ್ತನೆ ಖಂಡಿಸಿ ಹಾಸ್ಟೆಲ್‌ನ ಎಲ್ಲಾ ವಿದ್ಯಾರ್ಥಿಗಳು ಮಧ್ಯರಾತ್ರಿ 12 ಗಂಟೆಗೆ ಒಟ್ಟಿಗೆ ಸೇರಿ ಪ್ರತಿಭಟನೆ ನಡೆಸಿದ್ದಾರೆ. ಸುದ್ದಿ ತಿಳಿದ ಹಾಸನ ಡಿವೈಎಸ್‌ಪಿ ಪಿ.ಕೆ.ಮುರುಳೀಧರ್ ಅವರು 2 ಗಂಟೆ ಸುಮಾರಿಗೆ ಹಾಸ್ಟೆಲ್‌ಗೆ ತೆರಳಿ, ಬೆಳಗಿನ ಜಾವ 3 ಗಂಟೆವರೆಗೂ ವಿದ್ಯಾರ್ಥಿಗಳೊಂದಿಗೆ ಚರ್ಚೆ ಮಾಡಿ, ಅವಹೇಳನಕಾರಿಯಾಗಿ ಮಾತನಾಡಿದ ನಾಲ್ವರು ಪೊಲೀಸರನ್ನು ಕರೆಸಿ ನಿಲಯದ ವಿದ್ಯಾರ್ಥಿಗಳ ಕ್ಷಮೆ ಕೇಳಿಸಿದ್ದರೆ.
ಹಾಗೆಯೇ ಅಂಬೇಡ್ಕರ್ ಬಗ್ಗೆ ಮಾತನಾಡಿದ ಪೊಲೀಸರನ್ನು ಅಂಬೇಡ್ಕರ್ ಭಾವಚಿತ್ರದ ಎದುರು ನಿಲ್ಲಿಸಿ ಕೈ ಮುಗಿಸಿ ಕ್ಷಮೆ ಕೇಳಿಸಿದ ನಂತರ ವಿದ್ಯಾರ್ಥಿಗಳು ಪ್ರತಿಭಟನೆ ವಾಪಾಸ್ ಪಡೆಯುವ ತೀರ್ಮಾನಕ್ಕೆ ಬಂದರೆಂದು ತಿಳಿದು ಬಂದಿದೆ.

ಎಚ್ಚೆತ್ತುಕೊಂಡ ಎಸ್ ಪಿ;
ಈ ಪ್ರಕರಣವು ಗುರುವಾರ ಸಾಮಾಜಿಕ ಜಾಲ ತಾಣಗಳು ಹಾಗು ಮಾಧ್ಯಮಗಳಲ್ಲಿ ಬಿತ್ತರಗೊಂಡು ಹೊಸ ತಿರುವು ಪಡೆದುಕೊಂಡ ನಂತರ ಎಚ್ಚೆತ್ತುಕೊಂಡ ಜಿಲ್ಲಾ ಪೊಲೀಸ್ ವರಿಷ್ಠಾಧಿ ಹರಿರಾಂ ಶಂಕರ್ ಅವರು, ನಗರದ ಬಾಲಕರ ಸರ್ಕಾರಿ ವಿದ್ಯಾರ್ಥಿ ನಿಲಯದಲ್ಲಿ ಬುಧವಾರ ಮಧ್ಯರಾತ್ರಿ ನಡೆದಿರುವ ಘಟನೆಗೆ ಸಂಬಂಧಿಸಿದಂತೆ ಡಿವೈ ಎಸ್‌ಪಿ ನೇತೃತ್ವದಲ್ಲಿ ತನಿಖೆ ನಡೆಸ ಲಾಗುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸುದ್ದಿಗೋಷ್ಠಿಯಲ್ಲಿ ಗುರುವಾರ ತಿಳಿಸಿದ್ದರಲ್ಲದೆ, ಹಾಸ್ಟೆಲ್‌ನಲ್ಲಿ ಗಲಾಟೆಯಾಗುತ್ತಿ ರುವ ಬಗ್ಗೆ ಬುಧವಾರ ಮಧ್ಯರಾತ್ರಿ 11.30ಕ್ಕೆ ಪೊಲೀಸ್ ಸಹಾಯವಾಣಿ 112ಗೆ ದೂರು ಬಂದಿದ್ದು, ಈ ಹಿನ್ನಲೆಯಲ್ಲಿ ಸಬ್ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ನಾಲ್ವರು ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ತೆರಳಿದ್ದಾರೆ. ನಂತರ ಒಬ್ಬ ಸಿಬ್ಬಂದಿ, ರೂಂಗೆ ಹೋಗಿ ನೋಡಿ ಅಲ್ಲಿ ವಿಡಿಯೋ ರೆಕಾರ್ಡ್ ಮಾಡಿಕೊಳ್ಳುತ್ತಿರುವ ಸಂದರ್ಭದಲ್ಲಿ ವಿದ್ಯಾರ್ಥಿಗಳು ಕೂಡ ಪೊಲೀಸರನ್ನು ವಿಡಿಯೋ ಮಾಡಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ವಾಗ್ವಾದಕ್ಕೆ ಕಾರಣವಾಗಿದೆ ಎಂದು ವಿವರಿಸಿದರು.
ತಕ್ಷಣವೇ ಡಿವೈಎಸ್‌ಪಿ ಮುರಳೀಧರ್ ಮತ್ತು ಇನ್‌ಸ್ಪೆಕ್ಟರ್‌ಗಳಾದ ಸ್ವಾಮಿನಾಥನ್ ಮತ್ತು ಮಧು ಅವರು ಸ್ಥಳಕ್ಕೆ ತೆರಳಿ ವಿದ್ಯಾರ್ಥಿಗಳನ್ನು ಸಮಾಧಾನಪಡಿಸಿದ್ದಾರೆ. ಅಲ್ಲದೆ ಅಲ್ಲಿಯ ಘಟನೆಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ವಿದ್ಯಾರ್ಥಿಗಳು ಮಾಡುತ್ತಿರುವ ಆರೋಪಕ್ಕೆ ಸಂಬಂಧಿಸಿದಂತೆ ರಾತ್ರಿ ಹಾಸ್ಟೆಲ್‌ಗೆ ತೆರಳಿದಂತಹ ಎಲ್ಲಾ ಸಿಬ್ಬಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಅವರು ಯಾರು ಮದ್ಯ ಸೇವಿಸಿರಲಿಲ್ಲ ಎಂಬುದು ದೃಢಪಟ್ಟಿದೆ. ಅವರು ಅಂಬೇಡ್ಕರ್‌ಗೆ ಅಪಮಾನ ಮಾಡಿದ್ದಾರೆ ಮತ್ತು ಜಾತಿ ನಿಂಧನೆ ಮಾಡಿದ್ದಾರೆಂಬ ಆರೋಪಕ್ಕೆ ಸಂಬಂಧಿಸಿದಂತೆ ಈಗಾಗಲೇ ಅವರು ದುರುದ್ದೇಶದಿಂದ ನಡೆದುಕೊಂಡಿಲ್ಲ. ವಿದ್ಯಾರ್ಥಿಗಳ ಮನಸ್ಸಿಗೆ ನೋವಾಗಿದ್ದರೆ ಕ್ಷಮೆಯಾಚಿಸಿದ್ದಾರೆಂದು ಹೇಳಿದರು.
ಆದರೆ, ಸಂಜೆ ವೇಳೆಗೆ ಪ್ರಕರಣದ ಸಂಪೂರ್ಣ ಮಾಹಿತಿ ಪಡೆದುಕೊಂಡ ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿಯವರು ಕಾನ್‌ಸ್ಟೇಬಲ್ ವೇದಕುಮಾರ್ ಎಂಬಾತನನ್ನು ಸಸ್ಪೆಂಡ್ ಮಾಡಿ, ಬಡಾವಣೆ ಠಾಣೆ ಇನ್‌ಸ್ಪೆಕ್ಟರ್ ಸ್ವಾಮಿನಾಥನ್ ಹಾಗು ಮೂವರು ಪೊಲೀಸ್ ಪೇದೆಗಳಿಗೆ ಕಾರಣ ಕೇಳಿ ನೋಟೀಸ್ ಜಾರಿ ಮಾಡಿದ್ದಾರೆ.ುಚಿತವಾಗಿ ವರ್ತಿಸಿದ್ದನ್ನು ಖಂಡಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ ಹಿನ್ನಲೆಯಲ್ಲಿ ಕಾನ್‌ಸ್ಟೇಬಲ್ ಒಬ್ಬನನ್ನು ಸಸ್ಪೆಂಡ್ ಮಾಡಲಾಗಿದ್ದು, ಇನ್‌ಸ್ಪೆಕ್ಟರ್ ಸೇರಿ ಮೂವರು ಪೊಲೀಸರಿಗೆ ನೋಟಿಸ್ ಜಾರಿ ಮಾಡಲಾಗಿದೆ.
ನಗರದ ವಿದ್ಯಾನಗರ ಬಡಾವಣೆಯಲ್ಲಿರುವ ಪರಿಶಿಷ್ಟ ಜಾತಿ ಹಾಗು ಪಂಗಡದ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ವಿದ್ಯಾರ್ಥಿ ನಿಲಯಕ್ಕೆ ಬುಧವಾರ‌ ಮಧ್ಯರಾತ್ರಿ ನಾಲ್ವರು ಪೊಲೀಸ್ ಪೇದೆಗಳು ಮದ್ಯ ಪಾನ ಮಾಡಿ ಅಕ್ರಮ ಪ್ರವೇಶ ಮಾಡಿ, ಕಾನೂನು ಹಾಗು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ತೊಂದರೆ ಕೊಟ್ಟರೆಂಬ ಕಾರಣದಿಂದ ರೊಚ್ಚಿಗೆದ್ದ ವಿದ್ಯಾರ್ಥಿಗಳು ರಾತ್ರಿಯೇ ಪ್ರತಿಭಟನೆಗಿಳಿದರು.
ಹಾಸ್ಟೆಲ್‌ಗೆ ಹೋದ ಪೊಲೀಸ್ ಸಿಬ್ಬಂದಿ ವಿದ್ಯಾರ್ಥಿಗೆ ನೀನು ಯಾರು, ಯಾವ ಜಾತಿ ಎಂದು ಕೇಳಿ, ಆ ವಿದ್ಯಾರ್ಥಿಯು ದಲಿತ ಎಂದು ಹೇಳಿದಾಗ ನೀನು ದಲಿತ ಆಗಿದ್ದರೆ ನಾನು ಏನು ಮಾಡಲಿ, ಹಣ ಎಷ್ಟಿದೆ, ಯಾವ ಹಾಸ್ಟೆಲ್ ಎಂದು ಮರು ಪ್ರಶ್ನೆ ಹಾಕಿದ್ದಾರೆ. ಅದಕ್ಕೆ ಅಂಬೇಡ್ಕರ್ ಹಾಸ್ಟೆಲ್ ಎಂದು ಹೇಳಿದ್ದಕ್ಕೆ ಯಾವ ಅಂಬೇಡ್ಕರ್ ಎಂದು ಅವಾಚ್ಯ ಹಾಗು ಅನುಚಿತ ಶಬ್ದಗಳಿಂದ ಮಾತನಾಡಿ ನಿಂದಿಸಿದ್ದಾರೆ. ಅದನ್ನು ವಿದ್ಯಾರ್ಥಿಗಳು ವಿಡಿಯೋ ಮಾಡಲು ಮೊಬೈಲ್ ತೆಗೆದಾಗ ಮೊಬೈಲ್ ಕಿತ್ತು ಒಡೆದು ಹಾಕಿ ಅಲ್ಲಿಂದ ಕಾಲ್ಕಿತ್ತರೆನ್ನಲಾಗಿದೆ.

ಪ್ರತಿಭಟನೆ ಬಳಿಕ ಕ್ಷಮೆಯಾಚನೆ :
ಪೊಲೀಸರ ಈ ವರ್ತನೆ ಖಂಡಿಸಿ ಹಾಸ್ಟೆಲ್‌ನ ಎಲ್ಲಾ ವಿದ್ಯಾರ್ಥಿಗಳು ಮಧ್ಯರಾತ್ರಿ 12 ಗಂಟೆಗೆ ಒಟ್ಟಿಗೆ ಸೇರಿ ಪ್ರತಿಭಟನೆ ನಡೆಸಿದ್ದಾರೆ. ಸುದ್ದಿ ತಿಳಿದ ಹಾಸನ ಡಿವೈಎಸ್‌ಪಿ ಪಿ.ಕೆ.ಮುರುಳೀಧರ್ ಅವರು 2 ಗಂಟೆ ಸುಮಾರಿಗೆ ಹಾಸ್ಟೆಲ್‌ಗೆ ತೆರಳಿ, ಬೆಳಗಿನ ಜಾವ 3 ಗಂಟೆವರೆಗೂ ವಿದ್ಯಾರ್ಥಿಗಳೊಂದಿಗೆ ಚರ್ಚೆ ಮಾಡಿ, ಅವಹೇಳನಕಾರಿಯಾಗಿ ಮಾತನಾಡಿದ ನಾಲ್ವರು ಪೊಲೀಸರನ್ನು ಕರೆಸಿ ನಿಲಯದ ವಿದ್ಯಾರ್ಥಿಗಳ ಕ್ಷಮೆ ಕೇಳಿಸಿದ್ದರೆ.
ಹಾಗೆಯೇ ಅಂಬೇಡ್ಕರ್ ಬಗ್ಗೆ ಮಾತನಾಡಿದ ಪೊಲೀಸರನ್ನು ಅಂಬೇಡ್ಕರ್ ಭಾವಚಿತ್ರದ ಎದುರು ನಿಲ್ಲಿಸಿ ಕೈ ಮುಗಿಸಿ ಕ್ಷಮೆ ಕೇಳಿಸಿದ ನಂತರ ವಿದ್ಯಾರ್ಥಿಗಳು ಪ್ರತಿಭಟನೆ ವಾಪಾಸ್ ಪಡೆಯುವ ತೀರ್ಮಾನಕ್ಕೆ ಬಂದರೆಂದು ತಿಳಿದು ಬಂದಿದೆ.

ಎಚ್ಚೆತ್ತುಕೊಂಡ ಎಸ್ ಪಿ;
ಈ ಪ್ರಕರಣವು ಗುರುವಾರ ಸಾಮಾಜಿಕ ಜಾಲ ತಾಣಗಳು ಹಾಗು ಮಾಧ್ಯಮಗಳಲ್ಲಿ ಬಿತ್ತರಗೊಂಡು ಹೊಸ ತಿರುವು ಪಡೆದುಕೊಂಡ ನಂತರ ಎಚ್ಚೆತ್ತುಕೊಂಡ ಜಿಲ್ಲಾ ಪೊಲೀಸ್ ವರಿಷ್ಠಾಧಿ ಹರಿರಾಂ ಶಂಕರ್ ಅವರು, ನಗರದ ಬಾಲಕರ ಸರ್ಕಾರಿ ವಿದ್ಯಾರ್ಥಿ ನಿಲಯದಲ್ಲಿ ಬುಧವಾರ ಮಧ್ಯರಾತ್ರಿ ನಡೆದಿರುವ ಘಟನೆಗೆ ಸಂಬಂಧಿಸಿದಂತೆ ಡಿವೈ ಎಸ್‌ಪಿ ನೇತೃತ್ವದಲ್ಲಿ ತನಿಖೆ ನಡೆಸ ಲಾಗುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸುದ್ದಿಗೋಷ್ಠಿಯಲ್ಲಿ ಗುರುವಾರ ತಿಳಿಸಿದ್ದರಲ್ಲದೆ, ಹಾಸ್ಟೆಲ್‌ನಲ್ಲಿ ಗಲಾಟೆಯಾಗುತ್ತಿ ರುವ ಬಗ್ಗೆ ಬುಧವಾರ ಮಧ್ಯರಾತ್ರಿ 11.30ಕ್ಕೆ ಪೊಲೀಸ್ ಸಹಾಯವಾಣಿ 112ಗೆ ದೂರು ಬಂದಿದ್ದು, ಈ ಹಿನ್ನಲೆಯಲ್ಲಿ ಸಬ್ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ನಾಲ್ವರು ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ತೆರಳಿದ್ದಾರೆ. ನಂತರ ಒಬ್ಬ ಸಿಬ್ಬಂದಿ, ರೂಂಗೆ ಹೋಗಿ ನೋಡಿ ಅಲ್ಲಿ ವಿಡಿಯೋ ರೆಕಾರ್ಡ್ ಮಾಡಿಕೊಳ್ಳುತ್ತಿರುವ ಸಂದರ್ಭದಲ್ಲಿ ವಿದ್ಯಾರ್ಥಿಗಳು ಕೂಡ ಪೊಲೀಸರನ್ನು ವಿಡಿಯೋ ಮಾಡಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ವಾಗ್ವಾದಕ್ಕೆ ಕಾರಣವಾಗಿದೆ ಎಂದು ವಿವರಿಸಿದರು.
ತಕ್ಷಣವೇ ಡಿವೈಎಸ್‌ಪಿ ಮುರಳೀಧರ್ ಮತ್ತು ಇನ್‌ಸ್ಪೆಕ್ಟರ್‌ಗಳಾದ ಸ್ವಾಮಿನಾಥನ್ ಮತ್ತು ಮಧು ಅವರು ಸ್ಥಳಕ್ಕೆ ತೆರಳಿ ವಿದ್ಯಾರ್ಥಿಗಳನ್ನು ಸಮಾಧಾನಪಡಿಸಿದ್ದಾರೆ. ಅಲ್ಲದೆ ಅಲ್ಲಿಯ ಘಟನೆಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ವಿದ್ಯಾರ್ಥಿಗಳು ಮಾಡುತ್ತಿರುವ ಆರೋಪಕ್ಕೆ ಸಂಬಂಧಿಸಿದಂತೆ ರಾತ್ರಿ ಹಾಸ್ಟೆಲ್‌ಗೆ ತೆರಳಿದಂತಹ ಎಲ್ಲಾ ಸಿಬ್ಬಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಅವರು ಯಾರು ಮದ್ಯ ಸೇವಿಸಿರಲಿಲ್ಲ ಎಂಬುದು ದೃಢಪಟ್ಟಿದೆ. ಅವರು ಅಂಬೇಡ್ಕರ್‌ಗೆ ಅಪಮಾನ ಮಾಡಿದ್ದಾರೆ ಮತ್ತು ಜಾತಿ ನಿಂಧನೆ ಮಾಡಿದ್ದಾರೆಂಬ ಆರೋಪಕ್ಕೆ ಸಂಬಂಧಿಸಿದಂತೆ ಈಗಾಗಲೇ ಅವರು ದುರುದ್ದೇಶದಿಂದ ನಡೆದುಕೊಂಡಿಲ್ಲ. ವಿದ್ಯಾರ್ಥಿಗಳ ಮನಸ್ಸಿಗೆ ನೋವಾಗಿದ್ದರೆ ಕ್ಷಮೆಯಾಚಿಸಿದ್ದಾರೆಂದು ಹೇಳಿದರು.
ಆದರೆ, ಸಂಜೆ ವೇಳೆಗೆ ಪ್ರಕರಣದ ಸಂಪೂರ್ಣ ಮಾಹಿತಿ ಪಡೆದುಕೊಂಡ ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿಯವರು ಕಾನ್‌ಸ್ಟೇಬಲ್ ವೇದಕುಮಾರ್ ಎಂಬಾತನನ್ನು ಸಸ್ಪೆಂಡ್ ಮಾಡಿ, ಬಡಾವಣೆ ಠಾಣೆ ಇನ್‌ಸ್ಪೆಕ್ಟರ್ ಸ್ವಾಮಿನಾಥನ್ ಹಾಗು ಮೂವರು ಪೊಲೀಸ್ ಪೇದೆಗಳಿಗೆ ಕಾರಣ ಕೇಳಿ ನೋಟೀಸ್ ಜಾರಿ ಮಾಡಿದ್ದಾರೆ.

Post a Comment

Previous Post Next Post