ಹಾಸನ: ನಗರದ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಎದುರುಗಡೆ ಫುಟ್ಬಾತ್ ಮೇಲೆ ನಿರ್ಮಿಸಲಾಗಿರುವ ರಸ್ತೆ ಬದಿಯ ಅಂಗಡಿಗಳನ್ನು ತೆರವುಗೊಳಿಸುವಂತೆ ಸೂಚನೆ ನೀಡಿದ ನಗರಸಭೆ ಅಧಿಕಾರಿಗಳ ಹಾಗೂ ಪುಟ್ ಬಾತ್ ಅಂಗಡಿಗಳ ಮಾಲೀಕರ ನಡುವೆ ವಾಗ್ವಾದ ನಡೆದಿದೆ. ಮೊದಲಿಗೆ ನಗರಸಭಾ ಅಧ್ಯಕ್ಷ ಹಾಗೂ ವಾರ್ಡ್ ಸದಸ್ಯ ಮೋಹನ್ ರವರೊಂದಿಗೆ ಹೋಟೆಲ್ ತೆರವು ಮಾಡುವಂತೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ಹಾಗೂ ಮಾಲೀಕರ ನಡುವೆ ವಾಗ್ವಾದ ನಡೆದಿದೆ ನಂತರ ನಗರಸಭೆ ಆಯುಕ್ತ ಸತೀಶ್ ವಾಗ್ವಾದವನ್ನು ತಿಳಿಗೊಳಿಸಿದರು. ನಗರದಲ್ಲಿ ನಡೆಯುತ್ತಿರುವ ಮೇಲ್ ಸೇತುವೆ ಕಾಮಗಾರಿಗೆ ತೀರ ತೊಂದರೆಯಾಗುತ್ತಿದ್ದು ಹಾಗೂ ಟ್ರಾಫಿಕ್ ಸಮಸ್ಯೆ ಸ್ವಚ್ಛತೆಯ ಹಿತಾ ದೃಷ್ಟಿಯಿಂದ ತೆರವಿಗೆ ಮುಂದಾದ ನಗರಸಭೆ ನಿರ್ಧಾರಕ್ಕೆ ಅಂಗಡಿ ಮಾಲೀಕರಿಂದ ಆಕ್ರೋಶ ವ್ಯಕ್ತಪಡಿಸಿದ್ದರು.
Tags
ಹಾಸನ