ಸಕಲೇಶಪುರ: ಪಟ್ಟಣದ ಪುರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳ ಅಭ್ಯರ್ಥಿಗಳ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ನ ಜ್ಯೋತಿ ಮತ್ತು ಕಾಂಗ್ರೆಸ್ ನ ಅನ್ನಪೂರ್ಣ, ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ನ ಜರೀನಾ ಮತ್ತು ಕಾಂಗ್ರೆಸ್ ನ ರೇಷ್ಮಾ ಬಾನು ನಾಮಪತ್ರ ಸಲ್ಲಿಸಿದ್ದರು.
ಸಕಲೇಶಪುರ ಪುರಸಭೆಯಲ್ಲಿ ಒಟ್ಟು 23 ಸ್ಥಾನಗಳಿದ್ದು, ಜೆಡಿಎಸ್ ಗೆ 13, ಕಾಂಗ್ರೆಸ್ ಗೆ 5, ಬಿಜೆಪಿ ಗೆ 2 ಮತ್ತು ಪಕ್ಷೇತರರು 3 ಸ್ಥಾನಗಳನ್ನು ಪಡೆದಿದ್ದಾರೆ. ಜೆಡಿಎಸ್ ಅಭ್ಯರ್ಥಿಗಳು ಪಕ್ಷೇತರರ ಬೆಂಬಲದಿಂದ 15 ಮತಗಳನ್ನು ಸಂಪಾದಿಸಿದ್ದರೆ, ಕಾಂಗ್ರೆಸ್ ಬೆಂಬಲಿತರು 5 ಮತಗಳನ್ನು ಪಡೆದಿದ್ದಾರೆ. ಬಿಜೆಪಿ 2 ಅಭ್ಯರ್ಥಿಗಳು ಹಾಗೂ 1 ಪಕ್ಷೇತರ ಅಭ್ಯರ್ಥಿ ಚುನಾವಣಾ ಪ್ರಕ್ರಿಯೆಯಿಂದ ಹೊರಬಿದ್ದಿದ್ದಾರೆ.
ಮಾಜಿ ಶಾಸಕ ಕುಮಾರಸ್ವಾಮಿ, ಜೆ.ಪಂ. ಮಾಜಿ ಸದಸ್ಯೆ ಚಂಚಲಾ ಕುಮಾರಸ್ವಾಮಿ, ಜೆ.ಪಂ. ಮಾಜಿ ಸದಸ್ಯ ಸುಪ್ರದೀಪ್ ಯಜಮಾನ್ ಮತ್ತು ಇತರರು ಹಾಜರಿದ್ದರು.
Tags
ಸಕಲೇಶಪುರ