ಹಾಸನ: ಹಾಸನ ನಗರ ಪೆನ್‌ಶೆನ್ ಮೊಹಲ್ಲಾ ಪೊಲೀಸರ ತಂಡವು ಮಂಗಳವಾರ ಬೆಳಗಿನ 1 ಗಂಟೆ ಸಮಯದಲ್ಲಿ ಪಿಎಸ್‌ಐ ರವಿಶಂಕರ ಅವರ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ, ಮೂವರು ಇಂಜಿನಿಯರ್ ವಿದ್ಯಾರ್ಥಿಗಳು ಮಾದಕ ವಸ್ತು ಬಳಸುತ್ತಿರುವ ಅನುಮಾನ ವ್ಯಕ್ತವಾಗಿದ್ದು, ಅವರನ್ನು ತಕ್ಷಣ ವಶಕ್ಕೆ ಪಡೆಯಲಾಯಿತು. ಈತರೆದುರದ ಪ್ರಮಾಣಿಕ ತನಿಖೆಯ ನಂತರ, ಅವರು ಗಾ** **ಜಾ ಸೇವನೆ ಮಾಡಿರುವುದು ದೃಢಪಟ್ಟಿತು.
ಬಂಧನಗೊಂಡವರನ್ನು ಹೊಳೆನರಸೀಪುರ ತಾಲೂಕು ತಟ್ಟೆಕೆರೆ ಗ್ರಾಮದ 21 ವರ್ಷದ ಶಶಾಂಕ, ಹೊಳೆನರಸೀಪುರ ಪಟ್ಟಣದ ನರಸಿಂಹನಾಯಕ ನಗರದ 22 ವರ್ಷದ ಯೋಗೇಶಗೌಡ, ಮತ್ತು ಹಾಸನದ ಗುಡ್ಡೇನಹಳ್ಳಿಯ 21 ವರ್ಷದ ಪ್ರಜ್ವಲ್ ಎಂದು ಗುರುತಿಸಲಾಗಿದೆ. ಅವರು ಮೂವರು ಇಂಜಿನಿಯರಿಂಗ್ ಓದುತ್ತಿದ್ದಾರೆ.
ಹಾಸನದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿದಾಗ, ಗಾಜಾ ಸೇವನೆ ಮಾಡಿರುವುದಾಗಿ ದೃಢಪಟ್ಟ ಹಿನ್ನೆಲೆಯಲ್ಲಿ, ಇವರ ವಿರುದ್ಧ ಪ್ರಕರಣ ದಾಖಲಾಗಿದೆ ಮತ್ತು ತನಿಖೆ ಮುಂದುವರಿಯುತ್ತಿದೆ.
ಹಾಸನ ಜಿಲ್ಲಾ ಪೊಲೀಸ್ ಪ್ರಕಟಣೆ ! : ನಿಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅನುಮಾನಸ್ಪದ ವ್ಯಕ್ತಿ ಹಾಗೂ ಮಾದಕ ವಸ್ತು ಮಾರಾಟ / ಸೇವನೆ ಕಂಡುಬಂದಲ್ಲಿ ಸಮಾಜದ ಸ್ವಾಸ್ಥ್ಯ ಕಾಪಾಡಯವ ನಿಟ್ಟಿನಲ್ಲಿ ಕರೆಮಾಡಿ 112