ಹಾಸನ: ದೇಶದಲ್ಲಿ ದರ್ಶನದ್ದು ಒಂದೇ ಇರೋದಾ, ಬೆಳಗ್ಗೆ ಎದ್ದರೆ ಟಿವಿಯಲ್ಲಿ ತೋರುಸ್ತೀರಾ! ಅದಕ್ಕಿಂತ ಒಳ್ಳೆಯದ್ದನ್ನು ತೋರಿಸಿ.
ಅವನೇನು ಸಮಾಜಕ್ಕೆ ರೋಲ್ ಮಾಡೆಲ್ಲಾ? ಬರೀ ಅವನದ್ದೇ ತೋರುಸ್ತಿರಲ್ಲಾ' ಟಿವಿಯವರಿಗೆ ಬೇರೆ ಕೆಲಸ ಇಲ್ವಾ? ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ. ಎನ್. ರಾಜಣ್ಣ ಮಾಧ್ಯಮದವರ ವಿರುದ್ಧ ಗರಂ ಆದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದರ್ಶನ್ ಒಳ್ಳೆಯ ಕಲಾವಿದ ಅಂತ ಎಲ್ಲರೂ ಒಡ್ತೀವಿ. ಒಳ್ಳೆಯ ಕಲಾವಿದರನ್ನು ಜನರು ಇಷ್ಟ ಪಡ್ತಾರೆ ಅಂತ ಮಾಡಬಾರದ್ದನ್ನು ಮಾಡಿದ್ರೆ ಕಾನೂನು ಕ್ರಮ ತಗೋಳುತ್ತೆ. ಅದನ್ನು ಬೆಳಗ್ಗೆ, ಸಾಯಂಕಾಲ ಏನೇ ಹೊಸ ಮಾಹಿತಿ ಇಲ್ಲದಿದ್ದರೂ ತೋರಿಸುತ್ತಾ ಇದ್ದರೆ ನೋಡಲು ಅಸಹ್ಯ ಆಗುತ್ತೆ ಎಂದು ಬೇಸರ ವ್ಯಕ್ತಪಡಿಸಿದರು.