ಹಾಸನ: ಹಣಕ್ಕಾಗಿ ಫ್ರಾಡ್ ಮಾಡುವ ಉದ್ದೇಶದಿಂದ ಫೇಕ್ ಜನ್ಮದಿನಾಂಕವನ್ನು ಖಾಸಗೀ ಇಂಟರ್ ನೆಟ್ ಕೇಂದ್ರದಲ್ಲಿ ಸಿದ್ಧಪಡಿಸಿ ನಂತರ ಆಧಾರ್ ಲಿಂಕ್ ಗೆ ಸೇರಿಸುತ್ತಿದ್ದ ಜಿಲ್ಲಾಧಿಕಾರಿ ಕಛೇರಿಯ ಕಟ್ಟಡದಲ್ಲಿ ಆಧಾರ್ ಕೇಂದ್ರದಲ್ಲಿ ಕೆಲಸ ಮಾಡುವ ಕಂಪ್ಯೂಟರ್ ಆಪರೇಟರ್ ಅನುಶ್ರೀ ಎಂಬುವರು ಸಿಕ್ಕಿಬಿದ್ದಿದ್ದು, ಜಿಲ್ಲಾಧಿಕಾರಿಗಳು ವಿಚಾರಿಸಿ ಈಕೆ ಮೇಲೆ ಕೇಸು ದಾಖಲಿಸುವಂತೆ ಸೂಚನೆ ನೀಡಿ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ ಘಟನೆ ಶುಕ್ರವಾರ ಮದ್ಯಾಹ್ನ ನಡೆದಿದೆ.
ಈಗಾಗಲೇ ಅಸ್ಸಾಂ, ಬಾಂಗ್ಲದೇಶದಿಂದ ಸಾವಿರಾರು ಜನರು ಇಲ್ಲಿಗೆ ವಲಸೆ ಬರುತ್ತಿರುವ ಬಗ್ಗೆ ಮಾಧ್ಯಮ ಹಾಗೂ ಸೋಶಿಯಲ್ ಮೀಡಿಯದಲ್ಲಿ ಪ್ರತಿನಿತ್ಯ ನೋಡುತ್ತಿದ್ದೇವೆ. ಈತರ ಬರುವುದಕ್ಕೆ ಇಲ್ಲಿನ ಕೆಲವರು ಹಣದ ಆಸೆಗೆ ಇಂತಹ ದೇಶ ದ್ರೋಹದ ಕೆಲಸ ಮಾಡುವುರಿಂದಲೇ ಸಾಧ್ಯ. ನಮ್ಮ ದೇಶದವರು ಅಲ್ಲದಿದ್ದರೂ ಹಣ ಕೊಟ್ಟರೇ ಸಾಕು ಅವರಿಗೆ ಸುಳ್ಳು ದಾಖಲೆ ಸೃಷ್ಠಿ ಮಾಡಿ ನಮ್ಮ ದೇಶದವರೆಂದು ಬಿಂಭಿಸುವ ದೇಶ ದ್ರೋಹಿಗಳು ನಮ್ಮಲ್ಲೆ ಇದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಹಾಸನ ನಗರದ ಜಿಲ್ಲಾಧಿಕಾರಿ ಕಛೇರಿ ಕಟ್ಟಡದಲ್ಲೆ ಆಧಾರ್ ಆಪರೇಟರ್ ಕೆಲಸ ಮಾಡುವ ಮಹಿಲೆ ಓರ್ವರು ತನಿಖೆ ವೇಳೆ ಸಿಕ್ಕಿ ಬಿದ್ದಿದ್ದಾರೆ. ಕಳೆದ ಎರಡುವರೆ ವರ್ಷದಿಂದ ಜಿಲ್ಲಾಧಿಕಾರಿ ಕಛೇರಿ ಕಟ್ಟಡದಲ್ಲೆ ಆಧಾರ್ ಕೇಂದ್ರದಲ್ಲಿ ಕೆಲಸ ನಿರ್ವಹಿಸುತ್ತಿರುವ ಅನುಶ್ರೀ ಎಂಬುವರ ಬಳಿ ಹಣ ಕೊಟ್ಟರೇ ಸಾಕು ನಕಲಿ ಜನ್ಮದಿನಾಂಕವನ್ನು ಸೃಷ್ಠಿ ಮಾಡಲು ಖಾಸಗೀ ಇಂಟರ್ ಪಾರ್ಲರ್ ಗೆ ವಿಳಾಸ ಹೇಳಿ ಕಳುಹಿಸಿ ಕೊಡುತ್ತಾರೆ.
ಅಲ್ಲಿ ಸಿದ್ಧವಾದ ಮೇಲೆ ಈಕೆ ಆಧಾರ್ ಗೆ ಲಿಂಕ್ ಮಾಡಿ ಕೊಡುವುದನ್ನು ಮೈಗೂಡಿಸಿಕೊಂಡು ಸಂಬಳದ ಜೊತೆ ಈತರಹದ ದೇಶದ್ರೋಹಿ ಕೆಲಸ ಮಾಡಿ ಒಬ್ಬರಿಂದ ೫ ಸಾವಿರ ದಿಂದ ೧೦ ಸಾವಿರದವರೆಗೂ ಹಣ ಪಡೆದು ಗಿಂಬಳ ಗಿಂಬಳಗಿಟ್ಟಿಸಿಕೊಳ್ಳುತ್ತಿದ್ದಳು ಈ ಬಗ್ಗೆ ವಿಚಾರ ತಿಳಿದ ಇಲ್ಲಿ ಆಧಾರ್ ಲಿಂಕ್ ಅಧಿಕಾರಿ ಬೆಂಗಳೂರಿನ ಕಛೇರಿಗೆ ವಿಷಯ ಮುಟ್ಟಿಸಿದ್ದು, ಇದನ್ನು ಪರಿಶೀಲನೆ ಮಾಡಲು ಬಂದಿದ್ದ ಬೆಂಗಳೂರಿನ ರೀಜನಲ್ ಅಧಿಕಾರಿ ವಿಜಯಕುಮಾರ್ ಆಧಾರ್ ಬಗ್ಗೆ ಆಳವಾಗಿ ಪರಿಶೀಲನೆ ಮಾಡಿದಾಗ ಅನುಶ್ರೀ ಐಡಿಯಿಂದ ಇಲ್ಲಿ ಫೇಕ್ ಮಾಡುತ್ತಿರುವ ಬಗ್ಗೆ ಬೆಳಕಿಗೆ ಬಂದಿದೆ. ಅನುಶ್ರೀ ಎಂಬುವರನ್ನು ಜಿಲ್ಲಾಧಿಕಾರಿ ಕಛೇರಿಗೆ ಕರೆಯಿಸಿ ವಿಚಾರಿಸಿದರು. ಈತರ ಮಾಡುವವರು ದೇಶದ್ರೋಹದ ಕೆಲಸ. ಕಹಹೇ ದುಶ್ಮನ್ ಎಂದ್ರೆ ಬಾಗ್ ಮೇ ಹೇ ಎನ್ನುವ ಗಾದೆ ಮಾತು ನಿಜವಾಗಿದೆ. ನಮ್ಮಲ್ಲೆ ಈತರ ಘಟನೆ ನಡೆದಿರುವುದು ಬೇಸರದ ವಿಚಾರ ಎಂದು ಜಿಲ್ಲಾಧಿಕಾರಿ ಸತ್ಯಭಾಮ ಅವರು ಬೇಸರವ್ಯಕ್ತಪಡಿಸಿದರು. ಕೂಡಲೇ ಈಕೆ ಮೇಲೆ ದೂರು ದಾಖಲಿಸಿ ಎಫ್.ಐ.ಆರ್. ಮಾಡುವಂತೆ ಪೊಲೀಸ್ ಅಧಿಕಾರಿಯನ್ನು ಕರೆಯಿಸಿ ಅನುಶ್ರೀಯನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿದರು. ಈಕೆಯ ಕೆಲಸವಧಿಯ ಎರಡುವರೆ ವರ್ಷದ ಎಲ್ಲಾ ದಾಖಲೆಯನ್ನು ಪರಿಶೀಲಿಸುವಂತೆ ಡಿಸಿ ಸೂಚಿಸಿದರು.
ಬೆಂಗಳೂರು ಮೂಲದ ರೀಜನಲ್ ಅಧಿಕಾರಿ ವಿಜಯಕುಮಾರ್ ಫೇಕ್ ಆಧಾರ್ ದಾಖಲೆ ಬಗ್ಗೆ ಮಾಹಿತಿ ನೀಡಿ, ಫೇಕ್ ಭರ್ತ್ ಸರ್ಟಿಫಿಕೆಟ್ ಸಿದ್ಧಪಡಿಸಿ ಆಧಾರ್ ಜನರೇಟ್ ಮಾಡಿದ್ದಾರೆ. ಆಧಾರ್ ಸೆಂಟರ್ ಎಲ್ಲೆಲ್ಲಿ ಇದೆ ಈ ವಿಚಾರವಾಗಿ ತನಿಖೆ ಮಾಡುತ್ತಿದ್ದು, ಇಲ್ಲಿ ಜಿಲ್ಲಾಧಿಕಾರಿ ಆವರಣದ ಆಧಾರ್ ಕೇಂದ್ರದ ಆಪರೇಟ್ ಮಾಡುವ ಕಂಪ್ಯೂಟರ್ ನಲ್ಲಿ ಪರಿಶೀಲನೆ ಮಾಡುವಾಗ ಡೆಸ್ಟಾಪ್ ನಲ್ಲಿ ಎಲ್ಲಿಯೂ ಸೇವ್ ಮಾಡಿರಲಿಲ್ಲ. ಅದನ್ನ ಟಿಲಿಟ್ ಮಾಡಿದ್ದಾರೆ. ರಿಸೈಕಲ್ ಬಿನ್ ನಲ್ಲಿ ನೋಡಿದಾಗ ಸಿಕ್ಕಿದ್ದು, ತಂದೆ ತಾಯಿದು ಒಂದೆ ಸಟೀಫಿಕೆಟ್ ಓನ್ಲಿ ನೇಮ್ ಚೆಂಜ್ ಮಾಡಿ ಜೊತೆಗೆ ಅವರ ಜನ್ಮ ದಿನಾಂಕವನ್ನು ಬದಲಾಯಿಸಿದ್ದಾರೆ. ಒಂದೆ ಸರ್ಟಿಫಿಕೆಟ್ ಇದ್ದು, ಅದರ ನೇಮ್ ಮತ್ತು ಹುಟ್ಟಿದ ದಿನಾಂಕ ಮಾತ್ರ ಬದಲಾಯಿಸಿ ಅದನ್ನು ಆಧಾರ್ ಜನರೇಶನ್ ಗೆ ಉಪಯೋಗಿಸುತ್ತಿರುವುದು ಇದೊಂದು ಫ್ರಾಡ್ ಮಾಡುವ ಉದ್ದೇಶವಾಗಿದೆ ಎಂದರು. ಈ ಬಗ್ಗೆ ಪರಿಶೀಲನೆ ಮಾಡುವಾಗ ಸದ್ಯಕ್ಕೆ ನಾಲ್ಕು ಫೇಕ್ ಆಧಾರ್ ಕಾರ್ಡ್ ಸಿಕ್ಕಿದ್ದು, ಇನ್ನು ಪರಿಶೀಲನೆ ಮಾಡಿದರೇ ಸಾವಿರಾರು ಸಿಗಬಹುದು ಎಂದು ಅನುಮಾನಿಸಿದರು. ಕಂಪ್ಯೂಟರ್ ಆಪರೇಟರ್ ಐಡಿ ಓಪನ್ ಮಾಡಿದರೇ ಮಲ್ಟಿಫಲ್ ನೇಮ್ಸ್ ಸಿಗಲಿದೆ. ಈತರ ಒಂದು ಫೇಕ್ ಮಾಡಿಕೊಟ್ಟರೇ ಒಬ್ಬರಿಂದ ೫ ರಿಂದ ೧೦ ಸಾವಿರ ರೂ ಲಂಚ ಸ್ವೀಕರಿಸುತ್ತಾರೆ ಎಂದು ಹೇಳಿದರು. ಈ ಬಗ್ಗೆ ಇನ್ನಷ್ಟು ಪರಿಶೀಲನೆ ಮಾಡಿ ಎಷ್ಟು ಜನರಿಗೆ ಈತರಹದ ಫೇಕ್ ಆಧಾರ್ ಕಾರ್ಡ್ ಮಾಡಿಕೊಟ್ಟಿದ್ದಾರೆ ಎಂಬುದರ ಬಗ್ಗೆ ತಿಳಿಯಬೇಕಾಗಿದೆ ಎಂದು ಮಾಹಿತಿ ನೀಡಿದರು.