ಸಕಲೇಶಪುರ ತಾಲೂಕು ಉದೇವಾರ ಗ್ರಾಮ ಪಂಚಾಯಿತಿಯ ಗ್ರಾಮ ಸಭೆಯಲ್ಲಿ ಭಾಗವಹಿಸಿ ಸಾರ್ವಜನಿಕರ ಕುಂದು ಕೊರತೆಗಳನ್ನು ಪರಿಹಾರಿಸಿದ :ಶಾಸಕ ಸಿಮೆಂಟ್ ಮಂಜು
![]() |
ಸಾರ್ವಜನಿಕರ ಕುಂದು ಕೊರತೆಗಳನ್ನು ಪರಿಹಾರಿಸಿದ :ಶಾಸಕ ಸಿಮೆಂಟ್ ಮಂಜು |
ಸಕಲೇಶಪುರ ತಾಲೂಕು ಉದೇವಾರ ಗ್ರಾಮ
ಪಂಚಾಯಿತಿಯ ಗ್ರಾಮ ಸಭೆಯಲ್ಲಿ ಸಿಮೆಂಟ್
ಮಂಜು ಭಾಗವಹಿಸಿ ಸಾರ್ವಜನಿಕರ ಸ್ಥಳೀಯ ಸಮಸ್ಯೆಗಳು ಪರಿಹಾರ, ಅಭಿವೃದ್ಧಿ ಯೋಜನೆಗಳನ್ನು ರೂಪಿಸಲು ಮತ್ತು ಸಮುದಾಯದ ಸಮಸ್ಯೆಗಳನ್ನು
ಬಗೆಹರಿಸಲು ಸಲಹೆ ಮತ್ತು
ಪರಿಹಾರಗಳನ್ನು ನೀಡಿದರು.
ಇನ್ನೆರಡು ವರ್ಷ ತೇಜಸ್ವಿ ಬದುಕಿದ್ದರೆ ಅವರಿಗೆ ಜ್ಞಾನಪೀಠ ಪ್ರಶಸ್ತಿ ದೊರೆಯುತ್ತಿತ್ತು : ಡಾ.ಎಚ್.ಎಲ್.ಮಲ್ಲೇಶಗೌಡ ಅಭಿಪ್ರಾಯ
ಇದೇ ಸಂದರ್ಭದಲ್ಲಿ ಸಾರ್ವಜನಿಕರು ಸ್ಥಳೀಯ ಸಮಸ್ಯೆಗಳ ಪರಿಹಾರಕ್ಕೆ, ಅಭಿವೃದ್ಧಿ ಯೋಜನೆಗಳನ್ನು ರೂಪಿಸಲು ಸಮುದಾಯದ ಪ್ರಮುಖ ಸಮಸ್ಯೆಗಳನ್ನು ಹಂಚಿಕೊಂಡರು. ಇದರಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಹಿಡಿದು, ಪ್ಲಾನಿಂಗ್, ರಸ್ತೆ ಸಂಪರ್ಕ, ನೀರಿನ ಪೂರೈಕೆ, ಶಿಕ್ಷಣ ಮತ್ತು ಆರೋಗ್ಯ ಸೇವೆಗಳ ಬಗ್ಗೆ ಚರ್ಚೆ ನಡೆಸಿದರು.
ಸಾರ್ವಜನಿಕರ ಸಲಹೆಗಳಿಗೆ ತಕ್ಕಂತೆ ಯೋಜನೆಗಳನ್ನು ರೂಪಿಸಲು,
ಅವುಗಳನ್ನು ತ್ವರಿತವಾಗಿ ಕಾರ್ಯಗತಗೊಳಿಸಲು ನಿರ್ಧಾರ ಮಾಡಿ ರಸ್ತೆ ಸಂಪರ್ಕ ಸಮಸ್ಯೆಗಳನ್ನು ಶೀಘ್ರವಾಗಿ
ಪರಿಹರಿಸಲು ಹಾಗೂ ನೀರಿನ ಪೂರೈಕೆ ಸುಧಾರಣೆಗೆ ಮತ್ತು
ಆರೋಗ್ಯ ಸೇವೆಗಳ ಲಭ್ಯತೆಗೆ ವಿಶೇಷ
ಗಮನ ನೀಡಲಾಗುವುದು ಎಂದು ತಿಳಿಸಿದರು.