ಇನ್ನೆರಡು ವರ್ಷ ತೇಜಸ್ವಿ ಬದುಕಿದ್ದರೆ ಅವರಿಗೆ ಜ್ಞಾನಪೀಠ ಪ್ರಶಸ್ತಿ ದೊರೆಯುತ್ತಿತ್ತು : ಡಾ.ಎಚ್.ಎಲ್.ಮಲ್ಲೇಶಗೌಡ ಅಭಿಪ್ರಾಯ

 ಹಾಸನ: ಪೂರ್ಣಚಂದ್ರ ತೇಜಸ್ವಿ, ಕುವೆಂಪು ಅವರು ನಾಡಿಗೆ ನೀಡಿದ ಅತ್ಯಂತ ಶ್ರೇಷ್ಠವಾದ ಕೃತಿ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಎಚ್.ಎಲ್.ಮಲ್ಲೇಶಗೌಡ ಅಭಿಪ್ರಾಯಪಟ್ಟರು.

ಇನ್ನೆರಡು ವರ್ಷ ತೇಜಸ್ವಿ ಬದುಕಿದ್ದರೆ ಅವರಿಗೆ ಜ್ಞಾನಪೀಠ ಪ್ರಶಸ್ತಿ ದೊರೆಯುತ್ತಿತ್ತು
ತೇಜಸ್ವಿ ನೆನಪು ಕಾರ್ಯಕ್ರಮ

ನಗರದ ಬೆಸ್ಟ್ ಕಾಮರ್ಸ್ ಕಾಲೇಜಿನಲ್ಲಿ ಸೋಮವಾರ ಪರಿಷತ್ತು ಜಿಲ್ಲಾ ಘಟಕ ಹಾಗೂ ಕಾಲೇಜಿನ ಸಹಯೋಗದಲ್ಲಿ ಪೂಚಂತೇ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ತೇಜಸ್ವಿ ನೆನಪು ಕಾರ್ಯಕ್ರಮದಲ್ಲಿ ಮಾತನಾಡಿದರು.

ಕುವೆಂಪು ಪ್ರಬಂಧ, ಕತೆ, ವಿಮರ್ಶೆ, ಕಾವ್ಯ, ನಾಟಕ ಸೇರಿದಂತೆ ಎಲ್ಲ ಪ್ರಾಕಾರಗಳ ಜಗತ್ತಿನ ಏಕೈಕ ಶ್ರೇಷ್ಠ ಸಾಹಿತಿ. ಅಂತಹ ತಂದೆಯ ನೆರಳು, ಹೆಸರು, ಆಸ್ತಿ, ಕೀರ್ತಿ ಆಶ್ರಯಿಸದೇ ಸ್ವಯಂ ಶಕ್ತಿಯಿಂದ ಅಷ್ಟೇ ಎತ್ತರಕ್ಕೆ ಬೆಳೆದ ಮತ್ತೊಂದು ಅಪರೂಪದ ವ್ಯಕ್ತಿತ್ವ ತೇಜಸ್ವಿ ಎಂದರು.

ಇನ್ನೆರಡು ವರ್ಷ ತೇಜಸ್ವಿ ಬದುಕಿದ್ದರೆ ಅವರಿಗೆ ಜ್ಞಾನಪೀಠ ಪ್ರಶಸ್ತಿ ದೊರೆಯುತ್ತಿತ್ತು. ತಂದೆ-ಮಗ ಇಬ್ಬರಿಗೂ ಜ್ಞಾನಪೀಠ ದೊರಕಿತು ಎನ್ನುವ ಸೌಭಾಗ್ಯ ತಪ್ಪಿ ಹೋಯಿತು ಎಂದು ಬೇಸರ ವ್ಯಕ್ತಪಡಿಸಿದರು.

ಲೇಖಕ, ಪತ್ರಕರ್ತ ಮಂಜು ಬನವಾಸೆ ಮಾತನಾಡಿ, ಪೂರ್ಣಚಂದ್ರ ತೇಜಸ್ವಿ ಅವರ ಬಗ್ಗೆ ಮಾತನಾಡುವುದು ಅಂಧರು ಆನೆಯನ್ನು ಸ್ಪರ್ಶಿಸಿ ಅದರ ರೂಪ ನಿರ್ಧಾರ ಮಾಡಿದಂತೆ. ಬರೆದಂತೆಯೇ ಬದುಕಿದ ಅಪರೂಪದ ಲೇಖಕ, ದಾರ್ಶನಿಕ, ಹೋರಾಟಗಾರ, ಫೋಟೋಗ್ರಾಫರ್ ಏನೆಲ್ಲ ಆಗಿದ್ದ ಅವರ ವ್ಯಕ್ತಿತ್ವವನ್ನು ಅರಿಯಬೇಕಾದರೆ ಅವರನ್ನು ಓದಲೇಬೇಕು ಎಂದರು.

ತೇಜಸ್ವಿ ಅವರು ಬುದ್ಧನ ಮಧ್ಯಮ ಮಾರ್ಗದ ಪ್ರತಿಪಾದಕರು. ಅವರ ಆಧ್ಯಾತ್ಮ ಪರಿಸರದೊಂದಿಗೆ ಬೆಸೆದುಕೊಂಡಿತ್ತು. ವಿಜ್ಞಾನ , ಪರಿಸರಜ್ಞಾನವನ್ನು ಅವರಷ್ಟು ಸರಳವಾಗಿ ಬರೆದ ಮತ್ತೊಬ್ಬರಿಲ್ಲ. ಹಳ್ಳಿಯಲ್ಲಿ ಅತ್ಯಂತ ಸಾಮಾನ್ಯರು ಅವರ ಪಾತ್ರಗಳಾಗಿ ಅಸಾಮಾನ್ಯವಾಗಿ ತೋರುತ್ತಿದ್ದರು. ತಮ್ಮ ಸುತ್ತಲೇ ಮಾಯಾಲೋಕ ಕಂಡ ಅವರು ಯುವಪೀಳಿಗೆಗೆ ಆದರ್ಶಪ್ರಾಯರು ಎಂದರು.

ಸಂಪೂರ್ಣ ಸಾಕ್ಷರತೆಯನ್ನು ಸಾಧಿಸಲು ಎಲ್ಲರ ಸಹಕಾರ ಅಗತ್ಯ : ಡಿಸಿ ಸಿ.ಸತ್ಯಭಾಮ ಕರೆ

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಎಸ್.ಆರ್.ಪ್ರಸನ್ನಕುಮಾರ್ ಮಾತನಾಡಿ, ಜಿಲ್ಲೆಯ ಹಿರಿಯ ರೈತ ಹೋರಾಟಗಾರ ಕೊಟ್ಟೂರು ಶ್ರೀನಿವಾಸ್ ಅವರ ಮೂಲಕ ತೇಜಸ್ವಿ ಅವರ ಪರಿಚಯ, ಪುಸ್ತಕಗಳು ನಮಗೆ ದೊರಕಿದವು. ಕರ್ವಾಲೋನಂತಹ ಶ್ರೇಷ್ಠ ಕೃತಿ, ಮಿಲೇಮಿಯಂ ಸರಣಿಯ ಪುಸ್ತಕಗಳು ಹೊಸ ಓದುಗರನ್ನೇ ಸೃಷ್ಟಿಸಿದವು. ಇಂದಿನ ವಿದ್ಯಾರ್ಥಿಗಳು ತೇಜಸ್ವಿ ಕೃತಿಗಳ ಮೂಲಕ ಸಾಹಿತ್ಯ ಓದು ಆರಂಭಿಸಬೇಕು ಎಂದರು.

ಬೆಸ್ಟ್ ಕಾಲೇಜಿನ ಪ್ರಾಂಶುಪಾಲ ನವೀನ್ ಮಾತನಾಡಿ,ಪುಸ್ತಕ ಓದುವ ಸಂಸ್ಕöÈತಿ ಮರೆಯಾಗುತ್ತಿದೆ. ಇಂದಿನ ವಿದ್ಯಾರ್ಥಿಗಳು ಅಂಕಗಳ ಹಿಂದೆ ಬಿದ್ದು, ಬದುಕಿನ ಮೌಲ್ಯ ಕಲಿಸುವ ಸಾಹಿತ್ಯದ ಅರಿವನ್ನು ನಿರ್ಲಕ್ಷ÷್ಯ ಮಾಡುತ್ತಿದ್ದೇವೆ ಇದು ಆತಂಕಕಾರಿ ಸಂಗತಿ ಎಂದರು.

ಕಸಾಪ ಜಿಲ್ಲಾ ಕಾರ್ಯದರ್ಶಿ ಬಿ.ಆರ್. ಬೊಮ್ಮೇಗೌಡ, ಮಾರ್ಗದರ್ಶಿ ಸಮಿತಿ ಸದಸ್ಯರಾದ ಕಮಲಮ್ಮ, ಪ್ರಕಾಶ್ ಮೇಗಲಕೇರಿ, ಸಮಾಜ ಸೇವಕಿ ಕಾಂಚನಾ ಮಾಲಾ, ಕಸಾಪ ಹಾಸನ ತಾಲೂಕು ಅಧ್ಯಕ್ಷ ಕೆ.ಆರ್ ಮಮತೇಶ್,ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಂಕರ್,ಸಹ ಕಾರ್ಯದರ್ಶಿ ನಾಗೇಶ್ ಎಂ.ಡಿ, ಉಪನ್ಯಾಸಕ ವಿಕ್ರಮ್, ಪುನೀತ್ ಇದ್ದರು.

Post a Comment

Previous Post Next Post