ಹಾಸನ: ರಾಜ್ಯ ಸರಕಾರದ ಗ್ಯಾರಂಟಿಗಾಗಿ ಖಾಸಗೀ ಕಾಲೇಜುಗಳಲ್ಲಿ ಖಾಲಿ ಇರುವ ಉಪನ್ಯಾಸಕರು ಮತ್ತು ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳುತ್ತಿಲ್ಲ. ಈ ಸರಕಾರವು ಖಾಸಗೀ ಕಾಲೇಜುಗಳ ಮಾಲೀಕರ ಜೊತೆ ಶಾಮೀಲಾಗಿದೆ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರು ಗಂಭೀರವಾಗಿ ಆರೋಪಿಸಿದರು.
![]() |
ಹಾಸನದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ |
ಇದನ್ನು ಓದಿ: ಹಡ್ಲಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಮಕ್ಕಳಿಗೆ ಉಚಿತ ಕಲಿಕಾ ಸಾಮಗ್ರಿಗಳ ವಿತರಣೆ.
ಸ್ವತಂತ್ರ ಬಂದು ೭೫ ವರ್ಷ ಕಳೆದರೂ ಬಡ ಮಕ್ಕಳಿಗೆ ಶಿಕ್ಷಣ ನೀಡಲು ಆಗದಿದ್ದರೆ ಹೇಗೆ ಎಂದು ಪ್ರಶ್ನಿಸಿದರು. ಮಕ್ಕಳಿಗೆ ಶಿಕ್ಷಣ ನೀಡಲು ಆಗದಿದ್ದರೆ ಖಾಸಗಿ ಶಾಲೆಗಳ ಜೊತೆ ಸರ್ಕಾರಿ ಶಾಲೆಗಳನ್ನು ವಿಲೀನ ಮಾಡಲಿ. ಎಲ್ಲಾ ಸರಕಾರಿ ಕಾಲೇಜುಗಳನ್ನು ಖಾಸಗೀಕರಣ ಮಾಡಲಿ. ರಾಜ್ಯ ಸರಕಾರವು ತನ್ನ ಗ್ಯಾರಂಟಿಗಾಗಿ ಸರಕಾರಿ ಶಾಲೆಯನ್ನು ಉಳಿಸುವುದಕ್ಕೆ ಆಗುವುದಿಲ್ಲ ದಯಮಾಡಿ ಖಾಸಗೀ ಶಾಲೆಗೆ ಹೋಗಿ ಎಂದು ಹೇಳಿಬಿಡಿ ಎಂದು ಬೇಸರದಲ್ಲಿ ಹೇಳಿದ ಅವರು, ಈ ಸರಕಾರಕ್ಕೆ ನಾಚಿಕೆ ಆಗಬೇಕು. ವರ್ಗಾವಣೆ, ದಂಧೆ ಏನಾದರೂ ಮಾಡಿಕೊಂಡು ಬೇಕಾದರೇ ಹಾಳು ಬಿದ್ದು ಹೋಗಲಿ. ನಾನು ಬಡವರ ಮಕ್ಕಳಿಗೆ ಒಂದು ಉತ್ತಮವಾದ ಶಿಕ್ಷಣ ಕೊಡಿ ಎಂದು ಮನವಿ ಮಾಡುವುದಾಗಿ ಹೇಳಿದರು.
ಹೊಳೆನರಸೀಪುರದ ಕಾಲೇಜಿಗ ಬಂದ ಹಣವನ್ನು ಅರಸೀಕೆರೆಗೆ ವರ್ಗಾಯಿಸಿಕೊಂಡಿದ್ದಾರೆ. ಈಗಾಗಲೇ ಅರಸೀಕೆರೆಗೆ ೨ ಕೋಟಿ ಬಂದಿದ್ದರೂ ಸಾಕಾಗುವುದಿಲ್ಲ ಎಂದು ಈ ೭೫ ಲಕ್ಷವನ್ನು ತರಿಸಿಕೊಂಡಿದ್ದಾರೆ. ಇನ್ನು ಮೂರು ವರ್ಷಗಳ ಕಾಲ ತಡೆದುಕೊಳ್ಳುತ್ತೇನೆ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡರ ಹೆಸರು ಹೇಳದೇ ಆಕ್ರೋಶವ್ಯಕ್ತಪಡಿಸಿದರು.