ಅರಣ್ಯಸಂರಕ್ಷಕ ದೊರೆಸ್ವಾಮಿ ಅವರಿಗೆ ಸಿಬ್ಬಂದಿಗಳಿಂದ ಆತ್ಮೀಯ ಬೀಳ್ಕೊಡುಗೆ..

ಹಾಸನ : 38 ವರ್ಷಗಳ ಕಾಲ ಸತತವಾಗಿ ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಅರಣ್ಯ ಸಂರಕ್ಷಕ ದೊರೆಸ್ವಾಮಿ ಅವರಿಗೆ ಸಿಬ್ಬಂದಿಗಳಿಂದ ಆತ್ಮೀಯವಾಗಿ ಬಿಳ್ಕೊಡುಗೆ ನೀಡಲಾಯಿತು.

ಹಾಸನ ತಾಲೂಕು, ಮೆಳಗೋಡು ಗ್ರಾಮದ ದೊರೆಸ್ವಾಮಿ 1986ರಲ್ಲಿ ಇಲಾಖೆಯಲ್ಲಿ ಅರಣ್ಯ ಸಂರಕ್ಷಕರಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದರು.ಸತತ 38 ವರ್ಷಗಳ ಕಾಲ ಹಾಸನ ಜಿಲ್ಲೆಯ ವಿವಿಧ ಭಾಗಗಳಲ್ಲಿ ಅರಣ್ಯ ಸಂರಕ್ಷಕರಾಗಿ ನಿಷ್ಠೆ, ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿ ಸಿಬ್ಬಂದಿಗಳು ಹಾಗೂ ಅಧಿಕಾರಿಗಳ ಮೆಚ್ಚುಗೆ ಪಾತ್ರರಾಗಿದ್ದರು.

ಇದೆ ವೇಳೆ ಮಾತನಾಡಿದ ಅರಣ್ಯಾಧಿಕಾರಿ ರವಿಶಂಕರ್, ದೊರೆಸ್ವಾಮಿ ಸದಾ ಹಸನ್ಮುಖಿ ಹಾಗೂ ಸ್ನೇಹಜೀವಿ. ಅವರದು ಎಲ್ಲರೊಂದಿಗೆ ಹೊಂದಿಕೊಳ್ಳುವ ಸ್ವಾಭಾವ, ಅವರು ತಮ್ಮ ವೃತ್ತಿ ಜೀವನದಲ್ಲಿ ಕಾಡುಗಳ್ಳರಿಂದ ಅರಣ್ಯವನ್ನು ಸಂರಕ್ಷಿಸುವ ಮೂಲಕ ಅರಣ್ಯ ಇಲಾಖೆಗೆ ತಮ್ಮ ಅಮೂಲ್ಯವಾದ ಸೇವೆ ಸಲ್ಲಿಸಿದ್ದಾರೆ ಅವರ ನಿವೃತ್ತಿ ಜೀವನ ಸುಖಕರವಾಗಿರಲೆಂದು ಹಾರೈಸಿದರು.

ಇನ್ನು ಇದೇ ಸಂದರ್ಭದಲ್ಲಿ ಅರಣ್ಯಾಧಿಕಾರಿಗಳಾದ ರವಿಶಂಕರ್, ಪುಲಿಕಿತ್ ರಕ್ಷಿತ್ ನಾಯಕ್ ಮತ್ತು ಸಾಗರ್ ಸೇರಿದಂತೆ ಇನ್ನಿತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

Post a Comment

Previous Post Next Post