ಹಾಸನ: ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ನಡೆದ ಗಲಭೆಗೆ ಅಲ್ಲಿನ ಸ್ಥಳೀಯ ಪೊಲೀಸ್ ಇಲಾಖೆ ವೈಫಲ್ಯವೇ ಕಾರಣ ಎಂದು ಮಾಜಿ ಸಚಿವ ಹೆಚ್ ಡಿ ರೇವಣ್ಣ ಹೇಳಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಈ ಹಿಂದೆ ಕೂಡ ಅಲ್ಲಿ ಗಲಾಟೆ ನಡೆದಿತ್ತು ಆದರೆ ಎಚ್ಚೆತ್ತುಕೊಳ್ಳದ ಅಲ್ಲಿನ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸೂಕ್ತ ಭದ್ರತೆ ಒದಗಿಸುವ ಬದಲಾಗಿ ನಿರ್ಲಕ್ಷ್ಯ ತೋರಿದೆ ಇದರ ಪರಿಣಾಮವಾಗಿಯೇ ಗಲಭೆ ನಡೆದಿದೆ ಎಂದರು.
ಮಹಾತ್ಮಾ ಗಾಂಧೀಜಿ ಅವರು ಎಲ್ಲಾ ಧರ್ಮ, ಜಾತಿಯವರು ಒಟ್ಟಾಗಿ ಇರಲಿ ಎಂಬ ದೃಷ್ಟಿಯಲ್ಲಿ ಕೆಲಸ ಮಾಡಿದರು ಅದರ ಪರಿಣಾಮವಾಗಿ ಸ್ವತತ್ರ ಲಭಿಸಿತು ಆದರೆ ಇದೀಗ ಕೋಮು ಗಲಭೆ ಹೆಚ್ಚಾಗಿವೆ. ಇದೀಗ ಎಲ್ಲವನ್ನೂ ಇಟ್ಟಿಗೆ ತೆಗೆದುಕೊಂಡು ಹೋಗುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದರು.