ವಂಚನೆ ಒಳಗಾದವರಿಗೆ ಹಣ ಪಾವತಿ ಮಾಡದಿರುವುದನ್ನು ಖಂಡಿಸಿ ಅನಿರ್ಧಿಷ್ಟವಧಿ ಚಳುವಳಿ - ಡಿ.ಆರ್. ಲಿಂಗೇಶ್

 ಹಾಸನ : ಸರ್ಕಾರದ ಆಡಳಿತ ಅಧಿಕಾರಿಗಳು ಮತ್ತು ಇತರ ಅಧಿಕಾರಿಗಳು ಕಾನೂನು ಪಾಲನೆ ಮಾಡದಿರುವುದು ಮತ್ತು ವಂಚನೆಗೆ ಒಳಗಾಗಿದ್ದವರಿಗೆ ಹಣ ಪಾವತಿ ಮಾಡದಿರುವುದನ್ನು ಖಂಡಿಸಿ ಸೆಪ್ಟಂಬರ್ ೧೮ ರಂದು ಡಿಸಿ ಕಛೇರಿ ಮುಂದೆ ಅನಿರ್ಧಿಷ್ಟ ಅಸಹಕಾರ ಚಳುವಳಿ ನಡೆಸುವುದಾಗಿ ವಂಚನೆ ಸಂತ್ರಸ್ತ ಠೇವಣಿದಾರ ಕುಟುಂಬ ಸಂಘಟನೆಯ ಅಧ್ಯಕ್ಷ ಮಹದೇವ್ ಮತ್ತು ಉಪಾಧ್ಯಕ್ಷ ಡಿ.ಆರ್. ಲಿಂಗೇಶ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ಕಾಯಿದೆ ೨೦೧೯ (ಆನಿಯಂತ್ರಿತ ಠೇವಣಿ ಯೋಜನೆಗಳ ನಿಷೇದ ಕಾಯ್ದೆ ೨೦೧೯) ನ್ನು ಸರ್ವಾನುಮತದಿಂದ ಜಾರಿಗೆ ತಂದಿದೆ. ಮೋಸದ ಕಂಪನಿಗಳಾದ ಪಿ.ಎ.ಸಿ.ಎಲ್. ಮತ್ತು ಇತರೆ ಸೊಸೈಟಿಗಳಲ್ಲಿ ಕಳೆದುಹೋದ ಠೇವಣಿ ಮೊತ್ತವನ್ನು ಮರುಪಾವತಿಸಲಾಗದೆ. ಅರ್ಜಿದಾರರು ೧೮೦ ದಿನಗಳಲ್ಲಿ ಮೂರುಪಟ್ಟು ಮರುಪಾವತಿ ಮಾಡಲು ಕಾನೂನು ಬದ್ಧ ಹಕ್ಕನ್ನು ನೀಡಿದ್ದರು. ಅನಿಯಂತ್ರಿತ ಠೇವಣಿ ಯೋಜನೆಗಳ ಕಾಯ್ದೆ ೨೦೧೯ರಡಿಯಲ್ಲಿ ದೇಶದ ಪ್ರತಿ ಜಿಲ್ಲೆಯ ಭಾದಿತ ಅರ್ಜಿದಾರರಿಂದ ಅರ್ಜಿಗಳನ್ನು ಅನಿಯಮಿತ ಠೇವಣಿ ಯೋಜನೆಗಳಲ್ಲಿ ಸಾರ್ವಜನಿಕ ಠೇವಣಿಗಳನ್ನು ಹಿಂತಿರುಗಿಸಲು ಸಂಸತ್ ಮತ್ತು ಸರ್ಕಾರವು ವಿಶೇಷ . ನ್ಯಾಯಾಲಯಗಳು ಸಮರ್ಥ ಅಧಿಕಾರಿಗಳು ಸಹಾಯಕರನ್ನು ಆಯ್ಕೆ ಮಾಡಿ ನೇಮಕ ಮಾಡಿದೆ ಮತ್ತು ಅವರ ಪಾಪತಿಗಳನ್ನು ತೆಗೆದುಕೊಳ್ಳಲು ಮತ್ತು ಪಾವತಿಸಲು ಪಾವತಿ ಕೌಂಟರ್ ಸ್ಥಾಪನೆಯನ್ನು ಕಾಗದದಲ್ಲಿ ಸ್ಥಾಪಿಸಲಾಗಿದೆ ಎಂದರು. ದೇಶಾದ್ಯಂತ ಸಮರ್ಥ ಅಧಿಕಾರಿಗಳು ಮತ್ತು ಇತರ ನೋಡೆಲ್ ಏಜೆನ್ಸಿ ಗಳನ್ನು ನೇಮಿಸಿ ಕಾನೂನು ರೂಪಿಸುವ ಮೂಲಕ ಸರ್ಕಾರವು ಕಳೆದು ಹೋದ ವಂಚಿಸಿದ ಹಣವನ್ನು ಹಿಂದಿರುಗಿಸುತ್ತದೆ ಮತ್ತು ತಪ್ಪಿತಸ್ಥ ಅಪರಾಧಿಗಳಿಗೆ ಶಿಕ್ಷೆಯಾಗುತ್ತದೆ ಎಂದು ಸಾರ್ವಜನಿಕರಿಗೆ ವಿಶ್ವಾಸವನ್ನು ನೀಡಿತ್ತು. ಕಾನೂನು ಜಾರಿಯಾಗಿ ೫ ವರ್ಷಗಳು ಕಳೆದರೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾಯ್ದೆ ೨೦೧೯ರಡಿಯಲ್ಲಿ ಸಂತ್ರಸ್ತರಿಂದ ಅರ್ಜಿಗಳನ್ನು ತೆಗೆದುಕೊಂಡು ನಂತರ ಅವರ ಹಣವನ್ನು ಕಾನೂನು ಬದ್ಧವಾಗಿ ಹಿಂದಿರುಗಿಸಿಲ್ಲ. ಇದು ಕೋಟಿಗಟ್ಟಲೆ ಜನರಿಗೆ ಅನ್ಯಾಯವಾಗಿದೆ ಮತ್ತು ಅದನ್ನು ವಿರೋಧಿಸುವುದು ನಮ್ಮ ಕರ್ತವ್ಯ ಮತ್ತು ನಮ್ಮ ಹಕ್ಕು ಎಂದು ಆಗ್ರಹಿಸಿದರು.

ಇದನ್ನು ಓದಿ : ಮಲೆನಾಡು ಇಂಜಿನೀಯರಿಂಗ್ ಕಾಲೇಜಿನಲ್ಲಿ ಕ್ಯಾಂಪಸ್ ಸೆಲೆಕ್ಷನ್ ತರಬೇತಿ

ಇದು ಶಾಶ್ವತ ಕಾಯ್ದೆಯಾಗಿದ್ದು, ಇದರಡಿಯಲ್ಲಿ ನೇಮಕಗೊಂಡು ಸಕ್ಷಮ ಅಥವಾ ಸಹಾಯಕ ಸಕ್ಷಮ ಅಧಿಕಾರಿಯ ಖಾಯಂ ಆಧಾರದ ಮೇಲೆ ವಿಚಾರಣೆ ನಡೆಸಬೇಕು. ಹಣ ಪಾವತಿ ಮಾಡಿದ್ದ ಸಂತ್ರಸ್ತರಿಗೆ ಹಣವನ್ನು ಮರುಪಾವತಿ ಮಾಡಬೇಕೆಂದು ಮೂಲಕ ಸರ್ಕಾರಕ್ಕೆ ಒತ್ತಾಯಿಸುತ್ತೇವೆ. ೨೦೨೪ ಸೆಪ್ಟೆಂಬರ್೧೮ ರಂದು ಬುಧವಾರದಿಂದ ಜಿಲ್ಲಾಧಿಕಾರಿಗಳು, ಹಾಸನ ಜಿಲ್ಲೆ ಹಾಸನ ರವರ ಕಛೇರಿಯ ಮುಂಭಾಗದ ಆವರಣದಲ್ಲಿಆನಿರ್ಧಿಷ್ಟ, ಚಳುವಳಿಯನ್ನು ಹಮ್ಮಿಕೊಳ್ಳುವುದು ಅನಿವಾರ್ಯವಾಗಿರುವುದರಿಂದ ಇದಕ್ಕೆ ಅನುಮತಿ ನೀಡಿ ಸಹಕರಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಚನ್ನರಾಯಪಟ್ಟಣ ತಾಲೂಕು ಅಧ್ಯಕ್ಷ ಕೃಷ್ಣೇಗೌಡ, ಅರಸೀಕೆರೆ ತಾಲೂಕು ಅಧ್ಯಕ್ಷ ರಮೇಶ್ ಇತರರು ಉಪಸ್ಥಿತರಿದ್ದರು.




Post a Comment

Previous Post Next Post