ಮಲೆನಾಡು ಇಂಜಿನೀಯರಿಂಗ್ ಕಾಲೇಜಿನಲ್ಲಿ ಕ್ಯಾಂಪಸ್ ಸೆಲೆಕ್ಷನ್ ತರಬೇತಿ

 ಹಾಸನ ಮಲೆನಾಡು ಇಂಜಿನೀಯರಿಂಗ್ ಕಾಲೇಜಿನಲ್ಲಿ 2024ರ ಸೆಪ್ಟೆಂಬರ್ 13ರಂದು ಬೆಂಗಳೂರಿನ ಇನ್ಫೋಸಿಸ್ ಪೇನಕಲ್ ಕಂಪನಿಯ ಸಹಯೋಗದೊಂದಿಗೆ ವಿದ್ಯಾರ್ಥಿಗಳಿಗೆ ಸಾಪ್ಟ್ವೇರ್ ತಂತ್ರಜ್ಞಾನದಲ್ಲಿ ತರಬೇತಿ ನೀಡಲು ಒಂದು ಕಾರ್ಯಕ್ರಮ ಆಯೋಜಿಸಲಾಯಿತು. ಈ ಕಾರ್ಯಕ್ರಮದ ಉದ್ದೇಶ 5ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಇಂಜಿನೀಯರಿಂಗ್ ಕ್ಷೇತ್ರದಲ್ಲಿ ಉದ್ಯೋಗ ಅವಕಾಶಗಳನ್ನು ಉತ್ತಮವಾಗಿ ಅನುಸರಿಸಲು ಸಹಾಯ ಮಾಡುವುದಾಗಿದೆ.

ಇನ್ಫೋಸಿಸ್ ಆಡಳಿತಾಧಿಕಾರಿಯಾದ ರಾಜೇಶ್ವರರಾವ್
ಇನ್ಫೋಸಿಸ್ ಆಡಳಿತಾಧಿಕಾರಿಯಾದ ರಾಜೇಶ್ವರರಾವ್ ಅವರು, ಈ ತರಬೇತಿ ಕಾರ್ಯಕ್ರಮವು ವಿದ್ಯಾರ್ಥಿಗಳನ್ನು ತಂತ್ರಜ್ಞಾನ ಮತ್ತು ಸಾಪ್ಟ್ವೇರ್ ಕ್ಷೇತ್ರದಲ್ಲಿ ಉದ್ಯೋಗ ಪಡೆಯಲು ಸಹಾಯ ಮಾಡುವುದಾಗಿ ತಿಳಿಸಿದರು. ಈ ತರಬೇತಿ ಅಕ್ಟೋಬರ್ ತಿಂಗಳಿಂದ 5ನೇ ಮತ್ತು 6ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ನೀಡಲಾಗುವುದು, ಮತ್ತು ತರಬೇತಿಯ ವೇಳೆ ವಿದ್ಯಾರ್ಥಿಗಳಿಗೆ ಸ್ಟೇಪೆಂಡು ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಇದನ್ನು ಓದಿ: ಆಲೂರು ತಾಲ್ಲೂಕಿನ ನೂತನ ಅಧ್ಯಕ್ಷೆ ತಾಹೀರ ಬೇಗಂ ಅಧ್ಯಕ್ಷತೆಯಲ್ಲಿ ಮೊದಲ ಸಭೆ

ಇತ್ತೀಚೆಗೆ, ಹಲವಾರು ಇಂಜಿನೀಯರಿಂಗ್ ಪದವಿ ಪಡೆದ ವಿದ್ಯಾರ್ಥಿಗಳು ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿದ್ದಾರೆ. ತರಬೇತಿ ಮೂಲಕ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಉದ್ಯೋಗದ ಅವಕಾಶವನ್ನು ನೀಡಲಾಗುವುದು ಎಂಬುದಾಗಿ ರಾಜೇಶ್ವರರಾವ್ ಹೇಳಿದರು. ಕಾರ್ಯಕ್ರಮದಲ್ಲಿ ಇನ್ಫೋಸಿಸ್ ಪೇನಕಲ್ ಮುಖ್ಯಸ್ಥರಾದ ಕಾರ್ತಿಕ್ ಮತ್ತು ಕೃಷ್ಣಸ್ವಾಮಿ ಸುಬ್ಬರಾವ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಾಸನ ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಆರ್.ಟಿ. ದ್ಯಾವೇಗೌಡರು, ಸಂಸ್ಥೆಯ ಮೇನೆಜರ್ ಶಿವರಾಮ್ ಕೃಷ್ಣಯ್ಯ, ಮಲೆನಾಡು ಇಂಜಿನೀಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಎ.ಜೆ. ಕೃಷ್ಣಯ್ಯ, ಮಲೆನಾಡು ಇಂಜಿನೀಯರಿಂಗ್ ಕಾಲೇಜಿನ ಮೀ ರೈಜ್ ಫೌಂಡೇಶನ್ ಕಾರ್ಯನಿರ್ವಹಣಾಧಿಕಾರಿ ಗೀತಾ ಕಿರಣ್, ಮತ್ತು ಕಾಲೇಜಿನ ಪ್ಲೇಸ್ಮೆಂಟ್ ಅಧೀಕಾರಿ ಬಿ.ಬಿ. ನಿಲಕಂಠಪ್ಪ ಮತ್ತು ಕಾಲೇಜಿನ ಪ್ರಾಧ್ಯಾಪಕರು ಉಪಸ್ಥಿತರಿದ್ದರು.



Post a Comment

Previous Post Next Post