ಮಾದಕ ವಸ್ತು ಸೇವಿಸಿದ ವಿದ್ಯಾರ್ಥಿಗಳು; ಹಾಸ್ಟೆಲ್ ವಾರ್ಡನ್ ಅಮಾನತು

ಹಾಸನ : ವಿದ್ಯಾರ್ಥಿಗಳು ಹಾಸ್ಟೆಲ್ ನಲ್ಲಿ (Hostel) ಮಾದಕ ವಸ್ತು ಸೇವಿಸಿರುವ ಪ್ರಕರಣ ಬೆಳಕಿಗೆ ಬಂದಿದ್ದು, ವಾರ್ಡನ್ (Hostel Warden) ನನ್ನು ಅಮಾನತು ಮಾಡಲಾಗಿದೆ.

ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಬಿಕ್ಕೋಡು ಗ್ರಾಮದಲ್ಲಿ ಈ ಘಟನೆ ನಡೆದಿತ್ತು. ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯದಲ್ಲಿ ಈ ಆರೋಪ ಕೇಳಿ ಬಂದಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಾರ್ಡನ್ ಚಂದ್ರಶೇಖರ್ ಎಂಬುವವರು ಅಮಾನತು ಮಾಡಲಾಗಿದೆ.

ಹಾಸ್ಟೆಲ್ ನಲ್ಲಿ ವಿದ್ಯಾರ್ಥಿಗಳು ಮಾದಕ ವಸ್ತು ಸೇವಿಸಿರುವ ಪ್ರಕರ ಕೇಳಿ ಬಂದಿತ್ತು. ಹೀಗಿಗ ಕರ್ತವ್ಯ ಲೋಪ ಕಂಡು ಬಂದ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಅಮಾನತು ಮಾಡುವಂತೆ ಶಿಫಾರಸ್ಸು ಮಾಡಿ ವರದಿ ನೀಡಿದ್ದರು. ಹೀಗಾಗಿ ವಾರ್ಡನ್ ನನ್ನು ಅಮಾನತು ಮಾಡಲಾಗಿದೆ.

Post a Comment

Previous Post Next Post