ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಕಾಮನ್ ವೆಲ್ತ್ ಪವರ್ ಲಿಫ್ಟಿಂಗ್ ಸ್ಪರ್ದೆಗೆ ಭಾರತ ತಂಡಕ್ಕೆ ಆಯ್ಕೆಯಾಗಿದ್ದು, ಕಾಮನ್ ವೆಲ್ತ್ ಸ್ಪರ್ದೆಯು ಸನ್ ಸಿಟಿ, ಸೌತ್ ಆಫ್ರಿಕದಲ್ಲಿ ದಿನಾಂಕ ೦೪-೧೦-೨೦೨೪ ರಿಂದ ೧೩-೧೦-೨೦೨೪ ರ ವರೆಗೆ ನಡೆಯಲಿದ್ದು. ಕಾಮನ್ ವೆಲ್ತ್ ಸ್ಪರ್ಧೆಗೆ ಅಂದಾಜು ೧,೬೦,೦೦೦ ಆಗುತ್ತದೆ, ಆದ್ದರಿಂದ ನನ್ನ ಖರ್ಚಿನ ಸಲುವಾಗಿ ಧನ ಸಹಾಯ ಮಾಡಬೇಕಾಗಿ ಕೋರುತ್ತೇನೆ. ನಾನು ಖಾಸಗಿ ಉದ್ಯೋಗ ಮಾಡುವುದರಿಂದ ನಾನು ೧೫ ವರ್ಷದಿಂದ ಹಾಸನದಲ್ಲಿ ನೆಲೆಸಿರುತ್ತೇನೆ. ನಾನು ಸುಮಾರು ೪ ವರ್ಷಗಳಿಂದಲೂ ರಾಜ್ಯ ಮಟ್ಟ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪವರ್ ಲಿಫ್ಟಿಂಗ್ ಕ್ರೀಡೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ, ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದೇನೆ, ಹಾಸನ ವೇಟ್ ಲಿಫ್ಟಿಂಗ್ ಸಂಘದ ಸಹ ಕಾರ್ಯದರ್ಶಿಯಾಗಿಯೂ ಕಾರ್ಯ ನಿರ್ವಹಿಸುತ್ತಿದ್ದೇನೆ ಹಾಗೂ ಹಲವಾರು ಮಕ್ಕಳಿಗೆ ಪವರ್ ಲಿಫ್ಟಿಂಗ್ ತರಬೇತಿಯನ್ನು ನೀಡುತ್ತಿದ್ದೇನೆ ಮತ್ತು ಹಲವಾರು ಸನ್ಮಾನಗಳು ದೊರೆತಿವೆ ಎಂದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾಸನದ ಕ್ರೀಡಾಪಟು ಮೊಟ್ಟಮೊದಲ ಬಾರಿಗೆ ಏಷಿಯನ್ ಪವರ್ ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ೭೪ ಕೆ.ಜಿ ವಿಭಾಗ (ಎಂ.೧) ರಡಿಯಲ್ಲಿ ಬೆಳ್ಳಿ ಪದಕವನ್ನು ಪಡೆದಿರುತ್ತೇನೆ. ರಾಷ್ಟ್ರೀಯ ಮಟ್ಟದಲ್ಲಿ ೫ ಬಾರಿ ಸ್ಪರ್ಧಿಸಿ ಅದರಲ್ಲಿ ನಾಲ್ಕು ಬಾರಿ ಪದಕವನ್ನು ಗಳಿಸಿರುತ್ತೇನೆ ಎಂದರ. (ಬೆಳ್ಳಿ ಹಾಗೂ ಕಂಚಿನ ಪದಕ), ರಾಜ್ಯ ಮಟ್ಟದಲ್ಲಿ ೫ ಬಾರಿ ಸ್ಪರ್ಧಿಸಿ ೪ ಚಿನ್ನ ಮತ್ತು ಒಂದು ಬೆಳ್ಳಿ ಪದಕವನ್ನು ಗಳಿಸಿರುತ್ತೇನೆ. ರಾಷ್ಟ್ರ ಮಟ್ಟಕ್ಕೆ, ರಾಜ್ಯಕ್ಕೆ, ಜಿಲ್ಲೆಗೆ, ಹಾಗೂ ನನ್ನ ಹುಟ್ಟೂರಿಗೆ ಕೀರ್ತಿ ತಂದಿರುತ್ತೇನೆ. ಇದನ್ನು ಪರಿಗಣಿಸಿ ತಾವುಗಳೂ ಸಹಾಯ ಮಾಡಬೇಕೆಂದು ಕೋರುತ್ತೇನೆ. ಮುಂದೆ ಬರುವ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸ್ಪರ್ಧೆಗೆ ತಮ್ಮ ಆಶೀರ್ವಾದ ಹಾಗೂ ಸಹಾಯ ಹಸ್ತ ಮಾಡಬೇಕಾಗಿ ಕೋರುತ್ತೇನೆ ಎಂದು ಹೇಳಿದರು. ಧನ ಸಹಾಯ ಮಾಡುವರು ಖಾತೆ ವಿವರ ಸಂತೋಷ್ ಶೆಟ್ಟಿ ಹಾಸನದ ರವೀಂದ್ರ ನಗರದಲ್ಲಿರುವ ಬ್ಯಾಂಕ್ ಆಫ್ ಬರೋಡ, ಅಕೌಂಟ್ ನಂಬರ್ ೮೯೫೬೦೧೦೦೦೦೦೬೬೫, ಐ.ಎಫ್. ಎಸ್.ಸಿ. ಕೋಡ್ ಃಂಖಃಔಗಿಎಊಂಖಂ, ಮೊ. ,೯೭೪೧೮೪೮೨೭೫ ಸಂಪರ್ಕಿಸಬಹುದಾಗಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಅಮೇಚೂರು ಬಾಡಿ ಬಿಲ್ಡಿಂಗ್ ಅಸೋಸಿಯೇಷನ್ ಉಪಾಧ್ಯಕ್ಷ ಮೋಹನ್ ಕುಮಾರ್, ಸಚಿನ್ ಪ್ರಭು, ಪಂಜ ಕುಸ್ತಿ ಸಂಸ್ಥೆ ಅಧ್ಯಕ್ಷ ಗಿರೀಗೌಡ, ಚರಣ್ ಬೂವನಹಳ್ಳಿ ಇತರರು ಉಪಸ್ಥಿತರಿದ್ದರು.