ಸಕಲೇಶಪುರ :ಕಳೆದ ಮೂರು ದಿನಗಳಿಂದ ಅನಾರೋಗ್ಯದಿಂದ ನರಳುತ್ತಿದ್ದ ಹೆಣ್ಣಾನೆ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ, ವಣಗೂರು ಬಳಿ ನಡೆದಿದೆ.
ಸುಮಾರು ಇಪ್ಪತ್ತು ವರ್ಷದ ಹೆಣ್ಣಾನೆ ಕಳೆದ ಮೂರು ದಿನಗಳಿಂದ ಆಹಾರ ತ್ಯಜಿಸಿ ಒಂದೇ ಸ್ಥಳದಲ್ಲಿ ನಿಂತು ನರಳಾಡುತ್ತಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದ ಕಾಡಾನೆಯನ್ನು ಚಿಕಿತ್ಸೆಗಾಗಿ ಸ್ಥಳಾಂತರ ಮಾಡಿದರೆ ಹೃದಯಾಘಾತವಾಗುವ ಸಂಭವ ಇದ್ದಿದ್ದರಿಂದ ಇಂದು ಚಿಕಿತ್ಸೆ ನೀಡಲು ಅರಣ್ಯ ಇಲಾಖೆಯ ಸಿಬ್ಬಂದಿ ಮುಂದಾಗಿದ್ದರು. ಆದರೆ ಚಿಕಿತ್ಸೆ ನೀಡಲು ಮುಂದಾದಾಗ ಮೃತಪಟ್ಟಿರುವುದು ಬೆಳಿಕಿಗೆ ಬಂದಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ, ಪರಿಶೀಲನೆ ನಡೆಸಿದ್ದಾರೆ.
Tags
ಸಕಲೇಶಪುರ