ಹಾಸನ : ಎನ್‌ಎಸ್‌ಎಸ್ ದಿನ ಮತ್ತು ಮಹಾತ್ಮ ಗಾಂಧೀಜಿಯವರ ಜಯಂತಿಯ ಅಂಗವಾಗಿ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಎನ್‌ಎಸ್‌ಎಸ್ ಘಟಕದ ವತಿಯಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ವಿಶೇಷ ಉಪನ್ಯಾಸಕರಾಗಿ ಡಾ. ಶಿವಣ್ಣ ನಾಯ್ಕ್ ಮಾತನಾಡಿ, ಎನ್‌ಎಸ್‌ಎಸ್ ಎಂಬುದು ವ್ಯಕ್ತಿತ್ವವನ್ನು ಅಭಿವೃದ್ಧಿಪಡಿಸಿಕೊಳ್ಳುವ ಒಂದು ವೇದಿಕೆಯಾಗಿದ್ದು, ಮಹಾತ್ಮ ಗಾಂಧೀಜಿಯವರ ಸೈದಾಂತಿಕ ದೃಷ್ಟಿ ಕೋನದಿಂದ ಪ್ರೇರಿತವಾಗಿದೆ. ಮಹಾತ್ಮ ಗಾಂಧೀಜಿಯವರು ದೇಶಕ್ಕಾಗಿ ಸತ್ಯವೇ ದೇವರು ಎಂದು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು ಹಾಗಾಗಿ ಅವರ ಕನಸಿನ ಭಾರತ ಸ್ವಚ್ಛ ಮತ್ತು ಅಭಿವೃದ್ಧಿ ಹೊಂದಿದ ದೇಶದ ಪರಿಕಲ್ಪನೆ ಆಗಿತ್ತು ಎಂದು ಉಪನ್ಯಾಸ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಗಣೇಶ್ ಹೆಗ್ಗಡೆ ಮಾತನಾಡಿ, ಪ್ರತಿಯೊಬ್ಬರು ಸ್ವಚ್ಛತೆಯ ಬಗ್ಗೆ ಜಾಗೃತಿ ವಹಿಸಬೇಕು ಇದಕ್ಕಾಗಿ ಯುವ ಜನಾಂಗದವರು ಮುಂದಾದಾಗ ಮಾತ್ರ ಸ್ವಚ್ಛ ಸಮಾಜವನ್ನು ನಿರ್ಮಿಸಲು ಸಾಧ್ಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿಗಳಾದ ಲೇಪಾಕ್ಷಯ್ಯ ಎಸ್.ವಿ, ಎನ್.ಎಸ್.ಎಸ್ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಡಾಕ್ಟರ್ ಭಾರತಿ ಜಿ ಗಣವಾರಿ, ಡಾ. ಅನಿತಾ ಕೆಎನ್, ಮಹದೇವಪ್ಪ ಎಸ್ ಎನ್, ಪಾಪಣ್ಣ, ಮಂಜುನಾಥ್ ಕಾವೇರಿ ಹಾಜರಿದ್ದರು.
Tags
ಹಾಸನ