ನವೆಂಬರ್ 17-18ರಂದು ಸಿಪಿಐಎಂ 12ನೇ ಹಾಸನ ಜಿಲ್ಲಾ ಸಮ್ಮೇಳನ

ಹಾಸನ : ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಒತ್ತಾಯಿಸಿ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ಸಿಪಿಐಎಂ 12ನೇ ಹಾಸನ ಜಿಲ್ಲಾ ಸಮ್ಮೇಳನ 2024ರ ನವೆಂಬರ್ 17-18 ರಂದು ಹಾಸನದ ರಂಗೋಲಿ ಹಳ್ಳದಲ್ಲಿರುವ ಶ್ರೀ ನೀಲಕಂಠೇಶ್ವರ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಧರ್ಮೇಶ್ ತಿಳಿಸಿದರು.


ಹಾಸನದಲ್ಲಿ ಮಾತನಾಡಿ, ಹಾಸನ ಜಿಲ್ಲೆಯ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕöÈತಿಕ ಪ್ರಗತಿಗೆ ಪೂರಕವಾಗಿ ಪರಿಸರ, ಕೃಷಿ, ಕೈಗಾರಿಕೆ,ವಾಣಿಜ್ಯ ಮತ್ತು ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಅತ್ಯಗತ್ಯವಾಗಿ ಜಿಲ್ಲೆಯಲ್ಲಿ ಜಾರಿಯಾಗ ಬೇಕಾದ ಯೋಜನೆಗಳಿಗೆ ಒತ್ತಾಯಿಸಿ ಹಾಗೂ ಸೌಹಾರ್ದ ಮತ್ತು ಸಮೃದ್ಧ ಹಾಸನ ಜಿಲ್ಲೆಯ ನಿರ್ಮಾಣಕ್ಕಾಗಿ ಈ ಜಿಲ್ಲಾ ಸಮ್ಮೇಳನವನ್ನು ಸಂಘಟಿಸಲಾಗುತ್ತಿದೆ. ಜಿಲ್ಲೆಯ ಜನರಿಗೆ ಸಂವಿಧಾನಾತ್ಮಕವಾಗಿ ಘನತೆಯಿಂದ ಬದುಕಲು ಅಗತ್ಯವಾಗಿರುವ ಭೂಮಿ, ನೀರು, ವಸತಿ, ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗದ ಅವಕಾಶಗಳಿ ಜಾರಿಗಾಗಿ ಹಾಸನ ಜಿಲ್ಲೆಯಲ್ಲಿ ಸಾಮೂಹಿಕವಾದ ಜನಪರ ಚಳುವಳಿಯನ್ನು ಸಂಘಟಿಸಿಸುವ ಕುರಿತು ಈ ಸಮ್ಮೇಳನವು ಚರ್ಚಿಸಿ ನಿರ್ಣಯ ಕೈಗೊಳ್ಳಲಿದೆ ಎಂದರು. 

ರೈತರು, ಕೂಲಿ-ಕಾರ್ಮಿಕರು, ದಲಿತರು, ಅಲ್ಪಸಂಖ್ಯಾತರು, ಮಹಿಳೆಯರು, ಮಕ್ಕಳು, ವಿದ್ಯಾರ್ಥಿಯುವಜನರು ಮತ್ತು ಬಡವರ ಹಕ್ಕುಗಳಿಗಾಗಿ ಪ್ರಬಲ ಹೋರಾಟವನ್ನು ಮುನ್ನಡೆಸಲು ಬೇಕಾದ ಸಮಗ್ರ ಯೋಜನೆಯನ್ನು ಸಮ್ಮೇಳನ ಅಂಗೀಕರಿಸಲಿದೆ ಎಂದು ಹೇಳಿದರು.

ಈ ನಡುವೆ ನಮ್ಮನು ಅಗಲಿರುವ ನಮ್ಮ ಪಕ್ಷದ ನಾಯಕರ ಸ್ಮರಣಾರ್ಥ ಜಿಲ್ಲಾ ಸಮ್ಮೇಳನ ನಡೆಯುವ ಸ್ಥಳಕ್ಕೆ ಅಗಲಿದ ಕಾ.ಸೀತಾರಂ ಯೆಚೂರಿ ನಗರ, ಕಾಮ್ರೇಡ್ ಬುದ್ಧದೇವ ಭಟ್ಟಾಚಾರ್ಯ ಸಭಾಂಗಣ ಮತ್ತು ಕಾಮ್ರೇಡ್ ಜಿ.ವಿ. ಶ್ರೀರಾಮರೆಡ್ಡಿ ವೇದಿಕೆ ಎಂದು ಹೆಸರುಗಳನ್ನು ಇಡಲಾಗಿದೆ. ಸಮ್ಮೇಳನದ ಆರಂಭಕ್ಕೂ ಮುನ್ನ ನವೆಂಬರ್ 17ರ ಭಾನುವಾರ ಬೆಳಗ್ಗೆ 11 ಗಂಟೆಗೆ ಹಾಸನದ ಹೇಮಾವತಿ ಪ್ರತಿಮೆಯಿಂದ ಸಮ್ಮೇಳನದ ಸಭಾಂಗಣದವರೆಗೆ ಆಕರ್ಷಕ ಬೃಹತ್ ಮೆರವಣಿಗೆ ನಡೆಯಲಿದ್ದು ನಂತರ ಸಾರ್ವಜನಿಕ ಸಭೆ ನಡೆಯಲಿದೆ. ಈ ಸಾರ್ವಜನಿಕ ಸಭೆಯಲ್ಲಿ ಸಿಪಿಐ(ಎಂ)ನ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಕಾಟ್ರೇಡ್ ಜಿ.ಸಿ. ಬಯ್ಯಾರೆಡ್ಡಿ ಮತ್ತು ಕಾಟ್ರೇಡ್ ಎಸ್. ವರಲಕ್ಷಿ÷್ಮಯವರು ಭಾಗವಹಿಸಿ ಮಾತನಾಡಲಿದ್ದಾರೆ ಎಂದರು. 

ಮಾರ್ಕ್ಸ್ವಾದಿ ಕಮ್ಯೂನಿಸ್ಟ್ ಪಕ್ಷದ 12ನೇ ಜಿಲ್ಲಾ ಸಮ್ಮೇಳನ ನವೆಂಬರ್ 17 ಮತ್ತು 18ರ ಎರಡು ದಿನಗಳ ಕಾಲ ನಡೆಯಲಿದ್ದು ಈ ಸಮ್ಮೇಳನಕ್ಕೆ ಜಿಲ್ಲೆಯ ಆಯ್ದ 150 ಸದಸ್ಯರು ಪ್ರತಿನಿಧಿಗಳಾಗಿ ಭಾಗವಹಿಸಿ ಪ್ರತಿನಿಧಿ ಅಧಿವೇಶನದಲ್ಲಿ ಲಿಖಿತವಾಗಿ ಮಂಡಿಸಲಾಗುವ ಕರಡು ಕಾರ್ಯದರ್ಶಿ ವರದಿ ಮತ್ತು ರಾಜಕೀಯ ಹಾಗೂ ಸಂಘಟನಾ ನಿರ್ಣಯಗಳ ಮೇಲೆ ಚರ್ಚೆ ನಡೆಸಲಿದ್ದಾರೆ. ಹಾಗೂ ಮುಂದಿನ ಮೂರು ವರ್ಷಗಳ ಅವಧಿಗೆ ಪಕ್ಷದ ಭವಿಷ್ಯ ಕರ್ತವ್ಯಗಳು ಮತ್ತು ನೂತನ ಜಿಲ್ಲಾ ಸಮಿತಿಯನ್ನು ಆಯ್ಕೆ ಮಾಡಲಿದ್ದಾರೆ.ಈ ಹಿನ್ನೆಲೆಯಲ್ಲಿ ಸಿಪಿಐ(ಎಂ)ನ 12ನೇ ಹಾಸನ ಜಿಲ್ಲಾ ಸಮ್ಮೇಳನವನ್ನು ಯಶಸ್ವಿ ಗೊಳಿಸಲು ಈ ಮೂಲಕ ಎಲ್ಲರ ಸಹಕಾರವನ್ನು ಮಾಡಿಕೊಳ್ಳುತ್ತಿದ್ದೇವೆ ಎಂದು ಹೇಳಿದರು.

ಸ್ಥಳೀಯ ಸಮಿತಿ ಕಾರ್ಯದರ್ಶಿ ಎಂ.ಜಿ. ಪೃಥ್ವಿ, ಜಿಲ್ಲಾ ಸಂಘಟನಾ ಸಮಿತಿ ಸದಸ್ಯರು ಜಿ.ಪಿ. ಸತ್ಯನಾರಾಯಣ, ಹೆಚ್.ಆರ್. ನವೀನ್ ಕುಮಾರ್, ಸೌಮ್ಯ,ಅರವಿಂದ್ ಹಾಜರಿದ್ದರು.

Post a Comment

Previous Post Next Post