ಹಾಸನ: ಹಾಸನ ಜಿಲ್ಲೆಯಲ್ಲಿ ಹಾಸನದ ಕಲಾ ಮಂದಿರದಲ್ಲಿ ನಡೆದ ರಾಜ್ಯ ಮಟ್ಟದ ಫಿಸಿಕ್ ಮತ್ತು ದೇಹದಾರ್ಡ್ಯ ಸ್ಪರ್ಧೆಯಲ್ಲಿ ಹಾಸನದ ಶ್ರೀನಿಧಿಯವರು ಆಗ್ರಸ್ಥಾನಗಳಿಸಿ ಶ್ರೀ ಯುವರತ್ನ 2024 ಬಿರುದು ಪ್ರಶಸ್ತಿಯನ್ನು ಪಡೆದುಕೊಂಡರು.
ದಾವಣಗೆರೆಯ ರಾಹುಲ್‌ರವರು ಅತ್ಯುತ್ತಮ ಸ್ನಾಯುವಂತ 2024 ಬಿರುದು ಪ್ರಶಸ್ತಿಯನ್ನು ಮತ್ತು ಬೆಳಗಾಂನ ನಾಗೇಂದ್ರ ಮಡಿವಾಳ್ ರವರು ಅತ್ಯುತ್ತಮ ಪ್ರದರ್ಶಕ 2024 ಬಿರುದು ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಮೆನ್ ಫಿಸಿಕ್ ಸ್ಪರ್ಧೆಯಲ್ಲಿ ಬೆಂಗಳೂರಿನ ವರುಣ ರವರು ಶ್ರೀ ಯುವರತ್ನ ಮೆನ್ ಫಿಸಿಕ್ 2024 ಬಿರುದು ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
ಶ್ರೀಯುವರತ್ನ ಮೆನ್ ಫಿಸಿಕ್ ವಿಜೇತರು : ಸಾಗರ್, ಇರ್ಪಾನ್, ಶ್ರೀನಿಧಿ, ಶ್ರೀ ಯುವರತ್ನ 2024 ವಿಜೇತರು: ಪರಮೇಶ್, ಸಾಗರ್,ಶ್ರೀ ನಿಧಿ, ಇರ್ಪಾನ್
ಹಾಸನದ ರಾಜಣ್ಣ ಫಿಟ್‌ನೆಸ್ ಮತ್ತು ಹಾಸನದ ಜಿಲ್ಲಾ ಅಮೆಚೂರ್ ದೇಹದಾರ್ಡ್ಯ ಸಂಸ್ಥೆಯ ಆಶ್ರಯದಲ್ಲಿ ನಡೆದ ಈ ಸ್ಪರ್ಧೆಯ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬೆಂಗಳೂರಿನ ಹೆಚ್.ಪಿ ದ್ರುವ ಕುಮಾರ್ ಮತ್ತು ಟಗರು ಚಿತ್ರದ ಖ್ಯಾತ ನಟಿ ಮಾನ್ವಿತ ಹರೀಶ್ ರವರು ಬಹುಮಾನ ವಿತರಿಸಿದ್ದರು ಎಂದು ಹೆಚ್.ಡಿ.ಎ.ಬಿ.ಬಿ.ಎ ಕಾರ್ಯದರ್ಶಿ ತಿಳಿಸಿದ್ದಾರೆ.