ಬೇಲೂರು ಪಟ್ಟಣದ ಪುರಿಬಟ್ಟಿ ಬೀದಿಯ ಲಯನ್ಸ್ ಕ್ಲಬ್ ಮುಂಭಾಗವಿರುವ ಗೋಡಾನ್‌ಗಳ ಹಿಂಭಾಗದಲ್ಲಿ ನಿರುಪಯುಕ್ತ ವಸ್ತುಗಳಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಈ ಘಟನೆಯಲ್ಲಿ ಎರಡು ಗೋಡಾನ್‌ಗಳ ಗೋಡೆಗಳಿಗೆ ಹಾನಿಯಾಗಿದೆ. ಈ ಗೋಡಾನ್‌ಗಳು ಅಕ್ರಂ ಎಂಬುವವರಿಗೆ ಸೇರಿದ್ದು, ಬೆಂಕಿ ದಟ್ಟವಾಗಿ ಹರಡಿದ ಹಿನ್ನೆಲೆಯಲ್ಲಿ ಸ್ಥಳೀಯರು ಆತಂಕಕ್ಕೆ ಒಳಗಾದರು.
ಸ್ಥಳಕ್ಕೆ ತಕ್ಷಣವೇ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ಶಮನಗೊಳಿಸಲು ಮುಂದಾದರು. ಅವರ ಸಮಯಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿದ್ದು, ಬೇಲೂರು ಪಟ್ಟಣದಲ್ಲಿ ಈ ಕಾರ್ಯಕ್ಕೆ ಸ್ಥಳೀಯರು ಶ್ಲಾಘನೆ ವ್ಯಕ್ತಪಡಿಸಿದರು. ಬೆಂಕಿ ನಂದಿಸುವಲ್ಲಿ ಹೆಚ್ಚಿನ ಸಮಯವಿತ್ತಿದ್ದರೆ ಸುಮಾರು ಹದಿನೈದು ಸರಕು ತುಂಬಿದ ಗೋಡಾನ್‌ಗಳು ಬೆಂಕಿಗಾಹುತಿಯಾಗುತ್ತಿದವು.
ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಘಟನೆ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
Tags
ಬೇಲೂರು