ಹೇಮಗಂಗೊತ್ರಿ ವಿಶ್ವ ವಿದ್ಯಾನಿಲಯದಲ್ಲಿ ಅಂತರ್ ಕಾಲೇಜು ಗುಡ್ಡಗಾಡು ಓಟಕ್ಕೆ ಕುಲಪತಿ ಪ್ರೊ. ಟಿ.ಸಿ ತಾರಾನಾಥ್ ಚಾಲನೆ

ಹಾಸನ: ಹಾಸನ ಹೇಮಗಂಗೋತ್ರಿ ವಿಶ್ವವಿದ್ಯಾನಿಲಯದ ವತಿಯಿಂದ ತಾಲೂಕಿನ ಕೆಂಚಟ್ಟಹಳ್ಳಿ ಬಳಿ ಇರುವ ಯುನಿವರ್ಸಿಟಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಅಂತರ್ ಕಾಲೇಜು ಗುಡ್ಡಗಾಡು ಓಟ ಸ್ಪರ್ಧೆಯನ್ನು ಹಾಸನ ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೊ. ಟಿ.ಸಿ ತಾರಾನಾಥ್ ಉದ್ಘಾಟಿಸಿದರು.

ಹಾಸನ ವಿಶ್ವ ವಿದ್ಯಾನಿಲಯದ ಅಡಿಯಲ್ಲಿ ಬರುವ ಸುಮಾರು 53 ಕಾಲೇಜುಗಳ ಪ್ರತಿನಿಧಿಗಳಾಗಿ 45 ಜನ ಯುವಕರು, 25 ಜನ ಯುವತಿಯರು ಸೇರಿ ಒಟ್ಟು 70 ವಿದ್ಯಾರ್ಥಿಗಳು 10 ಕಿ. ಮೀ  ಗುಡ್ಡಗಾಡು  ಓಟದಲ್ಲಿ ಭಾಗವಹಿಸಿ  ಗಮನ ಸೆಳೆದರು. ಸ್ಪರ್ಧಾಳುಗಳಿಗೆ ಯಾವುದೇ ತೊಂದರೆ ಆಗದಂತೆ ಮುಂಜಾಗ್ರತಾ ಕ್ರಮವಾಗಿ  ಆಂಬುಲೆನ್ಸ್, ಕುಡಿಯುವ ನೀರು ಸೇರಿದಂತೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಯುನಿವರ್ಸಿಟಿ ವತಿಯಿಂದ ಒದಗಿಸಲಾಗಿತ್ತು.


ಬಳಿಕ ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೊ. ಟಿ.ಸಿ ತಾರಾನಾಥ್ ಮಾತನಾಡಿ, ಹೇಮ ಗಂಗೋತ್ರಿ ಎರಡನೇ ವರ್ಷ ಕಾರ್ಯಾರಂಭ ಮಾಡಿದ ಅವಧಿಯಲ್ಲಿ ವಿಧ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವದ ವಿಕಾಸನಕ್ಕಾಗಿ ಅವರನ್ನು ಶಾರೀರಿಕವಾಗಿ  ಸಧೃಡ ಗೋಳಿಸಲು ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸಲಾಗಿದೆ. ಈ ಸ್ಪರ್ಧೆಯಲ್ಲಿ ವಿಜೇತರಾದ 6 ಜನ ವಿದ್ಯಾರ್ಥಿಗಳನ್ನು ಅಂತರ್ ವಿಶ್ವ ವಿದ್ಯಾನಿಲಯ ಮಟ್ಟದ ಸ್ಪರ್ಧೆಗೆ ಕಳುಹಿಸಿ ಕೊಡಲಾಗುವುದು ಎಂದರು.

ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಹಾಲಪ್ಪ ಗಾಜೇರ ಅವರು ಮಾತನಾಡಿ, ವಿಶ್ವ ವಿದ್ಯಾನಿಲಯದಲ್ಲಿ ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸಬೇಕು ಎಂದು ಮನವಿ ಮಾಡಿದಾಗ ಕುಲ ಸಚಿವರಾದ ಜಗದೀಶ್ ಹಾಗೂ ಕುಲಪತಿಗಳಾದ ಪ್ರೊ. ಟಿ.ಸಿ ತಾರಾನಾಥ್ ಅವರು ಎಲ್ಲಾ ರೀತಿಯ ಸಹಕಾರ ನೀಡಿದ್ದಾರೆ. ಜೊತೆಗೆ ಕ್ರೀಡಾ ಚಟುವಟಿಕೆಗೆ ಅಗತ್ಯ ಇರುವ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಕೊಟ್ಟಿದ್ದಾರೆ ಎಂದರು.

ಈ ಹಿಂದೆ  ಕೂಡ ಅಂತರ್ ಕಾಲೇಜು ಕಬ್ಬಡಿ ಪಂದ್ಯಾವಳಿ ನಡೆಸಿ ಚೆನ್ನೈ ನಲ್ಲಿ ನಡೆದ ಅಂತರ್ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಅವರು ಭಾಗಿಯಾಗಿದ್ದಾರೆ. ಅದೇ ರೀತಿ ಗುಡ್ಡಗಾಡು ಓಟದಲ್ಲಿ ಕೂಡ ಗೆಲುವು ಸಾಧಿಸಿದ ವಿದ್ಯಾರ್ಥಿಗಳನ್ನು ಡಿ.11 ರಂದು ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ನಡೆಯಲಿರುವ  ಅಂತರ್ ವಿಶ್ವ ವಿದ್ಯಾನಿಲಯದ ಕ್ರೀಡಾಕೂಟಕ್ಕೆ ಕಳುಹಿಸುವ ಗುರಿ ಹೊಂದಿದ್ದೇವೆ ಎಂದರು.

ಈ ವೇಳೆ ಕ್ರೀಡಾಕೂಟದ ಸಂಘಟನಾ ಕಾರ್ಯದರ್ಶಿ ಚಂದ್ರ ನಾಯಕ್, ( ಕ್ರೀಡಾ ವಿಭಾಗ) ದೈಹಿಕ ಶಿಕ್ಷಣ ವಿಭಾಗದ ಸಂಯೋಜಕರು ಪವನ್, ಆಯ್ಕೆ ಸಮಿತಿ ಸದಸ್ಯ ಭಾಸ್ಕರ್  ಜೆ., ಯೋಗೇಶ್, ಹಾಗೂ ವಿವಿಧ ಕಾಲೇಜುಗಳ ದೈಹಿಕ ಶಿಕ್ಷಣ ವಿಭಾಗದ ಶಿಕ್ಷರು ಇದ್ದರು.

Post a Comment

Previous Post Next Post