ಹಾಸನ: ಹಿಂದೂ ಹಿತರಕ್ಷಣಾ ಪರಿಷತ್ ವತಿಯಿಂದ ಡಿ.೧೩ ರಂದು ನಗರದಲ್ಲಿ ಹನುಮ ಜಯಂತಿ ಉತ್ಸವ ಆಯೋಜಿಸಲಾಗಿದೆ ಎಂದು ಸಂಘಟನೆ ಅಧ್ಯಕ್ಷ ವಿಶಾಲ್ ಅಗರ್ವಾಲ್ ಹೇಳಿದರು.
ಇಂದು ಸುದ್ದಿಗೋಷ್ಟಿಯಲ್ಲಿ ಈ ವಿಷಯ ತಿಳಿಸಿದ ಅವರು, ನಮ್ಮ ಸಂಘಟನೆ ವತಿಯಿಂದ ಪ್ರಥಮ ಬಾರಿಗೆ ಹನುಮ ಜಯಂತಿ ಉತ್ಸವ ಆಯೋಜಿಸಿದ್ದು, ಅಂದು ಬೆಳಗ್ಗೆ ೯ ಗಂಟೆಗೆ ನಗರದ ಕುವೆಂಪು ವೃತ್ತದಲ್ಲಿ ಪೌರಕಾರ್ಮಿಕರಿಂದ ಶೋಭಾಯಾತ್ರೆಗೆ ಚಾಲನೆ ದೊರೆಯಲಿದೆ ಎಂದು ತಿಳಿಸಿದರು.
ಶೋಭಾಯಾತ್ರೆಯಲ್ಲಿ ಶ್ರೀ ಬಾಲ ರಾಮ ಹಾಗೂ ಶ್ರೀ ಹನುಮಂತ ಉತ್ಸವ ಮೂರ್ತಿ ಜೊತೆಗೆ ಸುಮಾರು ಒಂದು ಸಾವಿರ ಜನ ಸೇರುವ ನಿರೀಕ್ಷೆ ಇದೆ. ಇದೇ ವೇಳೆ ಕುವೆಂಪು ವೃತ್ತದಲ್ಲಿ ಸುಮಾರು ನಾಲ್ಕು ಸಾವಿರ ಮಂದಿಗೆ ಅನ್ನ ಸಂತರ್ಪಣೆ ಹಮ್ಮಿಕೊಳ್ಳಲಾಗಿದೆ. ಸಮಸ್ತ ಹಿಂದೂ ಬಾಂಧವರು ಶೋಭಾಯತ್ರೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಸುದ್ದಿಗೋಷ್ಟಿಯಲ್ಲಿ ಸಂಘಟನೆ ಉಪಾಧ್ಯಕ್ಷ ದಿಲೀಪ್ ಕುಮಾರ್, ಪ್ರಧಾನ ಕಾರ್ಯದರ್ಶಿ ಉಮೇಶ್, ಖಜಾಂಚಿ ಪವನ್, ಅಕ್ಷಯ್ ಮೋಹನ್ ಇದ್ದರು.
Tags
ಹಾಸನ