ಡಿ.14 ರಂದು ನಗರದಲ್ಲಿ ಟೈಮ್ಸ್ ಅಕಾಡೆಮಿ ಆರಂಭ

 ಹಾಸನ: ಟೈಮ್ಸ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ ವತಿಯಿಂದ ಹಾಸನದಲ್ಲಿ ಮೊದಲ ಬಾರಿಗೆ, ಟೈಮ್ಸ್ ಸ್ಪೋರ್ಟ್ಸ್ ಅಕಾಡೆಮಿ ಆರಂಭಿಸಲಾಗುತ್ತಿದೆ ಎಂದು ಸಂಸ್ಥೆಯ ಕಾರ್ಯದರ್ಶಿ  ಬಿ.ಕೆ.ಗಂಗಾಧರ್ ತಿಳಿಸಿದರು.

ಇಂದು ಸುದ್ದಿಗೋಷ್ಟಿಯಲ್ಲಿ ಈ ವಿಷಯ ತಿಳಿಸಿದ ಅವರು, ಕ್ರೀಡೆ ಕೇವಲ ಸ್ಪರ್ಧೆಯಲ್ಲಿ, ಸೌಹಾರ್ದತೆ, ಸ್ಥಿತಿ ಸ್ಥಾಪಕತ್ವ ಮತ್ತು ವೈಯಕ್ತಿಕ ಬೆಳವಣಿಗೆಗೆ ಸಂಬಂಧಿಸಿದೆ. ಕ್ರೀಡಾಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಆರೋಗ್ಯಕರ ಜೀವನ ಶೈಲಿಯನ್ನು ಕಾಪಾಡಿ ಕೊಳ್ಳಲು ಸಹಾಯ ಮಾಡುತ್ತದೆ ಮತುತ ಅರಿವಿನ ಸಾಮರ್ಥ್ಯಗಳನ್ನು ಹೆಚ್ಚಿಸುತ್ತದೆ. ಇದಲ್ಲದೆ ಇದು ಪರಿಶ್ರಮ, ಸಮರ್ಪಣೆ ಮತ್ತು ಕ್ರೀಡಾ ಮನೋಭಾವದಂತಹ ಮೌಲ್ಯಗಳನ್ನು ತುಂಬುತ್ತದೆ. ಇದನ್ನು ಇಂದಿನ ಮಕ್ಕಳು ಮತ್ತು ಪೋಷಕರಲ್ಲಿ ತುಂಬುದು ನಮ್ಮ ನೂತನ ಅಕಾಡೆಮಿಯ ಉದ್ದೇಶ ಎಂದರು.

ಶನಿವಾರ ಬೆಳಗ್ಗೆ ೮ ಗಂಟಗೆ ಟೈಮ್ಸ್ ಸ್ಪೋರ್ಟ್ಸ್ ಅಕಾಡೆಮಿ ಉದ್ಘಾಟನೆಯಾಗಲಿದೆ. ಇಂದಿನ ಬಹುತೇಕ ಪೋಷಕರು ಮಕ್ಕಳ ಮೇಲೆ ಶಿಕ್ಷಣದ ಒತ್ತಡ ಹೊರತಾಗಿ ಬೇರೆ ಯಾವುದೇ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಲಾರರು. ಹೀಗಾಗಿಯೇ ಚಿಕ್ಕ ವಯಸ್ಸಿನಲ್ಲೇ ಮಕ್ಕಳಲ್ಲಿ ಬಿಪಿ, ಒಬೆಸಿಟಿ ಮೊದಲಾದ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತಿವೆ. ಇದಕ್ಕೆ  ವಿದ್ಯಾರ್ಥಿಗಳು ಓದು ಹೊರತಾಗಿ ಬೇರಾವುದೇ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳದೇ ಇರುವುದು ಕಾರಣ ಎಂದರು.

ಈ ನಿಟ್ಟಿನಲ್ಲಿ ಕ್ರಿಕೆಟ್, ಬಾಸ್ಕೆಟ್‌ಬಾಲ್, ಫುಟ್‌ಬಾಲ್, ಖೋಖೋ, ವಾಲಿಬಾಲ್, ಕಬಡ್ಡಿ ಮೊದಲಾದ ಕ್ರೀಡೆಗಳ ಬಗ್ಗೆ ನಮ್ಮ ಸಂಸ್ಥೆಯ ತರಬೇತಿ ತರಗತಿಗಳು ಅನುಭವಿ ತರಬೇತುದಾರರ ನೇತೃತ್ವದಲ್ಲಿ ವೃತ್ತಿಪರ ಮಾರ್ಗದರ್ಶನ ಮತ್ತು ತರಬೇತಿ ನೀಡಲಾಗುವುದು ಎಂದು ಹೇಳಿದರು.

ಮಕ್ಕಳಿಗೆ ತರಬೇತಿ ನೀಡಿ ಅವರನ್ನು ಆಟಗಾರರನ್ನಾಗಿ ರೂಪಿಸುವುದು ನಮ್ಮ ಆಶಯ, ಸೋಮವಾರದಿಂದ ಶುಕ್ರವಾರದವರೆಗೆ ತರಗತಿ ಮುಗಿದ ನಂತರ ಸಂಜೆ ೪.೩೦ ರಿಂದ ೬.೩೦ರ ವರೆಗೆ, ಶನಿವಾರ ಸಂಜೆ ೪ ರಿಂದ ೬ ಗಂಟೆವರೆಗೆ ತರಬೇತಿ ನಡೆಯಲಿದೆ. 

ಇದಕ್ಕಾಗಿ ವಿಜಯನಗರದ ಟೈಮ್ಸ್ ಇಂಟರ್ ನ್ಯಾಷನಲ್ ಶಾಲಾ ಆವರಣದಲ್ಲಿ ಕ್ರೀಡಾಂಗಣವನ್ನೂ ಸಜ್ಜುಗೊಳಿಸಲಾಗಿದೆ ಎಂದ ಅವರು, ನಗರದಲ್ಲಿ ಜಿಲ್ಲಾ ಕ್ರೀಡಾಂಗಣ ಹೊರತು ಪಡಿಸಿ ಬೇರೆ ಎಲ್ಲದರೂ ಹೊಸದಾಗಿ ಕ್ರೀಡಾಂಗಣ ನಿರ್ಮಾಣ ಮಾಡುವಂತೆ ಜಿಲ್ಲಾಡಳಿತ, ಸರ್ಕಾರ ಯೊಚಿಸಬೇಕು ಎಂದು ಮನವಿ ಮಾಡಿದರು.

ಮಕ್ಕಳು ಓದಿನ ಜೊತೆಗೆ ಉತ್ತಮ ಫಿಟ್‌ನೆಸ್ ಕಾಪಾಡಿಕೊಳ್ಳಬೇಕು ಎಂಬುದು ನಮ್ಮ ಉತ್ತೇಶವಾಗಿದೆ. ಹೆಚ್ಚಿನ ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಬೇಕು. ನಿತ್ಯ ಪೋಷಕರೇ ಮಕ್ಕಳನ್ನು ಕರೆತಂದು ಬಿಡಬೇಕು, ಕರೆದುಕೊಂಡು ಹೋಗಬೇಕು ಎಂದರು.

ಭವಿಷ್ಯದಲ್ಲಿ ಒಂದು ಫುಟ್‌ಬಾಲ್ ಹಾಗೂ ಕ್ರಿಕೆಟ್ ತಂಡ ಕಟ್ಟಬೇಕು ಎಂಬುದು ನಮ್ಮ ಆಶಯ ಎಂದು ಹೇಳಿದರು. ಸುದ್ದಿಗೋಷ್ಟಿಯಲ್ಲಿ ತರಬೇತುದಾರರಾದ ವಿನಯ್, ದರ್ಶನ್, ಅರ್ಜುನ್, ರಮೇಶ್ ಇದ್ದರು.

Post a Comment

Previous Post Next Post