ಹಾಸನ: ಮುಡಾ ಹಗರಣದ ವಿಚಾರವಾಗಿ ಹೆಚ್ಚು ವಿಚಾರಣೆ ನಡೆಯುತ್ತಿದ್ದು, ಅದಕ್ಕಿಂತ ಬ್ರಹ್ಮಾಂಡ ಭ್ರಷ್ಠಾಚಾರದಂತಹ ಹಗರಣ ನಮ್ಮ ಜಿಲ್ಲೆಯಲ್ಲಿಯೂ ನಡೆದಿದೆ. ಜಿಲ್ಲೆಯ ಯಗಚಿ ವಾಟೆಹೊಳೆ ಮುಳುಗಡೆ ಸಂತ್ರಸ್ತರಿಗೆ ಮಂಜೂರಾಗಿ ಆಗಿರುವ ಜಮೀನಿನಲ್ಲಿ ಅವ್ಯವಹಾರ ನಿರಂತರವಾಗಿ ನಡೆದುಕೊಂಡು ಬರುತ್ತಿದೆ ಈ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪು ಮಾಡಿರುವವರ ವಿರುದ್ಧ ಕ್ರಮ ಜರುಗಿಸಬೇಕೆಂದು ಮಾಜಿ ಸಚಿವ ಬಿ. ಶಿವರಾಂ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಮುಡಾ ಬಗ್ಗೆ ಬಹಳ ಅಗಾದವಾಗಿ ವಿಚಾರಣೆ ನಡೆಯುತ್ತಿದ್ದು, ಅದಕ್ಕಿಂತ ಬ್ರಹ್ಮಾಂಡ ಭ್ರಷ್ಠಾಚಾರ ನಡೆದಿರುವುದು ನಮ್ಮ ಜಿಲ್ಲೆಯಲ್ಲಿಯೂ ಇದೆ. ಹೇಮಾವತಿ, ಯಗಚಿ ವಾಳೆಹೊಳೆ ಮುಳುಗಡೆ ಸಂತ್ರಸ್ತರಿಗೆ ಮಂಜೂರಾಗಿರುವ ಜಮೀನಿನಲ್ಲಿ ಅವ್ಯವಹಾರವು ನಿರಂತರವಾಗಿ ನಡೆದುಕೊಂಡು ಬಂದರೂ ಇಲ್ಲಿವರೆಗೂ ಯಾವ ಎಸ್.ಐ.ಟಿ. ತನಿಖೆ ಆಗಿಲ್ಲ. ಯಾವುದು ಆಗಿಲ್ಲ. ಒಂದರಲ್ಲದಾರೂ ಅಂತಿಮ ತೀರ್ಮಾನ ಕೈಗೊಂಡಿದ್ದಾರಾ ಎಂದು ಕಂದಾಯ ಸಚಿವರಿಗೆ ಪ್ರಶ್ನೆ ಮಾಡಿದರು. ೧೫೦೦ ರೆಕಾರ್ಡ್‌ನ್ನು ಇವರೆ ಘೋಷಣೆ ಮಾಡಿ ಇದುವೆಗೂ ಒಂದು ಕ್ರಮಕೈಗೊಂಡಿರುವುದಿಲ್ಲ. ೨೦೦೫ ರಿಂದ ೧೨೬೫ ಪ್ರಕರಣಗಳಲ್ಲಿ ನಾನಾ ಕಾರಭಣಗಳಿಗೆ ವಿಚಾರಣೆ ನಡೆಸಿ ಖಾತೆ ರದ್ದು ಪಡಿಸಿ ಸರಕಾರದ ಹೆಸರಿಗೆ ಇಡಲಾಗಿದೆ ಎಂದರು. ಇದರಲ್ಲಿ ಸರ್ಟಿಫಿಕೆಟ್ ಬೋಗಸ್ ಆಗಿದೆ. ಪಾಣಿ ರದ್ದಾಗಿದೆ. ಸಿಓಡಿ ತನಿಖೆ ಇನ್ನು ನಡೆಯುತ್ತಿದೆ. ಹಾಸನ ಜಿಲ್ಲೆಯಲ್ಲಿ ಹೇಮಾವತಿ, ಜಲನಯನ ಯೋಜನೆಗಾಗಿ ಒಟ್ಟು ೧೭೨ ಗ್ರಾಮಗಳು ಮುಳುಗಡೆಯಾಗಿ ೨೧,೦೦೮.೨೦ ಎಕರೆ ಪ್ರದೇಶ ಮುಳುಗಡೆಯಾಗಿದೆ.ಆದರೆ ಈ ವರೆಗೆ ಭೂಮಿ ಕಳೆದುಕೊಂಡ ಯಾರೊಬ್ಬ ವ್ಯಕ್ತಿಗೂ ಭೂಮಿ ಮಂಜೂರಾತಿ ಆಗಿಲ್ಲ, ಕೂಡಲೇ ನಿಗದಿತ ಅವಧಿಯ ಒಳಗಾಗಿ ಅರ್ಹ ಫಲಾನುಭವಿಗಳಿಗೆ ಭೂ ಮಂಜೂರಾತಿ ಆಗಬೇಕು ಎಂದು ಒತ್ತಾಯಿಸಿದರು ಈಗಾಗಲೇ ಒತ್ತುವರಿ ಮಾಡಿರುವ ಕಾಫಿ ಬೆಳಗೆಗಾರ ಜಮೀನನ್ನು ಬೆಳೆಗಾರರಿಗೆ ಯಾವ ರೀತಿ ಗೊತ್ತಿದೆ ಆಧಾರದಲ್ಲಿ ನೀಡಿದ್ದಾರೆಯೋ ಅದೇ ರೀತಿ ಕೃಷಿ ಬಳೆಗಾರರು ಒತ್ತುವರಿ ಮಾಡಿರುವ ಜಮೀನನ್ನು ಅವರಿಗೆ ಗುತ್ತಿಗೆ ಆಧಾರದಲ್ಲಿ ನೀಡಬೇಕು. ಈ ಬಗ್ಗೆ ಈ ಹಿಂದಿನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದೇನೆ. ಆದರೆ ಸರ್ಕಾರ ಕೃಷಿ ಬೆಳೆಗಾರರು ಹಾಗೂ ಕಾಫಿ ಬೆಳೆಗಾರರ ನಡುವೆ ತಾರತಮ್ಯ ಮಾಡುತ್ತಿರುವುದು ಸರಿಯಲ್ಲ ಎಂದು ಹೇಳಿದರು.
ಜಲ ನೈನ ಯೋಜನೆಗಳಿಗಾಗಿ ಭೂಮಿ ಕಳೆದುಕೊಂಡ ರೈತರಿಗೆ ಪರ್ಯಾಯ ಭೂಮಿ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಹಾಗೂ ಅಧಿಕಾರಿಗಳ ನಿರ್ಲಕ್ಷ ಸರಿಯಲ್ಲ. ಈಗಾಗಲೇ ಈ ವಿಚಾರದಲ್ಲಿ ದೊಡ್ಡ ಮಟ್ಟದ ಹಗರಣ ನಡೆದಿದ್ದು ಸರ್ಕಾರದ ಗಮನಕ್ಕೂ ಹೋಗಿದೆ. ಈ ಹಿಂದೆ ತನಿಖೆಯಾಗಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ತನಿಖೆ ಸಂಸ್ಥೆಗಳೇ ಆದೇಶ ನೀಡಿದ್ದರು ಈವರೆಗೂ ಯಾರೊಬ್ಬರ ಮೇಲೆಯೂ ಕ್ರಮ ಜರುಗಿಸಿಲ್ಲ ಎಂದರು. ಸರ್ಕಾರದ ನಿಯಮಾನುಸಾರ ಭೂಮಿ ಕಳೆದುಕೊಂಡ ರೈತರಿಗೆ ಪರ್ಯಾಯ ಭೂಮಿ ನೀಡಿ, ಅವರಿಗೆ ಬದುಕಲು ಅವಕಾಶ ಕೊಡಬೇಕು ಇನ್ನು ಕೆಲವರಿಗೆ ಭೂಮಿ ಸಿಕ್ಕರು ಅವರ ಹೆಸರಿಗೆ ಮಂಜೂರು ಮಾಡಿಕೊಡಲು ಇಲಾಖೆ ಅಧಿಕಾರಿಗಳು ಮೀನಾ ಮೇಷ ಎಣಿಸುತ್ತಿರುವುದು ಸರಿಯಲ್ಲ ಕೂಡಲೇ ಸಂಬಂಧಪಟ್ಟ ಸಚಿವರು ಈ ಬಗ್ಗೆ ಗಮನಹರಿಸಿ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದರು.
ಎತ್ತಿನಹೊಳೆ ಯೋಜನೆಯಲ್ಲಿ ಪರಿಹಾರ ವಿಳಂಬ ಕುರಿತು ಕಾಲುವೆಗೆ ಹಾರಿ ರೈತನು ಆತ್ಮಹತ್ಯೆ ಮಾಡಿಕೊಂಡಬಗ್ಗೆ ತಿಳಿದಿದ್ದು, ಈ ಬಗ್ಗೆ ಗಮನಸೆಳೆದು ಮೊದಲು ಪರಿಹಾರ ಕೊಡಿಸಿ ನಂತರ ಡ್ಯಾಮೇಜು ಹಣ ಕೂಡ ಕೊಡಿಸಲಾಗುವುದು. ಸ್ಥಳಕ್ಕೆ ಹೋಗಿ ಈ ವಿಚಾರವನ್ನು ಸರಕಾರದ ಮುಂದೆ ಇಡಲಾಗುವುದು ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಇತ್ತಿಚಿಗೆ ನಡೆದ ಜನಕಲ್ಯಾಣ ಸಮಾವೇಶ ಯಶಸ್ವಿಯಾಗಿ ನಡೆದಿದ್ದು, ಪಕ್ಷದ ಸಂಘಟನೆಗಾಗಿ ಮತ್ತು ವಿರೋಧ ಪಕ್ಷಕ್ಕೆ ಉತ್ತರಕ್ಕಾಗಿ ಈ ಸಮಾವೇಶ ನಡೆಸಲಾಗಿದೆ ಎಂದರು.